ಹಿರಿಯ ಸಾಹಿತಿ ಡಾ. ಜೋರಾಪೂರಗೆ ರಾಷ್ಟ್ರೀಯ ಗೌರವ ಪ್ರಶಸ್ತಿ ನೀಡಿ ಸನ್ಮಾನ
6
ಹಿರಿಯ ಸಾಹಿತಿ ಡಾ. ಜೋರಾಪೂರಗೆ ರಾಷ್ಟ್ರೀಯ ಗೌರವ ಪ್ರಶಸ್ತಿ ನೀಡಿ ಸನ್ಮಾನ
ಬೆಳಗಾವಿ 25: ನಗರದ ಹಿರಿಯ ಸಾಹಿತಿ, ಆಧ್ಯಾತ್ಮಿಕ ಚಿಂತಕ ಹಾಗೂ ರಾಷ್ಟ್ರೀಯ ಅಸ್ಮಿತೆಯ ಪಾಲಕರಾದ ಡಾ.ಸಿ.ಕೆ.ಜೊರಾಪುರರಿಗೆ ಮಾಯಾ ನಗರಿ ಮುಂಬೈನಲ್ಲಿ ಶನಿವಾರ 23ರಂದು ಅಂತರಾಷ್ಟ್ರೀಯ ಮಾನವ ಅಭಿವೃದ್ಧಿ ವಿಶ್ವವಿದ್ಯಾಲಯ, ಇಂಟರ್ನ್ಯಾಷನಲ್ ಅಕ್ರೆಡಿಶನ್ ಆರ್ಗನೈಸೇಷನ್ ಗಖಂ ಅಡಿಯಲ್ಲಿ ಸಾಧಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಮೈಸೂರು ಅಸೋಸಿಯೇಷನ್ ಬಾಂಬೆ, ಮಾತುಂಗಾದಲ್ಲಿ ರಾಷ್ಟ್ರೀಯ ಗೌರವ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ರಾಷ್ಟ್ರೀಯತೆ, ಧಾರ್ಮಿಕತೆ, ಸಾಂಸ್ಕೃತಿಕತೆಯನ್ನೊಳಗೊಂಡ ಕೃತಿಗಳನ್ನು ರಚನೆ ಮಾಡುವುದರ ಮೂಲಕ, ಉಪನ್ಯಾಸಗಳನ್ನು ಏರಿ್ಡಸುವುದು, ಸ್ವತಃ ಉಪನ್ಯಾಸ ನೀಡುವುದರ ಮೂಲಕ ರಾಷ್ಟ್ರೀಯತ್ವದ ಬಗೆಗೆ ಜಾಗೃತಿ ಮೂಡಿಸುವುದಲ್ಲದೇ ರಾಷ್ಟ್ರೀಯತ್ವವನ್ನು ಮೈಗೂಡಿಸಿಕೊಂಡಿರುವ ಕುಂದಾನಗರಿಯ ಹಿರಿಯ ಸಾಹಿತಿ ಡಾ. ಸಿ.ಕೆ. ಜೋರಾಪೂರ ಅವರಿಗೆ ’ರಾಷ್ಟ್ರೀಯ ಗೌರವ ಪ್ರಶಸ್ತಿ’ ನೀಡಿ ಗೌರವಿಸಿರುವುದು ಕುಂದಾನಗರಿ ಹಿರಿಯ ಸಾಹಿತಿಗೆ ಸಂದ ಗೌರವ ಎಂದರೆ ತಪ್ಪಾಗಲಾರದು. ಈ ಸಮಾರಂಭದ ಮುಖ್ಯ ಅತಿಥಿಗಳಾಗಿ ದಾದಾಸಾಹೇಬ್ ಫಾಲ್ಕೆಯವರ ಮೊಮ್ಮಗ ಚಂದ್ರಶೇಖರ ಪುಸಾಳ್ಕರ ಪಾಲ್ಕೆ ಹಾಗೂ ಮುಂಬೈ ಹೈಕೋರ್ಟನ ವಕೀಲರಾದ ಜಿ.