ಮುಂಬೈ, ಜೂನ್ 10,ರಿಯಾಲ್ಟಿ, ಬ್ಯಾಂಕಿಂಗ್, ಹಣಕಾಸು ಮತ್ತು ಇಂಧನ ವಲಯದ ಷೇರುಗಳಲ್ಲಿ ಹೊಸ ಖರೀದಿ ಉತ್ಸಾಹದಿಂದ ಮುಂಬೈ ಷೇರು ವಿನಿಮಯ ಕೇಂದ್ರದ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಬುಧವಾರ 290.36 ಅಂಕ ಏರಿಕೆ ಕಂಡು 34,247.05ಕ್ಕೆ ತಲುಪಿದೆ.ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದ ಸೂಚ್ಯಂಕ ನಿಫ್ಟಿ ಸಹ 69.50 ಅಂಕ ಏರಿಕೆ ಕಂಡು 10,116.15 ಕ್ಕೆ ತಲುಪಿದೆದಿನದ ವಹಿವಾಟಿನಲ್ಲಿ ನಿಫ್ಟಿ ಕ್ರಮವಾಗಿ ಗರಿಷ್ಠ ಮತ್ತು ಕನಿಷ್ಠ 10,148.75 ಮತ್ತು 10,036.85ರ ಮಟ್ಟದಲ್ಲಿತ್ತು.
ಮಂಗಳವಾರ 413 ಅಂಕ ಕುಸಿತ ಕಂಡಿದ್ದ ಸೆನ್ಸೆಕ್ಸ್ ಬುಧವಾರ ದಿನದ ಆರಂಭಿಕ ವಹಿವಾಟಿನಲ್ಲಿ 83 ಅಂಕ ಏರಿಕೆಯೊಂದಿಗೆ 34,029.14 ಕ್ಕೆ ತಲುಪಿತ್ತು. ದಿನದ ವಹಿವಾಟಿನಲ್ಲಿ 394 ಅಂಕ ಏರಿಕೆಯೊಂದಿಗೆ ಗರಿಷ್ಠ ಮಟ್ಟವಾದ 34,350.17 ಕ್ಕೆ ತಲುಪಿದ್ದ ಸೆನ್ಸೆಕ್ಸ್ ದಿನದ ವಹಿವಾಟಿನ ಅಂತ್ಯಕ್ಕೆ 290.36 ಅಂಕ ಏರಿಕೆ ಕಂಡು 344247.05ರಲ್ಲಿತ್ತು.ರಿಯಾಲ್ಟಿ, ಬ್ಯಾಂಕಿಂಗ್, ಹಣಕಾಸು, ಇಂಧನ ಮತ್ತು ಆರೋಗ್ಯ ಆರೈಕೆಯಂತಹ ವಲಯ ಸೂಚ್ಯಂಕಗಳು ಮಾರುಕಟ್ಟೆಯನ್ನು ಸುಧಾರಿಸಿವೆ. ಷೇರುಗಳ ಪೈಕಿ ಇಂಡಸ್‌ಇಂಡ್ ಬ್ಯಾಂಕ್, ಕೊಟಕ್ ಬ್ಯಾಂಕ್, ರಿಲಯನ್ಸ್ ಇಂಡಸ್ಟ್ರೀಸ್, ಎಚ್‌ಡಿಎಫ್‌ಸಿ, ಆಕ್ಸಿಸ್ ಬ್ಯಾಂಕ್ ಮತ್ತು ಎಸ್‌ಬಿಐ ಷೇರುಗಳಿಗೆ ಉತ್ತಮ ಖರೀದಿ ಬೆಂಬಲ ವ್ಯಕ್ತವಾಗಿ ಮಾರುಕಟ್ಟೆ ಸುಧಾರಿಸಲು ಬೆಂಬಲಿಸಿವೆ.ಆದರೂ, ಆಟೋ, ಲೋಹ, ತೈಲ ಮತ್ತು ಅನಿಲ ಹಾಗೂ ಬಂಡವಾಳ ಸರಕು ಷೇರುಗಳ ಹೆಚ್ಚಿನ ಮಾರಾಟದಿಂದ ಮಾರುಕಟ್ಟೆಯಲ್ಲಿನ ಮತ್ತಷ್ಟು ಲಾಭಕ್ಕೆ ತಡೆಯಾಗಿದೆ ಎಂದು ಮಧ್ಯವರ್ತಿಗಳು ಮಾಹಿತಿ ನೀಡಿದ್ದಾರೆ.