ಶಿರಗುಪ್ಪಿ: ಕಬ್ಬು ಬೆಳೆಗಾರರ ಬೃಹತ್ ಸಮಾವೇಶ

ಲೋಕದರ್ಶನ ವರದಿ

ಕಾಗವಾಡ 08: ಸಕ್ಕರೆ ಕಾರ್ಖಾನೆಗಳ ಆಧ್ಯಕ್ಷರು, ಮಾಲಿಕರು ಈ ಅಥವಾ ಅವರ ಮಕ್ಕಳು ಈ ವರೆಗೆ ಆತ್ಮಹತ್ಯೆ ಮಾಡಿಕೊಂಡಿದ ಎಲ್ಲಿ ಕೇಳಿದ್ದಿರಾ? ಆದರೆ, ರೈತರು ಕೃಷ್ಣಾ ನದಿ ಮಹಾಪೂರ ನೀರಿನಲ್ಲಿ ತನ್ನ ಜೀವನ ಕಳೆದಿಕೊಂಡಿತ್ತು. ಅನೇಕ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ.ರಾಜ್ಯದ ಆಡಳಿತ ನಡೆಸುವ ಆಡಳಿತ ಚುಕ್ಕಾಣಿ ಹಿಡಿಯುವ ರಾಜಕೀಯ ಮುಖಂಡರ ಮಾಲಿಕತ್ವದ ಕಾರ್ಖಾನೆಗಳಿದ್ದು. ಇವರಿಂದ ರೈತರ ಉದ್ಧಾರ ಸಾಧ್ಯವಿದೆ? ಎಂಬ ಕಳವಳ ಮಾಜಿ ರಾಜ್ಯ ಕಬ್ಬು ಅಧ್ಯಯನ ಸಮೀತಿಯ ಸದಸ್ಯ ಹಾಗೂ ಮಾಜಿ ಶಾಸಕ ಮೋಹನರಾವ್ ಶಹಾ ವ್ಯಕ್ತಪಡಿಸಿದರು.ಗುರುವಾರ ಸಂಜೆ ಕಾಗವಾಡ ತಾಲೂಕಿನ ಶಿರಗುಪ್ಪಿ ಗ್ರಾಮದಲ್ಲಿ ಕಬ್ಬು ಬೆಳೆಗಾರರ ಬೃಹತ್ ಸಭೆ ಹಮ್ಮಿಕೊಂಡಿದ್ದರು.

ಸಭೆಯಲ್ಲಿ ಕಬ್ಬು ಬೆಳೆಗಾರ ರೈತರ ಸಮಸ್ಯೆಗಳ ಬಗ್ಗೆ ಮಾತನಾಡಿದ ಮಾಜಿ ಶಾಸಕ ಮೋಹನರಾವ ಶಹಾ, ನೆರೆಯ ಮಹಾರಾಷ್ಟ್ರದ ಗಡಿಯಲ್ಲಿರುವ ಸಕ್ಕರೆ ಕಾರ್ಖಾನೆಗಳಿಗೂ ಹಾಗೂ ನಮ್ಮಲ್ಲಿಯ ಕಾರ್ಖಾನೆಗಳಿಗೂ ಪ್ರತಿ ಟನ್ ಕಬ್ಬಿಗೆ 350 ರಿಂದ 400 ರೂ.ವ್ಯತ್ಯಾಸವಾಗುತ್ತಿದೆ. ಅದಕ್ಕಾಗಿ ಸರ್ಕಾರ ಮಹಾರಾಷ್ಟ್ರದ ಮಾದರಿಯಲ್ಲಿ ದರ ಕೊಡಿಸುವುದಾದರೆ ಝೋನ್ ಬಂದು ಹಾಕುವುದಕ್ಕೆ ನಮ್ಮದೇನು ತಕರಾರ ಇಲ್ಲ. ಇಲ್ಲದಿದ್ದರೆ ಝೋನ ಬಂದಿಗೆ ರೈತರ ಸಂಪೂರ್ಣ ವಿರೋಧವಿದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು. ನಮ್ಮ ದೇಶದಲ್ಲಿಯೇ ರೈತರು ಲಕ್ಷಾಂತರ ಲೀಟರ್ ಹಾಲು ಉತ್ಪಾದಿಸುತ್ತಿರುವಾಗ ಪ್ರಧಾನಿ ನರೇಂದ್ರ ಮೋದಿಯವರು ವಿದೇಶದಿಂದ ಹಾಲು ಆಮದಮಾಡಿಕೊಳ್ಳುವ ಚಿಂತನೆ ನಡೆಸಿದ್ದಾರೆ. ಆದರೆ, ನಾವು ಬೆಳೆದ ಕಬ್ಬನ್ನು ಪಕ್ಕದ ರಾಜ್ಯಕ್ಕೆ ಕಳುಹಿಸಲು ಝೋನ್ ಬಂದಿ ನಿರ್ಬಂಧ ಹೇರುತ್ತಿರುವುದು ಇದ್ಯಾವ ನ್ಯಾಯ ಎಂದು ಪ್ರಶ್ನಿಸಿದರು.

