ಲೋಕದರ್ಶನವರದಿ
ಹರಪನಹಳ್ಳಿ,ಜುಲೈ,1: ಶಾಮಿಯಾನ ದೀಪಾಲಂಕಾರ ಮತ್ತು ಧ್ವನಿವರ್ಧಕ ಸಂಯೋಜಕರ ಕ್ಷೇಮಾಭಿವೃದ್ದಿ ಒಕ್ಕೂಟದ ರಾಜ್ಯ ಸಮಿತಿ ಆದೇಶದಂತೆ ಹರಪನಹಳ್ಳಿ ತಾಲ್ಲೂಕು ಘಟಕ ವನಮಹೋತ್ಸವವನ್ನು ಜೆ.ಸಿ. ಪಾರ್ಕನಲ್ಲಿ ಸಸಿ ನೆಡುವ ಮೂಲಕ ಆಚರಿಸಲಾಯಿತು.
ಪಟ್ಟಣದ ನಟರಾಜ ಬಡಾವಣೆಯಲ್ಲಿರುವ ಜೆ.ಸಿ ಪಾರ್ಕನಲ್ಲಿ ವನಮಹೋತ್ಸವದ ಪ್ರಯುಕ್ತ ಹರಪನಹಳ್ಳಿ ತಾಲ್ಲೂಕು ಶಾಮಿಯಾನ ದೀಪಾಲಂಕಾರ ಮತ್ತು ಧ್ವನಿವರ್ಧಕ ಸಂಯೋಜಕರ ಕ್ಷೇಮಾಭಿವೃದ್ದಿ ಒಕ್ಕೂಟದ ವತಿಯಿಂದ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು, ಕಾರ್ಯಕ್ರಮದ ಉದ್ಘಾಟನೆಯನ್ನು ಪುರಸಭೆ ಆರೋಗ್ಯ ನಿರೀಕ್ಷಕರಾದ ಮಂಜುನಾಥ್ರವರು ಜೆ.ಸಿ. ಪಾರ್ಕನಲ್ಲಿ ಗಿಡ ನೆಡುವುದರ ಮೂಲಕ ಕಾರ್ಯಕ್ರಮವನ್ನು ಚಾಲನೆ ನೀಡಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹರಪನಹಳ್ಳಿ ತಾಲ್ಲೂಕು ಶಾಮಿಯಾನ ದೀಪಾಲಂಕಾರ ಮತ್ತು ಧ್ವನಿವರ್ಧಕ ಸಂಯೋಜಕರ ಕ್ಷೇಮಾಭಿವೃದ್ದಿ ಒಕ್ಕೂಟದ ತಾಲ್ಲೂಕು ಅಧ್ಯಕ್ಷರಾದ ಅಬ್ದುಲ್ ಕರೀಂ ಅವರು ವಹಿಸಿಕೊಂಡು ಅವರು ಮಾತನಾಡಿ ರಾಜ್ಯ ಸಮಿತಿ ಆದೇಶದಂತೆ ನಮ್ಮ ತಾಲ್ಲೂಕಿನಲ್ಲಿ ಪಾಕರ್್ ಸ್ವಚ್ಛತಾ ಮತ್ತು ವನಮೋತ್ಸವ ಕಾರ್ಯಕ್ರಮವನ್ನು ಗಿಡ ನೆಡುವುದರ ಮೂಲಕ ಆಯೋಜಿಸಲಾಗಿದೆ, ಈ ಆಚರಣೆನ್ನು ಇಡೀ ರಾಜ್ಯಾದ್ಯಂತ ವನಮೋತ್ಸವ ಕಾರ್ಯಕ್ರಮ ಹಮ್ಮಿಕೊಂಡಿದ್ದು ಇಂದು ಹರಪನಹಳ್ಳಿಯಲ್ಲಿ ನಮ್ಮ ಶಾಮಿಯಾನ ಸಂಘದ ವತಿಯಿಂದ ಗಿಡ ನೆಡುವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಹೇಳಿದರು.
ಪುರಸಭೆಯ ಆರೋಗ್ಯ ನಿರೀಕ್ಷಕರಾದ ಮಂಜುನಾಥ್ ಮಾತನಾಡಿ ಶಾಮಿಯಾನದವರು ತಮ್ಮ ವೃತ್ತಿಯನ್ನು ಬದಿಗಿಟ್ಟು ಪರಿಸರದ ಬಗ್ಗೆ ಹೆಚ್ಚಿನ ಕಾಳಜಿ ಮತ್ತು ಒಲವನ್ನು ತೋರಿಸಿರುವುದಕ್ಕೆ ನಮ್ಮ ಪುರಸಭೆ ವತಿಯಿಂದ ನಾವು ನಿಮಗೆ ಅಬಾರಿಯಾಗಿದ್ದೇವೆ.
ಕಾಡು ಎನ್ನುವುದು ಇವತ್ತು ಮರೆಯಾಗಿ, ಬರಿ ಕಾಂಕ್ರಿಟ್ ನಾಡಾಗಿ ಕಾಲ ಕಾಲಕ್ಕೆ ಮಳೆ ಇಲ್ಲದೇ ಬರಡು ಭೂಮಿಯಾಗಿದೆ, ಯಾವುದೇ ಕೆರೆ ಕಟ್ಟೆಗಳು ತುಂಬಿರುವುಲ್ಲ ಇಂತಹ ಸಮಸ್ಸೆಗಳನ್ನು ಅನುಭವಿಸುತಿದ್ದೇವೆ ಆದ್ದರಿಂದ ನಾವು ನೀವು ಎಲ್ಲರೂ ಸೇರಿಕೊಂಡು ಪರಿಸರ ಬೆಳೆಸುವ ಕಾಳಜಿಯನ್ನು ಬೆಳೆಸಿಕೊಳ್ಳಬೇಕು.
ಈ ಕಾರ್ಯಕ್ರಮದಲ್ಲಿ ಪ್ರಧಾನ ಕಾರ್ಯದಶರ್ಿಗಳಾದ ಇಮ್ರನ್, ಕೆಜಿಎನ್ ಸಂಘಟನಾ ಕಾರ್ಯದಶರ್ಿಯಾದ ಮಾರುತಿ ಎಂ, ಉಪಾಧ್ಯಕ್ಷರಾದ ಚಮನ್, ಖಜಾಂಚಿಯಾದ ಕರಿಬಸಪ್ಪ ಮೈದೂರು, ಜೆಬಿ ಶಾಮಿಯಾನ ಬಾಬಣ್ಣ, ಜೆಸಿಐ ಅಧ್ಯಕ್ಷರಾದ ವಿಶ್ವನಾಥ್, ಕನರ್ಾಟಕ ಶಾಮಿಯಾನ್ ಸೈಫುಲ್ಲಾ, ಬುಡೇನ್, ಶೇಷಣ್ಣ, ಕೋಟೆಪ್ಪ, ಶಬ್ಬೀರ್, ಸಲಾಂ, ದಾದಣ್ಣ, , ವೆಲ್ ಕಮ್ ಶಾಮಿಯಾನ ನಯಾಜ್, ಮಲ್ಲಪ್ಪ ಅರಸೀಕೆರೆ, ಕೋಟಪ್ಪ, ಕರಿಬಸಪ್ಪ, ನಂದಿಬೇವೂರು ರಫೀ, ಕರೀಂ ಸಾಬ್ ಬಳಗನೂರ್ ಮತ್ತಿತರರು ಭಾಗವಹಿಸಿದ್ದರು.