ಹಾವನೂರು ಗುತ್ತಲ ಬೆಳ್ಳಟ್ಟಿ ಮಾರ್ಗಗಳಿಗೆಯ ಹೆಚ್ಚು ಬಸ್ ಬಿಡುವಂತೆ ಹಿರಿಯ ನಾಗರಿಕರಿಂದ ಮನವಿ

ಹಾವನೂರು ಗುತ್ತಲ ಬೆಳ್ಳಟ್ಟಿ ಮಾರ್ಗಗಳಿಗೆಯ ಹೆಚ್ಚು ಬಸ್ ಬಿಡುವಂತೆ ಹಿರಿಯ ನಾಗರಿಕರಿಂದ ಮನವಿ Senior citizens request more buses on the Havanuru-Guttala-Bellatti routes

 ಲಕ್ಷ್ಮೇಶ್ವರ" 27 :  ಪಟ್ಟಣದಿಂದ ಹಾವನೂರು ಗುತ್ತಲ ಬೆಳ್ಳಟ್ಟಿ ಮಾರ್ಗಗಳಿಗೆ ಬೆಳಗಿನ ಸಮಯದಲ್ಲಿ ಸಂಚರಿಸುವ ಬಸ್ಸುಗಳನ್ನು ಬಿಟ್ಟರೆ ಮತ್ತೆ ಬಸ್ಸುಗಳು ಇರುವುದಿಲ್ಲ ಇದರಿಂದ ವೃದ್ಧರು ರೈತರು ವ್ಯಾಪಾರಸ್ಥರು ಶಾಲಾ ಕಾಲೇಜು ವಿದ್ಯಾರ್ಥಿಗಳು ನಿತ್ಯ ಸಾಕಷ್ಟು ತೊಂದರೆಯನ್ನು ಅನುಭವಿಸುವಂತಾಗಿದೆ ಅದಕ್ಕಾಗಿ ಹಾವನೂರು ಗುತ್ತಲ ಬೆಳ್ಳಟ್ಟಿ ಬೂದಿಹಾಳ ಕೊಕ್ಕರಗಂದಿ ನಾಗರಮುಡುವು ಬಿಜ್ಜೂರು ಕೊಂಚಿಗೇರಿ ಬೆಳ್ಳಟ್ಟಿ ಮಾರ್ಗವಾಗಿ ಲಕ್ಷ್ಮೇಶ್ವರ ಘಟಕದಿಂದ ಹೆಚ್ಚಿನ ಬಸ್ ಬಿಡಿಸಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪ್ರಧಾನ ಕಾರ್ಯದರ್ಶಿಗಳಾದ ಉಮೇಶ ಗೋವನಕೊಪ್ಪ ಅವರುಲಕ್ಷ್ಮೇಶ್ವರ ತಾಲೂಕು ರಾಜ್ಯ ಹಿರಿಯ ನಾಗರಿಕರ ಹಾಗೂ ನಿವೃತ್ತ ನೌಕರರ ಕ್ಷೇಮಾಭಿವೃದ್ಧಿ ಸಂಘಕ್ಕೆ ಮನವಿ ಸಲ್ಲಿಸಿದರು.

ಅವರ ಮನೆಗೆ ಸ್ಪಂದಿಸಿದ ಹಿರಿಯರ ನಾಗರಿಕರ ಹಾಗೂ ನಿವೃತ್ತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಸಿ ಆರ್ ಲಕ್ಕುಂಡಿಮಠ ಚಂಬಣ್ಣ ಬಾಳಿಕಾಯಿ ಐ ಎಸ ಮಡಿವಾಳರ ಶಿಬೆರ​‍್ಪ ವಾಲಿಶೆಟ್ಟರು ಅವರ ನೇತೃತ್ವದಲ್ಲಿ ಲಕ್ಷ್ಮೇಶ್ವರ ಸಾರಿಗೆ ಘಟಕದ ವ್ಯವಸ್ಥಾಪಕಿಯಾದ ಸವಿತಾ ಆದಿ ಅವರಿಗೆ ಮನವಿ ಸಲ್ಲಿಸಿ ಹೆಚ್ಚು ಬಸ್ ಬಿಡುವಂತೆ ಒತ್ತಾಯಿಸಿದರು ಮನವಿ ಸ್ವೀಕರಿಸಿದ ಸಾರಿಗೆ ಘಟಕದ ವ್ಯವಸ್ಥಾಪಕಿಅವರು ಸಂಬಂಧಿಸಿದ ಮೇಲಾಧಿಕಾರಿಗಳೊಂದಿಗೆ ಚರ್ಚಿಸಿ ಹೆಚ್ಚಿನ ಬಸ್ ಬಿಡುವ ವ್ಯವಸ್ಥೆ ಮಾಡುತ್ತೇನೆ ಎಂದು ಭರವಸೆ ನೀಡಿದರು