ಕೇಂದ್ರ ಸರ್ಕಾರ ನಿಗದಿ ಮಾಡಿರುವ ಎಫ್.ಆರ್.ಪ್ ಪ್ರಕಾರದ ಬಿಲ್ನ್ನು ಕಬ್ಬು ಕಟಾವಾದ 15 ದಿನದೊಳಗಾಗಿ ಒಂದೇ ಕಂತಿನಲ್ಲಿ ನೀಡುವಂತೆ ಆಗ್ರಹಿಸಿದರು.

ಒಂದೇಡೆ ಬರಗಾಲ, ಇನ್ನೊಂದೆಡೆ ಪ್ರವಾಹದ ಬವಣೆಯಿಂದಾಗಿ ರೈತ ಸಮುದಾಯ ಆರ್ಥಿಕ ಸಂಕಷ್ಟದಲ್ಲಿದೆ. ಬಾಕಿ ಉಳಿಸಿಕೊಂಡಿರುವ ಕಾರ್ಖಾನೆಗಳು ಕೂಡಲೇ ಬಾಕಿ ಹಣವನ್ನು ರೈತರ ಖಾತೆಗೆ ಪಾವತಿಸಬೇಕು ಎಂದು ಒತ್ತಾಯಿಸಿದರು. ರೈತ ಮುಖಂಡರು, ನ್ಯಾಯವಾದಿ ಅಭಯ ಕುಮಾರ ಅಕಿವಾಟೆ ಮಾತನಾಡಿ, ರೈತರು ಭಿಕ್ಷುಕರಲ್ಲ. ಕಾರ್ಖಾನೆಗಳಿಗೆ ಕಬ್ಬುಕೊಟ್ಟಿದ್ದೇವೆ. ಬಿಲ್ ಕೇಳುತ್ತಿದ್ದೇವೆ. ಕಬ್ಬುಕೊಟ್ಟು ವರ್ಷಗತಿ ಸುತ್ತಬಂದರೂ ಇನ್ನುವರೆಗೆ ಕೆಲ ಸಕ್ಕರೆ ಕಾರ್ಖಾನೆಗಳೂ ಬಾಕಿ ಹಣ ನೀಡಿಲ್ಲ. ನಿಮ್ಮ ಮೊಂಡತನ ಬೀಡಿ, ನಮಗೆ ಬರಬೇಕಾದ ಬಾಕಿ ಹಣ ನೀಡಿ. ಇಲ್ಲದಿದ್ದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಗೆ ನೀಡಿದರು.

ವಿವಿಧ ಬೇಡಿಕೆ ಈಡೇಯರಿಕೆಗಾಗಿ ರೈತರ ಸಭೆಯಲ್ಲಿ ನಿರ್ಣಯ:

ಕಳೇದ ಹಂಗಾಮಿನಲ್ಲಿ ಕಾರ್ಖಾನೆಗಳಿಗೆ ಕಬ್ಬು ಪೂರೈಸಿದ ರೈತರಿಗೆ ಕೇಂದ್ರ ಸರ್ಕಾರ ನಿಗದಿಪಡಿಸಿರುವ ಎಫ್ಆರ್ಪಿ ಪ್ರಕಾರ ಇನ್ನೂ ಕೆಲ ಕಾರ್ಖಾನೆಗಳು ಬಿಲ್ ನೀಡಿಲ್ಲ. ಆ ಹಣವನ್ನು ರೈತರ ಖಾತೆಗೆ ಜಮಾಗೊಳಿಸಬೇಕು. ಸನ್2019-20ನೇ (ಪ್ರಸಕ್ತ) ಸಾಲಿಗೆ ಎಫ್ಆರ್ಪಿ ಪ್ರಕಾರ ಒಂದೇ ಕಂತಿನಲ್ಲಿ ಕಬ್ಬು ನುರಿಸಿದ 15 ದಿನದೊಳಗಾಗಿ ಬಿಲ್ ನೀಡಬೇಕು. ಸರ್ಕಾರ ನಿರ್ಬಂಧ ಹೇರಿರುವ ಝೋನ್ ಬಂದಿಯನ್ನು ತೆಗೆಯಬೇಕು. ಕಾರ್ಖಾನೆಗಳಲ್ಲಿ ತೂಕ್ ಮತ್ತು ರಿಕವರಿ ಪಾರದರ್ಶಕವಾಗಿರಬೇಕು ಮತ್ತು ಪ್ರವಾಹದಲ್ಲಿ ಮುಳುಗಡೆಯಾಗಿರುವ ಕಬ್ಬನ್ನು ಯಾವುದೇ ಕಡಿತವಿಲ್ಲದೇ ನುರಿಸಬೇಕು. ರೈತರ ಈ ಎಲ್ಲ ನಿಬಂಧನೆಗಳನ್ನು ಒಪ್ಪಿಕೊಂಡೇ ಸಕ್ಕರೆ ಕಾರ್ಖಾನೆಗಳನ್ನು ಪ್ರಾರಂಭಿಸಬೇಕು. ಇಲ್ಲದಿದ್ದರೆ ಕಾರ್ಖಾನೆಗಳನ್ನು ಪ್ರಾರಂಭಿಸಲು ಬಿಡುವುದಿಲ್ಲ ಎಂಬ ನಿರ್ಣಯ ಕೈಗೊಂಡರು.

