ಬಾಗಲಕೋಟೆ05: ಸೆಪ್ಟೆಂಬರ ಮಾಹೆಗೆ ಸಾರ್ವಜನಿಕ ವಿತರಣಾ ಪದ್ಧತಿಯಡಿ ಅರ್ಹ ಫಲಾನುಭವಿಗಳಿಗೆ ಪಡಿತರ ವಸ್ತುಗಳನ್ನು ಬಿಡುಗಡೆ ಮಾಡಲಾಗಿದೆ. ಪಡಿತರ ಚೀಟಿದಾರರು ನ್ಯಾಯಬೆಲೆ ಅಂಗಡಿಯಲ್ಲಿರುವ ಪಿಓಎಸ್ (ಪಾಯಿಂಟ್ ಆಫ್ ಸೇಲ್) ಗಣಕಯಂತ್ರದ ಮೂಲಕ ಬೆರಳಚ್ಚು ಮಾಹಿತಿ ನೀಡಿ ಅವರ ತಿಂಗಳ ಪಡಿತರ ಚೀಟಿ ಪಡೆಯುವ ಅವಕಾಶವನ್ನು ಕಲ್ಪಿಸಿಕೊಡಲಾಗಿದೆ.
ಈ ಸೇವೆಗೆ ಯಾವುದೇ ಮೊತ್ತ ಪಾವತಿಸುವಂತಿಲ್ಲ. ಪ್ರತಿ ಪಡಿತರ ಚೀಟಿದಾರರಿಗೆ ಅವರ ಪಾಲಿನ ಹಂಚಿಕೆ ಹಾಗೂ ಅವರು ಎತ್ತುವಳಿ ಮಾಡಿದ ವಿವರಗಳ ಮಾಹಿತಿಯನ್ನು ಎಸ್ಎಮ್ಎಸ್ ಮೂಲಕ ಒದಗಿಸಲಾಗುತ್ತದೆ. ಸರದಿ ಮಾಹಿತಿಯನ್ನು ಇಲಾಖೆ ವೈಬ್ಸೈಟ್ ಣಣಠಿ/// ಚಿಚಿಡಿ.ಞಚಿಡಿ.ಟಿಛಿ.ಟಿ/ಜಿಛಿಣಚಿಣ/ಣಚಿಣ_ಡಿಚಿಣಠಟಿ_ಣಚಿಞಜಟಿ_ಜಜಣಚಿಟ.ಚಿಠಿಥ ನಲ್ಲಿ ಒದಗಿಸಲಾಗಿದೆ.
ಪಡಿತರ ಚಿಟಿದಾರರ ಉಪಯೋಗಕ್ಕಾಗಿ ಆಹಾರ ನಾಗರೀಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಇಲಾಖೆಯ ಜಿಲ್ಲೆಯ ಯಾವುದೇ ನ್ಯಾಯ ಬೆಲೆ ಅಂಗಡಿಯಲ್ಲಿ ಪೋರ್ಟ್ಯಾಬಿಲಿಟಿ ವ್ಯವಸ್ಥೆಯ ಮುಖಾಂತರ ಪಡಿತರ ಚೀಟಿ ಪಡೆಯಲು ಅವಕಾಶವನ್ನು ಕಲ್ಪಿಸಿಕೊಡಲಾಗಿದೆ.
ಪಡಿತರ ಚೀಟಿದಾರರು ಜಿಲ್ಲೆ ಅಥವಾ ರಾಜ್ಯದ ಯಾವುದೇ ತಾಲೂಕಿನ ನ್ಯಾಯಬೆಲೆ ಅಂಗಡಿಯಲ್ಲಿ ಬೆರಳಚ್ಚು ಮಾಹಿತಿ ನೀಡಿ ಅವರ ಹಕ್ಕಿನ ಪಡಿತರ ಚೀಟಿಯನ್ನು ತೆಗೆದುಕೊಳ್ಳಲು ಅವಕಾಶ ನೀಡಲಾಗಿದ್ದು, ಜಿಲ್ಲೆಯ ಎಲ್ಲಾ ಪಡಿತರ ಚೀಟಿದಾರರು ಈ ಸೌಲಭ್ಯವನ್ನು ಪಡೆದುಕೊಳ್ಳಬೇಕೆಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.