ಶಿರಹಟ್ಟಿ: ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ ಅವರ ಆದರ್ಶಗಳನ್ನು ಅಳವಡಿಸಿಕೋಳ್ಳೊಣ: ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ವಿಶ್ವನಾಥ

ಲೋಕದರ್ಶನ ವರದಿ

ಶಿರಹಟ್ಟಿ 15: ತಾಲೂಕಿನ ಯಳವತ್ತಿ ಗ್ರಾಮದಲ್ಲಿ ಭಾರತ ರತ್ನ, ಸಂವಿದಾನ ಶಿಲ್ಪಿ ಡಾ. ಬಾಬಾ ಸಾಹೇಬ ಭೀಮರಾವ್ ಅಂಬೇಡ್ಕರ್ ಅವರ 128ನೇ ಜಯಂತಿ ಕಾರ್ಯಕ್ರಮವನ್ನು ಅಂಬೇಡ್ಕರ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವುದರೊಂದಿಗೆ ಮಾಡಿ ದೀಪ ಬೇಳಗುವುದರ ಮೂಲಕ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ವಿಶ್ವನಾಥ ಕಪ್ಪತ್ತನವರ ಮಾತನಾಡುತ್ತಾ, ಡಾ. ಅಂಬೇಡ್ಕರ್ ಅವರು ಸ್ವತಃ ಒಬ್ಬ ದಲಿತ ವ್ಯಕ್ತಿಯಾದರೂ ಸಹ ಸಮಾಜದ ಉದ್ಧಾರಕ್ಕಾಗಿ ಸಮಾನತೆಯ ಸಮಾಜಕ್ಕಾಗಿ ತಮ್ಮ ಇಡೀ ಜೀವನವನ್ನೇ ಅಪರ್ಿಸಿ, ಭಾರತ ಸಂವಿಧಾನ ರಚಿಸಿ, ಭಾರತ ರತ್ನವನ್ನು ಪಡೆದ ಮಹಾನ ವ್ಯಕ್ತಿಯಾಗಿ, ದೇಶ ಕಂಡ ಅಪ್ರತಿಮ ನಾಯಕ ಹಾಗೂ ಚಿಂತಕರಾಗಿದ್ದರು. ಸರ್ವರಿಗೂ ಸಮಬಾಳು ಸಮಪಾಲು ತತ್ವದಲ್ಲಿ ಪ್ರಜಾಪ್ರಭುತ್ವದ ವಿಶೇಷ ಮಾನದಂಡವಾದ ಸಂವಿಧಾನ ರಚಿಸಿದ ಇವರು ಸರ್ವಕಾಲಕ್ಕು ಸರ್ವರಿಗೂ ಮಾದರಿಯಾಗಿದೆ ಎಂದು ನುಡಿದರು. ರಾಮಣ್ಣ ಡಂಬಳ, ತಿಪ್ಪಣ್ಣ ಕೊಂಚೀಗೇರಿ, ಸಂದೀಪ ಕಪ್ಪತ್ತನವರ, ಗುಂಡಪ್ಪಗೌಡ್ರ ಪಾಟೀಲ, ರಾಚನಗೌಡ ಅಜ್ಜನಗೌಡ್ರ, ಬಸವರಾಜ ಗೋದಿ ಉಪಸ್ಥಿತರಿದ್ದರು.