ಮುಂಬೈ, ಆಗಸ್ಟ್ 11 ಬಾಲಿವುಡ್ ಕಿಂಗ್ ಖಾನ್ ಶಾರುಖ್, 'ರಾಕೇಟರಿ: ದಿ ನಂಬಿ ಇಂಫ್ಯಾಕ್ಟ್' ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.
ಬಾಲಿವುಡ್ ನಟ ಆರ್. ಮಾಧವನ್ ಮುಖ್ಯಭೂಮಿಕೆಯ 'ರಾಕೇಟರಿ: ದಿ ನಂಬಿ ಇಂಫ್ಯಾಕ್ಟ್' ಚಿತ್ರದಲ್ಲಿ ಅತಿಥಿಯಾಗಿ ಕಾಣಿಸಿಕೊಳ್ಳುವ ಸಂಭವವಿದೆ. ವಿಜ್ಞಾನಿ ಮತ್ತು ಏರೋಸ್ಪೇಸ್ ಎಂಜಿನಿಯರ್ ನಂಬಿ ನಾರಾಯಣನ್ ಅವರ ಜೀವನಾಧಾರಿತವೇ ಈ ಚಿತ್ರದ ಕಥಾವಸ್ತು.
ಈ ಚಿತ್ರದ ಮೂಲಕ ಮಾಧವನ್, ನಿರ್ದೇಶನಕ್ಕೂ ಪಾದಾರ್ಪಣೆ ಮಾಡುತ್ತಿದ್ದಾರೆ. 77 ವರ್ಷ ವಯಸ್ಸಿನ ನಂಬಿ ನಾರಾಯಣ್ ಅವರ ಪಾತ್ರದಲ್ಲಿ ಮಾಧವನ್ ಕಾಣಿಸಿಕೊಳ್ಳಲಿದ್ದಾರೆ. ನಂಬಿ ಅವರನ್ನು ಪತ್ತೆದಾರಿಕೆಯ ಆರೋಪದಡಿ ಭಾರತ ಹಾಗೂ ಚೀನಾ ಜೈಲಿನಲ್ಲಿ ಇರಿಸಲಾಗಿತ್ತು. ಈ ಚಿತ್ರದಲ್ಲಿ ಸಂದರ್ಶಕನಾಗಿ ಶಾರುಖ್ ಅಭಿನಯಿಸಲಿದ್ದಾರಂತೆ.