ಪತ್ರಕರ್ತರ ಹಾಗೂ ವೈದ್ಯರ ಸೇವೆ ಶ್ಲಾಘನೀಯ: ಲಂಬೂನವರ
Service of journalists and doctors commendable: Lamboonavara
ಯರಗಟ್ಟಿ 05: ಕ್ಲಿಷ್ಟಕರ ಸಂದರ್ಭದಲ್ಲಿ ತಮ್ಮೆಲ್ಲ ವೈಯಕ್ತಿಕ ಕೆಲಸ ಕಾರ್ಯಗಳನ್ನು ಬದಿಗಿಟ್ಟು ರೋಗಿಗಳ ಪ್ರಾಣ ಉಳಿಸುವಲ್ಲಿ ವೈದ್ಯರ ಹಾಗೂ ಸಮಾಜ ಸುಧಾರಣೆಯಲ್ಲಿ ಪತ್ರಕರ್ತರ ಸೇವೆ ಶ್ಲಾಘನೀಯ ಎಂದು ಕದಳಿ ವೇದಿಕೆ ಅಧ್ಯಕ್ಷೆ ಅನ್ನಪೂರ್ಣ ಲಂಬೂನವರ ಹೇಳಿದರು.
ಸಮೀಪದ ಮುನವಳ್ಳಿ ಪಟ್ಟಣದ ಸೋಮಶೇಖರ ಮಠದ ಸಭಾಂಗಣದಲ್ಲಿ ರಾಣಿ ಚನ್ನಮ್ಮ ಸಹೇಲಿ ಗ್ರೂಪ್ ಹಾಗೂ ಸವದತ್ತಿ ತಾಲೂಕಾ ಕದಳಿ ವೇದಿಕೆ ವತಿಯಿಂದ ವೈದ್ಯರ ಹಾಗೂ ಪತ್ರಕರ್ತರ ದಿನಾಚರಣೆ ಪ್ರಯುಕ್ತ ಹಮ್ಮಿಕೊಂಡ ವೈದ್ಯರ ಹಾಗೂ ಪತ್ರಕರ್ತರ ಸನ್ಮಾನ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು.
ರಾಣಿ ಚನ್ನಮ್ಮ ಸಹೇಲಿ ಅಧ್ಯಕ್ಷೆ ವಿದ್ಯಾ ಸುಭಾಸ ಬಾಳಿ ಅಧ್ಯಕ್ಷತೆ ವಹಿಸಿದ್ದರು.
ಡಾ. ಪೂಜಾ ರವಿ ಹನಸಿ ಮಾತನಾಡಿ ಹೆಣ್ಣು ಭ್ರೂಣ ಹತ್ಯೆ ತಡೆಯಲು ಎಲ್ಲರಲ್ಲೂ ಜಾಗೃತಿ ಮೂಡಿಸಬೇಕಾಗಿದೆ. ಭ್ರೂಣ ಹತ್ಯೆ ನಿಲ್ಲದಿದ್ದರೆ ಮುಂಬರುವ ದಿನಗಳಲ್ಲಿ ಪುರುಷ ಹಾಗೂ ಮಹಿಳೆಯರ ಸರಾಸರಿಯಲ್ಲಿ ಬಹಳಷ್ಟು ವ್ಯತ್ಯಾಸ ಕಂಡು ವಿವಿಧ ಅಪರಾಧ ಕೃತ್ಯಗಳು ಜರುಗುತ್ತವೆ ಎಂದರು.
ಡಾ.ಎಸ್.ಎಲ್.ದಂಡಗಿ, ಡಾ.ಪೂಜಾ ರವಿ ಹನಸಿ, ಪತ್ರಕರ್ತ ಪ್ರಶಾಂತ ತುಳಜಣ್ಣವರ, ತಾನಾಜಿ ಮುರಂಕರ, ವೀರಣ್ಣ ಕೊಳಕಿ ಅವರನ್ನು ಸನ್ಮಾನಿಸಲಾಯಿತು. ಸುಮಾ ರೇಣಕೆ, ರಾಧಾ ಕುಲಕರ್ಣಿ, ಡಾ.ಮಧುಮತಿ ಕಲಾಲ, ಸುಜಾತಾ ರೇಣುಕಪ್ರಸಾದ ಜಂಬಗಿ, ಗೌರಿ ಜಾವೂರ, ವೀಣಾ ಪತ್ತಾರ, ರಾಜೇಶ್ವರಿ ಬಾಳಿ, ರಮೇಶ ರೇಣಕೆ, ಬಸನಗೌಡ ಹುಲಿಗೊಪ್ಪ, ನಿರ್ಮಲಾ ಗದ್ವಾಲ, ಪೂಜಾ ಕಮ್ಮಾರ, ಸುರೇಖಾ ಗೋಪಶೆಟ್ಟಿ, ಮುರುಘರಾಜೇಶ್ವರಿ ಹೊಸಮಠ, ಅನ್ನಪೂರ್ಣ ಹಿರೇಮಠ, ಶಿವಲೀಲಾ ಬಾಳಿ, ಉಮಾ ಕರೀಕಟ್ಟಿ ಸೇರಿದಂತೆ ಇತರರು ಇದ್ದರು.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 