ಹಾವೇರಿ೨೧: ಆರ್ಥಿಕಗಣತಿಯಲ್ಲಿ ಕ್ಷೇತ್ರ ಮಟ್ಟದಲ್ಲಿ ಕಾರ್ಯನಿರ್ವಹಿಸವ ಗಣತಿದಾರರಿಗೆ ಸರಿಯಾದ ಮಾಹಿತಿ ನೀಡಿ. ಸಮರ್ಪಕ ಗಣತಿಗೆ ಉತ್ತಮ ತರಬೇತಿ ನೀಡಲು ಸಿದ್ಧರಾಗಿ ಎಂದು ತಾಲೂಕು ಮಟ್ಟದ ತರಬೇತಿದಾರರಿಗೆ ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಅವರು ಸಲಹೆ ನೀಡಿದರು.
ಬುಧವಾರ ಜಿಲ್ಲಾಧಿಕರಿಗಳ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾದ 7ನೇ ಆರ್ಥಿಕ ಗಣತಿಯ ಜಿಲ್ಲಾ ಮಟ್ಟದ ಒಂದು ದಿನದ ತರಬೇತಿದಾರರ ತರಬೇತಿಗೆ ಚಾಲನೆ ನೀಡಿ ಮಾತನಾಡಿದ ಅವರು, ಜಿಲ್ಲಾ ವ್ಯವಸ್ಥಾಪಕರು ಹಾವೇರಿ ಇವರಿಗೆ ಎಲ್ಲಾ ಶಿಬಿರಾಥರ್ಿಗಳಿಗೆ ತರಬೇತಿಗೆ ಅವಶ್ಯಕವಾದ ಸಾಮಾಗ್ರಿಗಳನ್ನು ಒದಗಿಸಿ, ವ್ಯವಸ್ಥಿತವಾಗಿ ತಾಲ್ಲೂಕು ಮಟ್ಟದಲ್ಲಿ ತರಬೇತಿಯನ್ನು ನಡೆಸಲು ಸೂಚಿಸಿದರು.
ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಕುಮಾರ ಮಣ್ಣವಡ್ಡರ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, 7ನೇ ಆರ್ಥಿಕ ಗಣತಿಯಲ್ಲಿ ಗಣತಿದಾರರು ಹಾಗೂ ಮೇಲ್ವಿಚಾರಕರು ಕ್ಷೇತ್ರ ಮಟ್ಟದಲ್ಲಿ ನಿಖರವಾದ ಅಂಕಿ-ಅಂಶಗಳ ಮಾಹಿತಿಯನ್ನು ಕಲೆ ಹಾಕಲು ತರಬೇತಿ ಅವಶ್ಯವಾಗಿದೆ. ಶಿಬಿರಾಥರ್ಿಗಳು ತರಬೇತಿ ಸದುಪಯೋಗ ಪಡೆಯಲು ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಎನ್.ತಿಪ್ಪೇಸ್ವಾಮಿ ಅವರು ಮಾತನಾಡಿ, ಎಲ್ಲಾ ಮೇಲ್ವಿಚಾರಕರು ತಮ್ಮ ಅಧೀನದ ಗಣತಿದಾರರಿಗೆ ಕ್ಷೇತ್ರ ಗಣತಿ ಕಾರ್ಯಕ್ಕೆ ಹಂಚಿಕೆ ಮಾಡುವ ಬ್ಲಾಕ್ಗಳ ಬಗ್ಗೆ ಹಾಗೂ ಯಾವುದೇ ಕ್ಷೇತ್ರ ಗಣತಿ ಕಾರ್ಯದಿಂದ ಬಿಟ್ಟು ಹೋಗದಂತೆ ವ್ಯವಸ್ಥಿತವಾಗಿ ಗಣತಿ ಕಾರ್ಯ ನಿರ್ವಹಿಸಲು ಸೂಚಿಸಿದರು.ಸಹಾಯಕ ಸಾಂಖ್ಯಿಕ ಅಧಿಕಾರಿ ಜೆ.ಆರ್.ಪಾಟೀಲ, ಹುಬ್ಬಳ್ಳಿ ರಾಷ್ಟ್ರೀಯ ಮಾದರಿ ಸಮೀಕ್ಷೆ ಕಛೇರಿಯ ಬಿ.ಎಸ್.ಭಂಗಿ, ಜಿಲ್ಲಾ ವ್ಯವಸ್ಥಾಪಕರು ಅಖಅ ಕೃಷ್ಣಕಾಂತ ಆಡೂರ ಅವರು ತರಬೇತಿ ನೀಡಿದರು.
ತರಬೇತಿ ನಂತರ ಕ್ಷೇತ್ರ ಕಾರ್ಯ ಕುರಿತು ಪ್ರಾಯೋಗಿಕ ತರಬೇತಿಯನ್ನು ಸಹ ನೀಡಲಾಯಿತು. ಸಹಾಯಕ ನಿದರ್ೆಶಕ ಎಂ.ಎ.ಅಗಸರ, ಸಾಂಖ್ಯಿಕ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿಗಳು ಹಾಜರಿದ್ದರು