ಸಮರ್ಪಣಾ ಭಾವದಿಂದ ರೋಗಿಗಳ ಸೇವೆ ಸಲ್ಲಿಸಿ: ಡಾ.ರಾಘವೇಂದ್ರ ಮಾಳೊಜಿ
Serve patients with dedication: Dr. Raghavendra Maloji
ಬೀಳಗಿ 01: ವೈದ್ಯಕೀಯ ಕ್ಷೇತ್ರದಲ್ಲಿ ಯಾವುದೇ ಆಮಿಷಕ್ಕೆ ಒಳಗಾಗದೆ ಕರ್ತವ್ಯ ನಿರ್ವಹಿಸಬೇಕು. ನಮಗೆ ಹಣ ಮುಖ್ಯ ಆಗಬಾರದು ಸೇವೆ ಮುಖ್ಯ ಆಗಬೇಕು ಎಂದು ಡಾ. ರಾಘವೇಂದ್ರ ಮಾಳೊಜಿ ಹೇಳಿದರು.
ಸ್ಥಳೀಯ ಮಂದಾರ ಪಬ್ಲಿಕ್ ಶಾಲೆಯಲ್ಲಿ ಮಂಗಳವಾರ ಏರಿ್ಡಸಿದ ವೈದ್ಯರ ದಿನದ ಕಾರ್ಯಕ್ರಮದಲ್ಲಿ ಗೌರವ ಸನ್ಮಾನವನ್ನು ಸ್ವೀಕರಿಸಿ ಅವರು ಮಾತನಾಡಿ ವೈದ್ಯರಾಗುವವರು ಮುಖ್ಯವಾಗಿ ಸೇವಾ ಮನೋಭಾವ ರೂಡಿಸಿಕೊಳ್ಳಬೇಕು. ಸಮರ್ಣ ಭಾವ ಇರಬೇಕು. ನಮ್ಮನ್ನು ನಂಬಿ ಬರುವ ರೋಗಿಗಳು ನಾವಾಡುವ ಒಳ್ಳೆಯ ಮಾತುಗಳಿಂದಲೇ ಅರ್ಧ ಗುಣಮುಖರಾಗಬೇಕು ಎಂದರು.
ವೈದ್ಯೆ ಅಶ್ವಿನಿ ಮಾಳೊಜಿ ಮಾತನಾಡಿ ಮಂದಾರ ಪಬ್ಲಿಕ್ ಶಾಲೆಯಲ್ಲಿ ಅಣುಕು ಪ್ರದರ್ಶನದ ಮೂಲಕ ವೈದ್ಯ ಲೋಕವನ್ನು ಸೃಷ್ಟಿಸಿದ್ದು ನಿಜಕ್ಕೂ ಶ್ಲ್ಯಾಘನೀಯವಾದ ಕಾರ್ಯ ಎಂದ ಅವರು ಜಂಕ್ ಫುಡ್ ಮತ್ತು ಮೊಬೈಲ್ ನಿಂದ ದೂರವಿರಲು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಕೆ ಎಸ್ ಸೋಮನಕಟ್ಟಿ ಮಾತನಾಡಿ ವೈದ್ಯರು ಕಣ್ಣಿಗೆ ಕಾಣುವ ನಿಜವಾದ ದೇವರು. ಅವರ ನಿಸ್ವಾರ್ಥ ಸೇವೆ ಅಮೋಘವಾದದ್ದು. ವೈದ್ಯರ ದಿನವನ್ನು ಅಣುಕ ಪ್ರದರ್ಶನದ ಮೂಲಕ ವಿದ್ಯಾರ್ಥಿಗಳಿಗೆ ಪರಿಚಯಿಸುವ ಸಣ್ಣ ಪ್ರಯತ್ನ ಈ ಸಂಸ್ಥೆಯದ್ದಾಗಿದೆ ಎಂದು ತಿಳಿಸಿದರು.
ಮುಖ್ಯೋಪಾಧ್ಯಾಯನಿ ಸುಮಾ ಸೋಮನಕಟ್ಟಿ ಸ್ವಾಗತಿಸಿದರು. ಶಿಕ್ಷಕಿಯರಾದ ವಿಜಯಲಕ್ಷ್ಮಿ ಗಾಣಿಗೇರ ನಿರೂಪಿಸಿದರು, ಅಂಕಿತಾ ಹಲಗಣಿ ವಂದಿಸಿದರು. ಶಿಕ್ಷಕಿ ರೇಣುಕಾ ಬೊರ್ಜಿ ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು.
ಬೀಳಗಿಯ ಮಂದಾರ ಪಬ್ಲಿಕ್ ಶಾಲೆಯಲ್ಲಿ ಏರಿ್ಡಸಿದ ವೈದ್ಯರ ದಿನ ಸಮಾರಂಭದಲ್ಲಿ ಡಾ. ರಾಘವೇಂದ್ರ ಮಾಳೊಜಿ ಹಾಗೂ ಡಾ. ಅಶ್ವಿನಿ ಮಾಳೊಜಿ ದಂಪತಿಗಳನ್ನು ಗೌರವಿಸಲಾಯಿತು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 