ಅಪ್ರಾಪ್ತೆಗೆ ಲೈಂಗಿಕ ಕಿರುಕುಳ : ಆರೋಪಿತನಿಗೆ 3 ವರ್ಷಗಳ ಕಠಿಣ ಶಿಕ್ಷೆ

ಅಪ್ರಾಪ್ತೆಗೆ ಲೈಂಗಿಕ ಕಿರುಕುಳ : ಆರೋಪಿತನಿಗೆ 3 ವರ್ಷಗಳ ಕಠಿಣ ಶಿಕ್ಷೆ  Sexual harassment of minor: Accused gets 3 years rigorous imprisonment

ಬೆಳಗಾವಿ : ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಲೈಂಗಿಕ ಕಿರುಕುಳ ಎಸಗಿದ ಆರೋಪಿತನಿಗೆ 3 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ ಇಲ್ಲಿನ ಪೋಕ್ಸೊ ನ್ಯಾಯಾಲಯ ತೀರ​‍್ು ನೀಡಿ ಆದೇಶಿಸಿದೆ. ಗಣೇಶಪುರ ಲಕ್ಷ್ಮೀನಗರದ ಸಿಂಡಿಕೇಟ್ ಬ್ಯಾಂಕ್ ಕಾಲೋನಿ ಸಮೀಪದ ಸಚಿನ್ ಕಾಕತ್ಕರ್(30) ಶಿಕ್ಷೆಗೊಳಗಾದ ಆರೋಪಿಯಾಗಿದ್ದಾನೆ. ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿತ್ತು. ಫಿರ್ಯಾದಿದಾರರ ಮಗಳು ನೊಂದ ಬಾಲಕಿ. ಇವಳು ಅಪ್ರಾಪ್ತ ವಯಸ್ಸಿನವಳು ಎಂದು ಗೊತ್ತಿದರೂ ಆರೋಪಿತ 08-03-2022ರಂದು ಬಾಲಕಿಗೆ ತನ್ನ ಪ್ಯಾಂಟಿನ ಜೀಪ್ ತೆಗೆದು ಗುಪ್ತಾಂಗ ಪ್ರದರ್ಶಿಸಿ ಅಶ್ಲೀಲವಾಗಿ ವರ್ತಿಸಿದ್ದನು. ನಂತರ ಆರೋಪಿತ ಫಿರ್ಯಾದಿ ಹಾಗೂ ಅವರ ಮನೆಯವರಿಗೆ ಅವಾಚ್ಯವಾಗಿ ಬೈದು ಜೀವ ಬೆದರಿಕೆ ಹಾಕಿದ ಅಪರಾಧಕ್ಕೆ ದಾಖಲಾಧಿಕಾರಿ ಎಸ್‌.ಎಚ್‌.ಮುಲ್ಲಾ ಪ್ರಕರಣ ದಾಖಲಿಸಿಕೊಂಡಿದ್ದರು.  

ತನಿಖಾಧಿಕಾರಿ ಪಿಎಸ್‌ಐ ಎಸ್‌.ಎನ್‌.ಬಸ್ವಾ ಕೈಗೊಂಡು ತನಿಖೆ ಮಾಡಿ ಪ್ರಕರಣವನ್ನು ಮಾನ್ಯ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ವಿಶೇಷ ಶೀಘ್ರಗತಿ ಪೋಕ್ಲೋ ನ್ಯಾಯಾಲಯ-1 ಬೆಳಗಾವಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿಯನ್ನು ಸಲ್ಲಿಸಿದ್ದರು. ಮಾನ್ಯ ನ್ಯಾಯಾಧೀಶರಾದ ಸಿ.ಎಂ.ಪುಷ್ಪಲತಾ ಪ್ರಕರಣದ ವಿಚಾರಣೆ ಮಾಡಿ, ಒಟ್ಟು 7 ಸಾಕ್ಷಿಗಳ ವಿಚಾರಣೆ ಮೇಲಿಂದ ಹಾಗೂ, 13 ದಾಖಲೆಗಳು, ಆಧಾರದ ಮೇಲಿಂದ ಆರೋಪಿ ಮೇಲಿನ ಆರೋಪಣೆಗಳು ಸಾಬೀತಾಗಿವೆ ಎಂದು ತೀಪು ನೀಡಿದರು.   

ಬಳಿಕ ಆರೋಪಿತನಿಗೆ ಐಪಿಸಿ ಕಲಂ 354(ಎ) ಪ್ರಕಾರ 3 ವರ್ಷಗಳ ಕಾರಾಗೃಹ ಶಿಕ್ಷೆ ದಂಡ ರೂ 10,000 ದಂಡದ ಮೊತ್ತ ತುಂಬಲು ತಪ್ಪಿದಲ್ಲಿ 6 ತಿಂಗಳ ಕಾರಾಗೃಹ ಶಿಕ್ಷೆ ಮತ್ತು ಪೋಕ್ಸೊ ಕಲಂ 12ರ ಪ್ರಕಾರ 3 ವರ್ಷ ಕಾರಾಗೃಹ ಶಿಕ್ಷೆ ದಂಡ 10,000 ಮತ್ತು ದಂಡದ ಮೊತ್ತ ತುಂಬಲು ತಪ್ಪಿದಲ್ಲಿ 6 ತಿಂಗಳ ಶಿಕ್ಷೆ ಮತ್ತು ಮಾನ್ಯ ನ್ಯಾಯಾಲಯವ ತೀರ​‍್ು ನೀಡಿದ್ದು ಹಾಗೂ ನೊಂದ ಬಾಲಕಿಗೆ ಜಿಲ್ಲಾ ಕಾನೂನು ಪ್ರಾಧಿಕಾರದಿಂದ ರೂಪಾಯಿ 1 ಲಕ್ಷಗಳ ಪರಿಹಾರ ಧನವನ್ನು ಪಡೆಯಲು ನ್ಯಾಯಾಲಯ ಆದೇಶಿಸಿದೆ. ಪರಿಹಾರ ಹಣವನ್ನು ರಾಷ್ಟ್ರಕೃತ ಬ್ಯಾಂಕಿನಲ್ಲಿ 5 ವರ್ಷಗಳವರೆಗೆ ಮುದ್ದತ್ ಠೇವಣಿಯಾಗಿ ಇಡಲು ಮಾನ್ಯ ನ್ಯಾಯಾಲಯ ಆದೇಶ ಮಾಡಿದೆ. ಈ ಪ್ರಕರಣದಲ್ಲಿ ಸರಕಾರದ ಪರವಾಗಿ ವಿಶೇಷ ಸರಕಾರಿ ಅಭಿಯೋಜಕ ಎಲ್‌.ವಿ.ಪಾಟೀಲ ಪ್ರಕರಣವನ್ನು ನಡೆಸಿ ಹಾಗೂ ವಾದ ಮಂಡಿಸಿದ್ದರು.