ಶಾಂತವೀರ ಪಟ್ಟಾಧ್ಯಕ್ಷರ 45ನೇ ಪುಣ್ಯ ಸ್ಮರಣೋತ್ಸವ

Shantaveera Pattadhyaksha's 45th Punya Samranotsava

ಶಾಂತವೀರ ಪಟ್ಟಾಧ್ಯಕ್ಷರ 45ನೇ ಪುಣ್ಯ ಸ್ಮರಣೋತ್ಸವ

ಹಾವೇರಿ 24 : ನಗರದ ಶ್ರೀ ಸಿಂಧಗಿಮಠದ ಪರಮಪೂಜ್ಯ ಲಿಂಗೈಕ್ಯ ಶಾಂತವೀರ ಪಟ್ಟಾಧ್ಯಕ್ಷರ 45ನೇ ಪುಣ್ಯ ಸ್ಮರಣೋತ್ಸವಕ್ಕೆ   ಹುಕ್ಕೇರಿಮಠದ ಸದಾಶಿವ ಮಹಾಸ್ವಾಮಿಗಳು ದೀಪ ಬೆಳಗುವುದರ ಮೂಲಕ ಚಾಲನೆ ನೀಡಿದರು.  ಅನ್ನ ಅರಿವು ಆಶ್ರಯಗಳ ಮೂಲಕ ವಿದ್ಯಾರ್ಥಿಗಳ ಬೆಳಕು ಚೆಲ್ಲಿದ ಪುಣ್ಯ ಪುರುಷರು ಶ್ರೀ ಶಾಂತವೀರ ಪಟ್ಟಾಧ್ಯಕ್ಷರು.ಅಜ್ಞಾನಾಂಧಕಾರದಲ್ಲಿದ್ದ ಭಕ್ತ ಬಂಧುಗಳ ಬದುಕಿಗೆ ಸಂಸ್ಕೃತಿ ಸಂಸ್ಕಾರಗಳ ಪೂರ್ಣವಾಗಿ ಉಣಬಡಿಸಿ ಜ್ಞಾನ ತೇಜದ ಪೂರ್ಣ ಕುಂಭದ ಕಳಶವನ್ನಿಟ್ಟ ಪುಣ್ಯದ ಪುತ್ತಳಿ ಶ್ರೀ ಶಾಂತವೀರ ಗುರುಗಳು.ಇಂತಪ್ಪ ಪುಣ್ಯ ಕ್ಷೇತ್ರಗಳಲ್ಲಿ ಮಂತ್ರ ನೀನಾದ ಮೂಡಿಸುತ್ತ ಕ್ಷೇತ್ರಗಳಿಗೆ ಜೀವ ಚೈತನ್ಯವನ್ನು ತುಂಬುವ ವೈದಿಕರನ್ನು ಪುರೋಹಿತರನ್ನು ಶಾಸ್ತ್ರಕೋವಿದರನ್ನು ತಯಾರು ಮಾಡಿ ಯಾಲಕ್ಕಿ ಕಂಪಿನ ಕೀರ್ತಿಯನ್ನು ದಿಗ್ ದೇಶೆಗೆ ಪಸರಿಸಿದ ಕೀರ್ತಿ ಸಿಂದಗಿ ಶಾಂತವೀರ ಪಟ್ಟಾಧ್ಯಕ್ಷರಿಗೆ ಸಲ್ಲುತ್ತದೆ. ಪೂಜ್ಯರಾದ ನೆನಪು ಉದಯ ಮರೆಹು ಅಸ್ತಮಾನ ಎಂದು ಹೇಳಿದರು.   ಬೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಮಹಾಸ್ವಾಮಿಗಳು, ಹೊತ್ತನಹಳ್ಳಿ ಸಿಂದಗಿ ಮಠದ ಶಂಭುಲಿಂಗ ಪಟ್ಟಾಧ್ಯಕ್ಷರು,ಪ್ರತಿದಿನ ಶರಣರ ಜೀವನ ದರ್ಶನ ಪ್ರವಚನ ನೀಡಲು ಆಗಮಿಸಿದ ಶೇಗುಣಸಿ ವಿರಕ್ತಮಠದ ಡಾ. ಮಹಾಂತ ಪ್ರಭು ಮಹಾಸ್ವಾಮಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.        ಗದುಗಿನ ವಿರೇಶ್ವರ ಪುಣ್ಯಶ್ರಮದ ಸಂಗಮೇಶ್ ಪಾಟೀಲ್ ಸಂಗೀತ ಸೇವೆ ನೀಡಿದರು.ತೋಟೇಂದ್ರ ಕುಮಾರ್ ಕರಡಗಲ್ ತಬಲಾ ಹಾಗೂ ಷಣ್ಮುಖಯ್ಯ ಹಿರೇಮಠ ವಾಯ್ಲಿನ್ ಸಾಥಿ ನೀಡಿದರು.ಸಿಂದಗಿ ಮಠದ ಸಂಚಾಲಕ ಶಿವಬಸಯ್ಯ ಆರಾಧ್ಯಮಠ,ಜಿ.ಎಸ್‌.ಭಟ್,ನಗರಸಭೆ ನಾಮನಿರ್ದೇಶನ ಸದಸ್ಯ ವೀರಣ್ಣ ಹನುಮನಹಳ್ಳಿ,ವಾಗೀಶ ಶಾಸ್ತ್ರಿಗಳು,ಡಂಬಳ ಶಾಸ್ತ್ರಿಗಳು,ಶಿವಯೋಗಿಯ್ಯ ಹಿರೇಮಠ, ಮಲ್ಲಯ್ಯ ರಾಮಾಪುರ,ಈರಣ್ಣ ಮಹಾರಾಜಪೇಟ, ಶಂಕ್ರಣ್ಣ ಇಟಗಿ,ಸಿದ್ದಲಿಂಗಯ್ಯ ಹಿರೇಮಠ ಸೇರಿದಂತೆ ಅನೇಕರಿದ್ದರು.