ಬನಶಂಕರಿ ಪತ್ತಿನ ಸಂಘದ ಅಧ್ಯಕ್ಷರಾಗಿ ಶಂಕರ ಹೆಬ್ಬಾಳ ಅವಿರೋಧ ಆಯ್ಕೆ
Shankar Hebba elected unopposed as the president of Banashankari Pattina Sangh
ಮುದ್ದೇಬಿಹಾಳ 03: ಪಟ್ಟಣದ ಬನಶಂಕರಿ ಪತ್ತಿನ ಸಹಕಾರಿ ಸಂಘದ ನೂತನ ಅಧ್ಯಕ್ಷರಾಗಿ ಶಂಕರ ಈ.ಹೆಬ್ಬಾಳ ಅವಿರೋಧವಾಗಿ ಆಯ್ಕೆಯಾದರು.
ಇಲ್ಲಿನ ಬಸ್ ನಿಲ್ದಾಣದ ಹಿಂಭಾಗದಲ್ಲಿರುವ ಸಂಘದ ಕಚೇರಿಯಲ್ಲಿ ನಡೆದ ತುರ್ತು ಸಭೆಯಲ್ಲಿ ಸರ್ವ ಸದಸ್ಯರು ಈ ಆಯ್ಕೆಗೆ ಸರ್ವಾನುಮತದಿಂದ ಒಪ್ಪಿಗೆ ಸೂಚಿಸಿದರು. ಸಂಘದ ಈ ಹಿಂದಿನ ಅಧ್ಯಕ್ಷರಾಗಿದ್ದ ಬಸಪ್ಪ ಹೆಬ್ಬಾಳ ಅವರ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ನಿರ್ದೇಶಕ ಶಂಕರ ಹೆಬ್ಬಾಳ ಅವರನ್ನು ಅಧ್ಯಕ್ಷರಾಗಿ ಸರ್ವ ಸದಸ್ಯರು ಸರ್ವಾನುಮತದಿಂದ ಆಯ್ಕೆ ಮಾಡಿದ್ದಾರೆ ಎಂದು ಸಂಘದ ಪ್ರಧಾನ ವ್ಯವಸ್ಥಾಪಕರಾದ ವಿಜಯಲಕ್ಷ್ಮೀ ಪ್ಯಾಟಿಗೌಡರ ತಿಳಿಸಿದರು.
ಬಸಪ್ಪ ಹೆಬ್ಬಾಳ ಅವರ ನಿಧನದಿಂದ ತೆರವಾದ ನಿರ್ದೇಶಕ ಸ್ಥಾನಕ್ಕೆ ಅವರ ಪುತ್ರ ಚಂದ್ರಕಾಂತ ಹೆಬ್ಬಾಳ ಅವರನ್ನು ಆಯ್ಕೆ ಮಾಡಲಾಯಿತು. ಸಂಘದ ಉಪಾಧ್ಯಕ್ಷ ರಮೇಶ ಹೆಬ್ಬಾಳ, ನಿರ್ದೇಶಕರಾದ ಸಂಗಪ್ಪ ಕಲ್ಲುಂಡಿ, ಸುಭಾಷ ರುದ್ರಗಂಟಿ, ಉಮೇಶ ಪ್ಯಾಟಿಗೌಡರ, ದ್ಯಾವಪ್ಪ ಹುಣಶ್ಯಾಳ, ಬಸಪ್ಪ ಹುಣಶ್ಯಾಳ, ಬಸವರಾಜ ಅಗಸಬಾಳ, ಶಂಕ್ರಮ್ಮ ಪ್ಯಾಟಿಗೌಡರ, ಜಯಶ್ರೀ ಹೆಬ್ಬಾಳ, ಚಂದ್ರಕಾಂತ ಹೆಬ್ಬಾಳ ಇದ್ದರು.ಪ್ರಧಾನ ವ್ಯವಸ್ಥಾಪಕ ವಿಜಯಲಕ್ಷ್ಮೀ ಪ್ಯಾಟಿಗೌಡರ ನಿರೂಪಿಸಿ ವಂದಿಸಿದರು. ಅಗಲಿದ ಹಿಂದಿನ ಅಧ್ಯಕ್ಷ ಬಸಪ್ಪ ಹೆಬ್ಬಾಳ ಅವರ ಆತ್ಮಕ್ಕೆ ಶಾಂತಿ ಕೋರಿ ಮೌನಾಚರಣೆ ಮಾಡಲಾಯಿತು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 