ಇನ್ನರ್ ವೀಲ್ ಕ್ಲಬ್ ಕೊಪ್ಪಳ ಜಿಲ್ಲಾ ಐಎಸ್‌ಓ ಯಾಗಿ ಶರಣಮ್ಮ ಪಾಟೀಲ್ ಆಯ್ಕೆ
Sharanamma Patil selected as Inner Wheel Club Koppal District ISO
ಇನ್ನರ್ ವೀಲ್ ಕ್ಲಬ್ ಕೊಪ್ಪಳ ಜಿಲ್ಲಾ ಐಎಸ್‌ಓ ಯಾಗಿ ಶರಣಮ್ಮ ಪಾಟೀಲ್ ಆಯ್ಕೆ
ಕೊಪ್ಪಳ 30 : ಸಮಾಜ ಸೇವಾ ಕಾರ್ಯದಲ್ಲಿ ಸಂಪೂರ್ಣವಾಗಿ ತೊಡಗಿಕೊಂಡಿರುವ ಪ್ರತಿಷ್ಠಿತ ಅಂತರರಾಷ್ಟ್ರೀಯ ಸಂಸ್ಥೆಯಾಗಿರುವ ಇನ್ನರ್ ವೀಲ್ ಕ್ಲಬ್ ನ ಕೊಪ್ಪಳ ಜಿಲ್ಲಾ ಘಟಕಕ್ಕೆ ಜಿಲ್ಲಾ ಐಎಸ್‌ಒ ಯಾಗಿ ಕೊಪ್ಪಳದ ಪ್ರತಿಭಾ ವಂತ ಮಹಿಳೆ ಶ್ರೀಮತಿ ಶರಣಮ್ಮ ಪಾಟೀಲ್ ಆಯ್ಕೆಗೊಂಡಿದ್ದಾರೆ, ತಿರುಪತಿಯಲ್ಲಿ ಜರುಗಿದ ಇನ್ನರ್ ವೀಲ್ ಕ್ಲಬ್ ರಾಜ್ಯಮಟ್ಟದ ಸಮಾವೇಶದ ಸಂದರ್ಭದಲ್ಲಿ ಕೊಪ್ಪಳ ಜಿಲ್ಲಾ ಐ ಎಸ್ ಓ ಸ್ಥಾನಕ್ಕೆ ಜರುಗಿದ ಚುನಾವಣೆಯಲ್ಲಿ ಶರಣಮ್ಮ ಪಾಟೀಲ್ ಸ್ಪರ್ಧಿಸಿ ಜಯ ಸಾಧಿಸಿದ್ದಾರೆ ಎಂದು ಚುನಾವಣೆ ಪ್ರಕ್ರಿಯೆ ಸಂದರ್ಭದಲ್ಲಿ ಉಪಸ್ಥಿತರಿದ್ದ ಕೊಪ್ಪಳ ಇನ್ನರ್ ವೀಲ್ ಕ್ಲಬ್ ಅಧ್ಯಕ್ಷರಾದ ಉಮಾ ಮಹೇಶ್ ತಂಬ್ರಳ್ಳಿ ತಿಳಿಸಿದ್ದಾರೆ, ಹಾಗೂ ಜಿಲ್ಲಾ ಐಎಸ್‌ಒ ಯಾಗಿ ಶರಣಮ್ಮಾ ಪಾಟೀಲ್ ರವರು ಜಯ ಸಾಧಿಸಿರುವದಕ್ಕೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿ ಅವರ ಆಯ್ಕೆ ನಮ್ಮ ಕ್ಲಬ್ ಗೆ ಹೆಮ್ಮೆಯ ವಿಷಯ ವಾಗಿದೆ ಎಂದು ನೂತನವಾಗಿ ಆಯ್ಕೆಗೊಂಡ ಆವರಿಗೆ ಅಭಿನಂದಿಸಿ ಶುಭ ಕೋರಿದ್ದಾರೆ, ಶರಣಮ್ಮ ಪಾಟೀಲ್ ರವರು ಈ ಹಿಂದೆ ಕೊಪ್ಪಳ ಇನ್ನರ್ ವೀಲ್ ಕ್ಲಬ್ ಅಧ್ಯಕ್ಷರಾಗಿ ಉತ್ತಮ ಸೇವೆ ಸಲ್ಲಿಸಿದ್ದು ಈಗ ಜಿಲ್ಲಾ ಮಟ್ಟದಲ್ಲಿ ಕ್ಲಬ್ಬಿನ ಐ ಎಸ್ ಓ ಯಾಗಿ ಆಯ್ಕೆಗೊಂಡಿದ್ದು ಇನ್ನಷ್ಟು ಉತ್ತಮ ಸೇವೆ ಇವರಿಂದ ದೊರಕಲಿ ನಮ್ಮ ಜಿಲ್ಲೆಯ ಹೆಸರಿಗೆ ಕೀರ್ತಿ ತರುವಂತಾಗಲಿ ಎಂದು ಉಮಾ ಮಹೇಶ್ ತಂಬ್ರಹಳ್ಳಿ ತಮ್ಮ ಆಶಯ ವ್ಯಕ್ತಪಡಿಸಿದ್ದಾರೆ
ಅನೆಕಲ್ಲು, ಮಳೆ ಅಬ್ಬರಕ್ಕೆ 39 ಕುರಿಗಳ ಸಾವು : ಬೀದಿಗೆ ಬಂತು ಬಡವನ ಬದುಕು
ಮಳೆಯ ಅವಾಂತರ : ನದಿಯಂತಾದ ರಾಷ್ಟ್ರೀಯ ಹೆದ್ದಾರಿ, ವಾಹನಗಳು ಸಿಲುಕಿ ಪರದಾಡಿದ ಪ್ರಯಾಣಿಕರು
ಬೆಳಗಾವಿಯಲ್ಲಿ ಆನೆಕಲ್ಲು ಮಿಶ್ರಿತ ಗಾಳಿ ಮಳೆಯ ಅರ್ಭಟಕ್ಕೆ ಜನಜೀವನ ಅಸ್ತವ್ಯಸ್ತ
ಹಣ ದ್ವಿಗುಣ ಹೆಸರಲ್ಲಿ ಜನರಿಗೆ ವಂಚಿಸುತ್ತಿದ್ದ ಅಂತರಾಜ್ಯ ಖದೀಮರ ಬಂಧನ : ಗೋಕಾಕ ಪೊಲೀಸರ ಕಾರ್ಯಕ್ಕೆ ಎಸ್ ಪಿ ಶ್ಲಾಘನೆ
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ 