ಔರಂಗಾಬಾದ್, ಫೆ 5, ಎನ್ ಸಿ ಪಿ ಪರಮೋಚ್ಛ ನಾಯಕ, ಮಾಜಿ ಕೇಂದ್ರ ಸಚಿವ ಶರದ್ ಪವಾರ್ ಅವರಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಮರಾಠಾವಾಡ ( ಬಿಎಎಂಯು) ವಿಶ್ವವಿದ್ಯಾಲಯ ಆಡಳಿತ ಮಂಡಳಿ ಸದಸ್ಯರು ನಿರ್ಧರಿಸಿದ್ದಾರೆ. ವಿಶ್ವವಿದ್ಯಾಲಯದ ಕುಲಪತಿ ಡಾ. ಪ್ರಮೋದ್ ಯಿಯೋಲೆ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಆಡಳಿತ ಮಂಡಳಿ ಸಭೆಯಲ್ಲಿ, ಸದಸ್ಯ ಡಾ. ನರೇಂದ್ರ ಕಾಳೆ ಮಂಡಿಸಿದ ಪ್ರಸ್ತಾವನೆಗೆ ಒಮ್ಮತದ ಅನುಮೋದನೆ ನೀಡಲಾಯಿತು.ಮಾರ್ಚ್ 13 ರಂದು ನಡೆಯಲಿರುವ ವಿಶ್ವವಿದ್ಯಾಲಯದ ಸೆನೆಟ್ ಸದಸ್ಯರ ಮುಂದೆ ಪ್ರಸ್ತಾವನೆ ಇರಿಸಲಾಗುತ್ತದೆ. ಸೆನೆಟ್ ಅನುಮೋದನೆ ನೀಡಿದ ನಂತರ ಪ್ರಸ್ತಾವನೆಯನ್ನು ಅಂತಿಮ ಅನುಮೋದನೆಗಾಗಿ ರಾಜ್ಯದ ವಿಶ್ವವಿದ್ಯಾಲಯಗಳ ಕಲಾಧಿಪತಿಗಳಾಗಿರುವ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಅವರಿಗೆ ರವಾನಿಸಲಾಗುವುದು ಎಂದು ವಿವಿ ಮೂಲಗಳು ಹೇಳಿವೆ.