ಶರಣ ಮುತ್ಯಾರವರ ಜಾತ್ರಾ ಮಹೋತ್ಸವ ಸಂಪನ್ನ

ಶರಣ ಮುತ್ಯಾರವರ ಜಾತ್ರಾ ಮಹೋತ್ಸವ ಸಂಪನ್ನ Sharan Mutya's festival is complete

ತಾಳಿಕೋಟೆ 09: ಪಟ್ಟಣದ ಆರಾದ್ಯ ದೈವವೆನ್ನಿಸಿರುವ ಸ್ಥಳೀಯ ಸದ್ಗುರು ಸಾಂಭಪ್ರಭು ಶರಣಮುತ್ಯಾರವರ ಜಾತ್ರಾ ಮಹೋತ್ಸವದಂಗವಾಗಿ ಭವ್ಯ ರಥೋತ್ಸವವು ಭಾನುವಾರ ಭಕ್ತಿ, ಶ್ರದ್ಧೆ, ಸಂಭ್ರಮಗಳಿಂದ ಭಾನುವಾರ ಸಂಜೆ ನೆರವೇರಿತು.  ತನ್ನಿಮಿತ್ತ ಬೆಳಿಗ್ಗೆ ಪಲ್ಲಕ್ಕಿ ಉತ್ಸವದ ಮೆರವಣಿಗೆಯು ಪುರವಂತರ ಸೇವೆಯೊಂದಿಗೆ ಸಾಂಭಪ್ರಭು ಶರಣರ ಮಠದಿಂದ ಪಟ್ಟಣದ ಪ್ರಮುಖ ಬೀದಿಗಳ ಮೂಲಕ ಸಾಂಭಪ್ರಭು ದೇವಸ್ಥಾನವನ್ನು ತಲುಪಿತು. ಉತ್ಸವದಲ್ಲಿ ಛತ್ರಿ ಚಾಮರ, ಭಕ್ತ ಜನರ ಭಜನೆ, ಭಾಜಾ ಭಜಂತ್ರಿ ನಡೆದವು.ಪಲ್ಲಕ್ಕಿ ಉತ್ಸವವು ದೇವಸ್ಥಾನ ತಲುಪಿ ದೇವಸ್ಥಾನ ಪಂಚಪ್ರದಕ್ಷಿಣೆ ಹಾಕಿ ಕರ್ತೃ ಗದ್ದುಗೆಗೆ ವಿಧ್ಯುಕ್ತವಾಗಿ ಪೂಜೆ ಸಲ್ಲಿಸಲಾಯಿತು. ಬೆಳಿಗ್ಗೆಯಿಂದಲೇ ಭಕ್ತಾದಿಗಳು ದೇವರಿಗೆ ನೈವೇದ್ಯ, ಕಾಯಿ, ಕಪೂರ ಅರ​‍್ಿಸಿದರು. ರಥೋತ್ಸವದಲ್ಲಿ ನೇತೃತ್ವವನ್ನು ವಹಿಸಿದ್ದ ಸಾಂಭಪ್ರಭು ಶರಣರಮಠದ ಬಸಣ್ಣನವರು ಶರಣರು ಹಾಗೂ ಶರಣಪ್ಪನವರು ಶರಣರು, ಅವರ ಪರಿವಾರದವರು ಹಾಗೂ ಭಕ್ತಾದಿಗಳ ಸಮ್ಮುಖದಲ್ಲಿ ರಥಕ್ಕೆ ಪೂಜಾ ವಿಧಾನಗಳು ಮುಗಿದು ಪಲ್ಲಕ್ಕಿ ಪಂಚ ಪ್ರದಕ್ಷಿಣದ ನಂತರ ಭಕ್ತಾದಿಗಳ ಹರ್ಷೋದ್ಘಾರದ ಮಧ್ಯೆ ರಥೋತ್ಸವ ಜರುಗಿತು. ಪೊಲೀಸ್ ಇಲಾಖೆಯಿಂದ ಸೂಕ್ತ ಬಂದೋಬಸ್ತ ವ್ಯವಸ್ಥೆ ಮಾಡಲಾಗಿತ್ತು.