ಸೆಪ್ಟೆಂಬರ್ 21 ರಿಂದ ಶ್ರೀರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿ ಶರನ್ನವರಾತ್ರಿ ಉತ್ಸವ

ಸೆಪ್ಟೆಂಬರ್ 21 ರಿಂದ ಶ್ರೀರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿ ಶರನ್ನವರಾತ್ರಿ ಉತ್ಸವ  Sharannavaratri festival at Sri Ramakrishna Vivekananda Ashram from September 21

ಗದಗ 22:  ನಗರದ ಶ್ರೀರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿ ಸೆಪ್ಟೆಂಬರ್ 21 ರಿಂದ ಅಕ್ಟೋಬರ್ 2 ರವರಿಗೆ ಶರನ್ನವರಾತ್ರಿ ಉತ್ಸವವನ್ನು ಹಮ್ಮಿಕೊಳ್ಳಲಾಗಿದೆ.  

ನಗರದ ಎಪಿಎಂಸಿ ಪ್ರಾಂಗಣದಲ್ಲಿರುವ ಶ್ರೀರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿ ಇದೇ ಸೆಪ್ಟಂಬರ್ 21 ರಿಂದ ಅಕ್ಟೋಬರ್ 2 ಅವರಿಗೆ ಶರನ್ನವರಾತ್ರಿ ಉತ್ಸವವನ್ನು ಶೃದ್ದಾಭಕ್ತಿಯಿಂದ ಆಚರಿಸಲಾಗುತ್ತದೆ. ಪ್ರತಿನಿತ್ಯ ದುರ್ಗಾ ಪೂಜೆ ವಿಶೇಷವಾದ ಹೋಮಗಳನ್ನು ಆಯೋಜನೆ ಮಾಡಲಾಗಿದೆ. ಈ ಪವಿತ್ರ ಕಾರ್ಯಕ್ರಮದಲ್ಲಿ ಎಲ್ಲರೂ ಶ್ರದ್ಧಾಭಕ್ತಿಗಳೊಂದಿಗೆ ಭಾಗವಹಿಸಿ ಜಗನ್ಮಾತೆ ವಿಶೇಷ ಕೃಪೆಗೆ ಪಾತ್ರರಾಗಬೇಕೆಂದು ಸ್ವಾಮಿ ನಿರ್ಭಯಾನಂದ ಸರಸ್ವತಿ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ. 

ಸೆ.23 ರಂದು ಮಂಗಳವಾರ ಸಂಜೆ 7.30 ಗಂಟೆಗೆ ಮಾದಿಹಳ್ಳಿ ಶ್ರೀ ರಾಮಕೃಷ್ಣ ಮಠದ  ಸ್ವಾಮಿ ಧರ್ಮವೃತಾನಂದ ಶ್ರೀಗಳು ದೇವಿ ಆರಾಧನೆ ಮಹತ್ವ ಕುರಿತು ಉಪನ್ಯಾಸ ನೀಡುವರು.  

ಈ ಎಲ್ಲ ಕಾರ್ಯಕ್ರಮಗಳಿಗೆ ಸಹಕಾರ ನೀಡಿ ಶ್ರೀದೇವಿಯ ಕೃಪೆಗೆ ಪಾತ್ರರಾಗಬೇಕೆಂದು ಪೂಜ್ಯಶ್ರೀ ಸ್ವಾಮಿ ನಿರ್ಭಯಾನಂದ ಸರಸ್ವತಿ ಸ್ವಾಮಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.