ರೈತರ ಸಭೆಯಲ್ಲಿ ಕಾಗವಾಡದ ಯುವ ರೈತ ಮುಖಂಡ ಶಶೀಕಾಂತ ಜೋಶಿ, ಕಳೇದ ಒಂದು ವರ್ಷದಿಂದ ಕಬ್ಬಿನ ದರಕ್ಕಾಗಿ ರಾಜ್ಯಮಟ್ಟದಲ್ಲಿ ಹೋರಾಡಿದ ಬಗ್ಗೆ ವಿವಿರವಾಗಿ ಮಾಹಿತಿ ನೀಡಿ, ಸಕ್ಕರೆ ಆಯುಕ್ತರು ಯಾವ ರೀತಿ ರಾಜ್ಯದ ಶಾಸಕರು, ಸಚಿವರು ದಬ್ಬಾಳಿಕೆಯಿಂದ ತೊಂದರೆ ನೀಡಿದ್ದ ಬಗ್ಗೆ ಹೇಳಿದರು.ಐನಾಪೂರ ರೈತ ಹಿತ ರಕ್ಷಣಾ ಸಮೀತಿಯ ಆಧ್ಯಕ್ಷ ರವೀಂದ್ರ ಗಾಣಿಗೇರ ಮಾತನಾಡಿ, ಕಳೇದ ವರ್ಷ ಕೈಗೊಂಡ ಹೋರಾಟಕ್ಕೆ ಆಗೀಣ ಮುಖ್ಯಮಂತ್ರಿ ಕುಮಾರಸ್ವಾಮಿ ಸ್ಪಂದಿಸಿದರು. ಸಕ್ಕರೆ ಲಾಬಿ ನಿರ್ಮಿಸಿದ ರಾಜಕೀಯ ಮುಖಂಡರಿಂದ ನಮ್ಮ ಸಮಸ್ಯೆಗಳು ಈಡೆಯರಿಸಲಿಲ್ಲಾ ಎಂದು ಸ್ಪಷ್ಠಪಡಿಸಿದರು. ಶಿರಗುಪ್ಪಿಯಲ್ಲಿ ರೈತರ ಸಮಾವೇಶ  ಹಮ್ಮಿಕೊಳ್ಳಲು ಪ್ರಯತ್ನಸಿದ ರೈತ ಮುಖಂಡ ಸುರೇಶ ಚೌಗಲಾ, ನ್ಯಾಯವಾದಿ ರಾಜೇಂದ್ರ ಪೋತದಾರ, ಆದಿನಾಥ ಹೇಮಗಿರೆ, ವಿಜಯ ಕುಮಾರ ಅಕಿವಾಟೆ, ರಾಜೇಂದ್ರ ಚೌಗಲಾ, ಈರಗೌಡಾ ಪಾಟೀಲ, ರಾಮಗೌಡಾ ಪಾಟೀಲ, ಆದಿನಾಥ ದಾನೋಳಿ, ಬಾಹುಬಲಿ ಕುಸನಾಳೆ, ಪ್ರಕಾಶ ಪಾಟೀಲ, ಇಕ್ಬಾಲ್ ಕನವಾಡೆ, ಸೇರಿದಂತೆ ಕನರ್ಾಟಕಹಾಗೂ ಮಹಾರಾಷ್ಟ್ರದ ಹಲವಾರು ರೈತ ಮುಖಂಡರು ಉಪಸ್ಥಿತರಿದ್ದರು.