ಜಾಗೃತಿ ಕ್ಯಾಂಪೇನ್ಗೆ ಜಿಲ್ಲಾಧಿಕಾರಿ ಚಾಲನೆ

ಬಾಗಲಕೋಟೆ: ಸಿಲೆಂಡರ್ ವಿತರಿಸುವ ಪೂರ್ವದಲ್ಲಿ ತಪಾಸಣೆ ಕುರಿತಂತೆ ಜಿಲ್ಲೆಯಾದ್ಯಂತ ಹಮ್ಮಿಕೊಂಡ ಜಾಗೃತಿ ಕ್ಯಾಂಪೇನ್ಗೆ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಚಾಲನೆ ನೀಡಿದರು.

ಜಿಲ್ಲಾಡಳಿತ ಭವನದ ಮುಖ್ಯ ದ್ವಾರದಲ್ಲಿ ಬುಧವಾರ ಬೆಳಗಾವಿ ಇಂಡಿಯನ್ ಆಯಿಲ್ ಕಾಪರ್ೋರೇಶನ್ ಕ್ಷೇತ್ರೀಯ ಕಾಯರ್ಾಲಯ ಹಮ್ಮಿಕೊಂಡ ಕ್ಯಾಂಪೆನ್ ವಾಹನಕ್ಕೆ ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ಇಂಡಿಯನ್ ಆಯಿಲ್ ಕಾಪರ್ೋರೇಶನ್ನ ಚೀಪ್ ಏರಿಯಾ ಮ್ಯಾನೇಜರರ ವಿ.ರಮೇಶ ಬಾಬು ಅವರು ಸಿಲೆಂಡರ ಮನೆಯಲ್ಲಿ ಅಳವಡಿಸುವ ಮುನ್ನ ಗ್ರಾಹಕರಿಗೆ ಸುರಕ್ಷತೆ ಮತ್ತು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವ ವಿಧಾನಗಳ ಬಗ್ಗೆ ಸವಿವರವಾಗಿ ತಿಳಿಸಿಕೊಟ್ಟರು.

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿದರ್ೇಶಕ ಶ್ರೀಶೈಲ ಕಂಕಣವಾಡಿ ಮಾತನಾಡಿ ಅನಿಲ ವಿತರಕರು ಗ್ರಾಹಕರಿಂದ ಅಳವಡಿಸುವ ವೆಚ್ಚ, ಸಾಗಾಣಿಕೆ ವೆಚ್ಚ ಹಾಗೂ ಇತರೆ ವೆಚ್ಚಗಳಿಗಾಗಿ ಸಕರ್ಾರ ನಿಗದಿಪಡಿಸಿದ ದರಕ್ಕಿಂತ ಹೆಚ್ಚಿನ ಹಣವನ್ನು ಗ್ರಾಹಕರಿಂದ ಪಡೆಯುವಂತಿಲ್ಲ ಎಂದು ತಿಳಿಸಿದರು. ಈ ಕ್ಯಾಂಪೆನ್ ಅಕ್ಟೋಬರ 30 ವರೆಗೆ ನಡೆಯಲಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಲು ಕೋರಿದರು. ಕಾರ್ಯಕ್ರಮದಲ್ಲಿ ಇಂಡೇನ್ ಗ್ಯಾಸ್ ವಿತರಕರು, ಡೆಲವರಿ ಬಾಯ್ಸ್, ಸಿಬ್ಬಂದಿ ವರ್ಗದವರು ಸೇರಿದಂತೆ ಗ್ರಾಹಕರು ಪಾಲ್ಗೊಂಡಿದ್ದರು.