ಹಿರಿಯ ಸಾಹಿತಿ ಮಲಕಣ್ಣವರ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ
Senior writer Malakannavar elected as the President of Kannada Sahitya Sammelan
ಯರಗಟ್ಟಿ 12: ಜಾತ್ಯತೀತ, ಪಕ್ಷಾತೀತವಾಗಿ, ನಾವೆಲ್ಲರೂ ಒಂದು ಎಂಬ ಭಾವನೆಯೊಂದಿಗೆ ಯರಗಟ್ಟಿ ತಾಲೂಕಿನ 3ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆಗೊಳಿಸಿರುವುದು ನನ್ನ ಸೌಭಾಗ್ಯ ಎಂದು ಹಿರಿಯ ಸಾಹಿತಿ ನೀಲಕಂಠ ಮಲಕಣ್ಣವರ ಹೇಳಿದರು.
ಸಮ್ಮೇಳನ ಸ್ವಾಗತ ಸಮಿತಿ, ಕಸಾಪ ಹಾಗೂ ಸಾಹಿತ್ಯಸಕ್ತರ ವತಿಯಿಂದ ಐತಿಹಾಸಿಕ ಪರಂಪರೆಯುಳ್ಳ ತಲ್ಲೂರು ಗ್ರಾಮದಲ್ಲಿ ಫೆ. 18 ಬುಧವಾರ ಏರಿ್ಡಸಿದ 3ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಿಗೆ ಅಧಿಕೃತ ಆಹ್ವಾನ ಕಾರ್ಯಕ್ರಮದಲ್ಲಿ ಸನ್ಮಾನದೊಂದಿಗೆ ಆಹ್ವಾನ ಸ್ವೀಕರಿಸಿ ಮಾತನಾಡಿದರು. ತುಂಬಾ ಬಡತನದಲ್ಲಿರುವ ನನ್ನಂತಹ ವ್ಯಕ್ತಿಗೆ, ಹಿರಿಯ ಗೌರವವನ್ನು ಕೊಟ್ಟಿರುವುದಕ್ಕೆ ಸದಾ ಚಿರ ಋಣಿಯಾಗಿದ್ದೇನೆ. ನಮ್ಮೂರಿನ ಜನ ಎಲ್ಲ ಜಾತಿ ಜನಾಂಗದವರು ಒಂದು ಕುಟುಂಬ, ಒಂದು ಸಂಸಾರ ಎಂಬ ಭಾವನೆ ಗ್ರಾಮಸ್ಥರದ್ದಾಗಿದೆ. ಹಿರಿಯರು, ಸಾಹಿತಿಗಳು, ಸಮಾಜ ಸೇವಕರು, ಎಲ್ಲ ಸಂಘಟನೆಯವರು, ಎಲ್ಲ ಪಕ್ಷದವರು, ಮಾಧ್ಯಮದವರು ಸೇರಿದಂತೆ ಜಾತ್ಯತೀತವಾಗಿ ನನ್ನ ಸಾಹಿತ್ಯವನ್ನು ಗುರುತಿಸಿ ನನ್ನ ಆಯ್ಕೆ ಮಾಡಿದ್ದಾರೆ. ಎಲ್ಲರಿಗೂ ಚಿರ ಋಣಿಯಾಗಿದ್ದೇನೆ ಎಂದು ಹೇಳಿದರು.
ಈ ವೇಳೆ ಕಸಾಪ ಅಧ್ಯಕ್ಷ ಟಿ ಎಂ ಕಾಮಣ್ಣವರ, ಕಸಾಪ ಕಾರ್ಯದರ್ಶಿ ದೇವೇಂದ್ರ ಕಮ್ಮಾರ, ಕಸಾಪ ಸದಸ್ಯರಾದ ಎಸ್ ಎಸ್ ಕುರುಬಗಟ್ಪಿಮಠ, ಕಸಾಪಾ ಮಾಜಿ ಅಧ್ಯಕ್ಷ ರಾಜೇಂದ್ರ ವಾಲಿ, ಶಂಕರಗೌಡ ಪಾಟೀಲ, ಎಂ. ವ್ಹಿ. ಉಪ್ಪಿನ, ಎಂ. ಡಿ. ಸರದಾರ, ಎ. ಎಂ. ಬಾಣದಾರ, ಎಲ್. ಕೆ. ಪೂಜೇರ, ಡಿ. ಡಿ. ಭೋವಿ, ಮಹಾಂತೇಶ ಜಕಾತಿ, ಶಿವಾನಂದ ಯರಗಣವಿ, ಶಿವಾನಂದ ಮಲಕಣ್ಣವರ, ಮೋಹನ ಹಾದಿಮನಿ, ಶಿವಾನಂದ ಮಿಕಲಿ, ಬಿ. ಡಿ. ಪಾಟೀಲ, ಯಲ್ಲಪ್ಪ ಉಪ್ಪಾರ, ಗುರುದೇವಿ ಮಲಕಣ್ಣವರ ಸೇರಿದಂತೆ ಗ್ರಾಮದ ಹಿರಿಯರು ಕನ್ನಡಾಭಿಮಾನಿಗಳು ಇದ್ದರು.
ಪೊಲೀಸರ ವಾಹನ ಮೇಲೆ ಮುಗುಚಿಬಿದ್ದ ಲಾರಿ: ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು ಓರ್ವನಿಗೆ ಗಾಯ
ಕನ್ನಡಪರ ನಿರ್ಣಯಕ್ಕೆ ಮುಂದಾದ ಶಾಸಕ ಸೇಠ್ ಗೆ ಎಚ್ಚರಿಕೆ, ಗೊಡ್ಡು ಬೆದರಿಕೆ ಹಾಕಿದ ಝಫಾ ಮುಖಂಡ
ಸಿಸಿಬಿ ಪೊಲೀಸರ ದಾಳಿ: 10.31 ಲಕ್ಷ ಮೌಲ್ಯದ ಹೆರಾಯಿನ್, ವಸ್ತುಗಳ ವಶ ; ಮೂವರ ಬಂಧನ
ಎರಡು ಗುಂಪುಗಳ ನಡುವೆ ಮಾರಕಾಸ್ತ್ರ, ಕಬ್ಬಿನದ ರಾಡ್ ಗಳಿಂದ ಹೊಡೆದಾಟ : ವಿಡಿಯೋ ವೈರಲ್
ಬೈಲಹೊಂಗಲದಲ್ಲಿ ಮಳೆಯ ಅರ್ಭಟ : ನದಿಯಂತಾದ ರಸ್ತೆಗಳು, ನೀರಿನ ಸೆಳೆತಕ್ಕೆ ಸಿಲುಕಿದ ದ್ವಿಚಕ್ರ ವಾಹನಗಳು
ಕನ್ನಡಪರ ನಿರ್ಣಯಕ್ಕೆ ಹಿಂದೇಟು : ಪಾಲಿಕೆಯಲ್ಲಿ ನಿರ್ಣಯ ಮಂಡಿಸಲು ಮುಂದಾದ ಶಾಸಕ ಸೇಠ್ 