ಎಂ. ವಾಗೀಶ, ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಡಾ. ಶಶಿಕಲಾ ಬಿ., ಗುಲ್ಬರ್ಗ ವಿಶ್ವವಿದ್ಯಾಲಯಯದ ಪ್ರಾಚಾರ್ಯ ಡಾ. ಮಂಗಳಾ ಎಸ್. ಪಟೇಲ್ ಮತ್ತು ಆರಿ್ಟ.ಡಿ. ಬ್ಲಡ್ ಬ್ಯಾಂಕ್ ಅಧಿಕಾರಿ, ಕೆಇಎಂ ಆಸ್ಪತ್ರೆ ಮುಂಬೈನ ಡಾ. ಅನಿಲ ಸ್ಯಾಮ್ಯುಯೆಲ್, ಆರ್ಮಿ ವಿಂಗನ ಚೀಪ್ ಆಫೀಸರ್ ಅಮರೇಶ ಪಾಟೀಲ, ಮುಂತಾದ ಗಣ್ಯರು ಉಪಸ್ಥಿತರಿದ್ದರು. ಸಮಾರಂಭದ ಅಧ್ಯಕ್ಷತೆಯನ್ನು ರಾಷ್ಟ್ರೀಯ, ಅಂತರಾಷ್ಟ್ರೀಯ ಸಾಂಸ್ಕೃತಿಕ ರಾಯಭಾರಿ ಡಾ. ಮಹೇಶಗೌಡ ಹಾಗೂ ಗೌರವಾಧ್ಯಕ್ಷರಾಗಿ ಎಡಿಯು ಸಂಸ್ಥಾಪಕ ನಿರ್ದೇಶಕ, ಆಯ್.ಬಿ.ಸಿ.ಸಿ.ಆಯ್. ಜನರಲ್ ಕಾರ್ಯದರ್ಶಿ ಎಂ. ರತ್ನಾಕರ ಶೆಟ್ಟಿ ವಹಿಸಿದ್ದರು. ಸಮಾರಂಭವು ನೂರಾರು ಪ್ರೇಕ್ಷಕರ ಮತ್ತು ಗಣ್ಯಮಾನ್ಯರ ಸಮ್ಮುಖದಲ್ಲಿ ನೆರವೇರಿತು.
ದ್ವಿಚಕ್ರವಾಹನ ಕಳ್ಳರ ಬಂಧನ : 6.10 ಲಕ್ಷ ಮೌಲ್ಯದ 14 ವಾಹನಗಳ ವಶಕ್ಕೆ ಎಸ್ ಪಿ ರಾಮರಾಜನ್
ಸಾವಿರಾರು ಕೋಟಿ ವಂಚನೆ, ವರ್ಗಾವಣೆ ಆರೋಪ: ಶಿವಾನಂದ ನೀಲಣ್ಣವರ ಬಂಧನ
ಬೆಳಗಾವಿಯಲ್ಲಿ ಶಿವಾನಂದ ನೀಲಣ್ಣನವರಗೆ ಅಧಿಕಾರಿಗಳ ಶಾಕ್ : ಶಿವಂ ಅಸೋಸಿಯೇಟ್ ಕಚೇರಿಗಳ ಮೇಲೆ ದಾಳಿ
24 ಗಂಟೆಯಲ್ಲಿ ಕಾರು ಕಳ್ಳತನ ಪ್ರಕರಣ ಭೇಧಿಸಿದ ಪೊಲೀಸರು : ಖದೀಮರ ಪತ್ತೆಗಾಗಿ ಶೋಧ
ಗಡಿ ಮರಾಠಿ ಶಾಲೆಗಳಲ್ಲಿ ಕನ್ನಡ ಕಹಳೆ: 7 ಕನ್ನಡ ಪ್ರಾಥಮಿಕ, 2 ಪ್ರೌಡ ಶಾಲೆಗಳಿಗೆ ರಾಜ್ಯ ಸರಕಾರ ಗ್ರಿನ್ ಸಿಗ್ನಲ್
ಅಂತರಾಜ್ಯ ಖದೀಮನ ಬಂಧನ : 45.56 ಲಕ್ಷ ಮೌಲ್ಯದ ಚಿನ್ನಾಭರಣ, ದ್ವಿಚಕ್ರ ವಾಹನ ವಶಕ್ಕೆ 