ನವದೆಹಲಿ, ಫೆ 13: ಮಾದಕವಸ್ತು ಕಳ್ಳಸಾಗಣೆ, ಭಯೋತ್ಪಾದನೆ ಮತ್ತು ಸಂಘಟಿತ ಅಪರಾಧಗಳ ತಡೆಗೆ ಬಿಮ್ಸ್ಟೆಕ್ ದೇಶಗಳ ನಡುವೆ ಪರಸ್ಪರ ಸಹಕಾರ ಬಹಳ ಅಗತ್ಯ ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಒತ್ತಿ ಹೇಳಿದ್ದಾರೆ.
ಬಿಮ್‌ಸ್ಟೆಕ್ ದೇಶಗಳಿಗೆ ಮಾದಕವಸ್ತು ಕಳ್ಳಸಾಗಣೆ ನಿಯಂತ್ರಿಸುವ ಕುರಿತ ಎರಡು ದಿನಗಳ ಸಮಾವೇಶ ಉದ್ಘಾಟಿಸಿದ ಮಾತನಾಡಿದ ಅವರು, ಈ ಹಾವಳಿಯನ್ನು ತಡೆಗಟ್ಟಲು ಭಾರತವು ಬಲವಾದ ನೀತಿ ಸಿದ್ಧಪಡಿಸಿದೆ ಎಂದರು.
ವಿವಿಧ ಹಂತಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿಧ ಏಜೆನ್ಸಿಗಳ ನಡುವೆ ಕಾನೂನು ಕ್ರಮ ಮತ್ತು ಸಮನ್ವಯದ ನೀತಿಗಳನ್ನೂ ಪರಿಶೀಲಿಸಿದೆ ಎಂದೂ ಅವರು ಹೇಳಿದರು.
ಭಾಗವಹಿಸುವ ದೇಶಗಳಿಗೆ (ಬಾಂಗ್ಲಾದೇಶ, ಮ್ಯಾನ್ಮಾರ್, ಶ್ರೀಲಂಕಾ, ಥೈಲ್ಯಾಂಡ್, ನೇಪಾಳ ಮತ್ತು ಭೂತಾನ್) ಭರವಸೆ ನೀಡಿ, ಯಾವುದೇ ಭಾರತವು ವಿಶ್ವದ ಯಾವುದೇ ಭಾಗದಿಂದ ಮಾದಕ ದ್ರವ್ಯ ಪ್ರವೇಶಕ್ಕೆ ಅನುಮತಿ ಕೊಡುವುದಿಲ್ಲ ಮೇಲಾಗಿ ರಫ್ತಿಗೂ ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಭಾಗವಹಿಸುವ ರಾಷ್ಟ್ರಗಳೊಂದಿಗೆ ಭಾರತ ಉತ್ತಮ ರಾಜತಾಂತ್ರಿಕ ಸಂಬಂಧ ಹೊಂದಿರುವುದರ ಜೊತೆಗೆ, ಸಂಸ್ಕೃತಿ ಮತ್ತು ಪರಂಪರೆಯನ್ನು ಹಂಚಿಕೊಳ್ಳಲಿದೆ ಮತ್ತು ಬಂಗಾಳಕೊಲ್ಲಿನ ರಾಷ್ಟ್ರಗಳು ಈ ಹಾವಳಿ ತಡೆಗೆ ಬಹಳ ನಿಕಟತೆ, ಸಮನ್ವಯದಿಂದ ಕೆಲಸ ಮಾಡಬೇಕಾಗಿದೆ ಎಂದು ಒತ್ತಿ ಹೇಳಿದರು.
ಅಂತಾರಾಷ್ಟ್ರೀಯ ಸಂಸ್ಥೆಗಳೊಂದಿಗೆ ಉತ್ತಮ ಸಮನ್ವಯವನ್ನು ಹೊಂದಲು ವಿಶ್ವಸಂಸ್ಥೆ (ಯುಎನ್) ಮತ್ತು ಇಂಟರ್‌ಪೋಲ್‌ನೊಂದಿಗೆ ಭಾರತ ಪ್ರಮುಖ ಹಲವು ಕ್ರಮಗಳನ್ನು ಕೈಗೊಂಡಿದೆ ಎಂದರು.
ಕೇಂದ್ರ ಮತ್ತು ರಾಜ್ಯ ಮಟ್ಟದಲ್ಲಿ ವಿವಿಧ ತನಿಖಾ ಸಂಸ್ಥೆಗಳ ನಡುವೆ ಉತ್ತಮ ಸಹಕಾರಕ್ಕಾಗಿ ರಾಷ್ಟ್ರೀಯ ಸಮನ್ವಯ ಘಟಕ ಸ್ಥಾಪನೆ, ಮಾದಕ ವಸ್ತುಗಳ ತಪಾಸಣೆ ಗುರುತಿಸುವಿಕೆಗಾಗಿ ಜಂಟಿ ಸಮಿತಿ,ರಚನೆ ಬಗ್ಗೆಯೂ ಕ್ರಮ ಕೈಗೊಂಡಿದೆ ಎಂದರು.
ಜಾರಿ ತನಿಖಾ ಸಂಸ್ಥೆಗಳು ವಿದೇಶಿಯರು ಸೇರಿದಂತೆ ಎರಡು ಲಕ್ಷ ಜನರನ್ನು ಬಂಧಿಸಿವೆ ಎಂದು ಸಚಿವರು ಹೇಳಿದರು.