ಹಿರಿಯ ಪತ್ರಕರ್ತ ಗೋನಾಳ ರಿಂದ ದತ್ತಿ ನಿಧಿ ಗೆ ರೂ. 25, ಸಾವಿರ ಠೇವಣಿ
Senior Journalist Gonala donates Rs. 25, thousand deposit
ಕೊಪ್ಪಳ ಜುಲೈ 3: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕೊಪ್ಪಳ ಜಿಲ್ಲಾ ಘಟಕಕ್ಕೆ ಸಂಘದ ದತ್ತಿನಿಧಿಗೆ ರೂಪಾಯಿ 25,000 ಠೇವಣಿಯನ್ನು ಇಲ್ಲಿಯ ಹಿರಿಯ ಪತ್ರಕರ್ತರು ಹಾಗೂ ಸಂಘದ ರಾಷ್ಟ್ರೀಯ ಮಂಡಳಿ ಸದಸ್ಯರಾದ ಜಿ.ಎಸ್. ಗೋನಾಳ್ ರವರು ತಮ್ಮ ಅಜ್ಜ ದಿ, ದೊಡ್ಡ ಪಂಪಣ್ಣ ಗೂಳಪ್ಪರೆಡ್ಡಿ ಗೋನಾಳ ರವರ ಸ್ಮ್ರರಣಾರ್ಥವಾಗಿ ದತ್ತಿ ನಿಧಿ ಠೇವಣಿ ಪ್ರಮಾಣ ಪತ್ರವನ್ನು ಗುರುವಾರದಂದು ಸಂಘದ ಖಾತೆಗೆ ಠೇವಣಿ ಜಮಾ ಮಾಡಿ ಠೇವಣಿಯ ಪ್ರಮಾಣ ಪತ್ರವನ್ನು ಸಂಘದ ಜಿಲ್ಲಾಧ್ಯಕ್ಷರಾದ ಹನುಮಂತ ಹಳ್ಳಿಕೇರಿ ಅವರಿಗೆ ನೀಡಿದರು.
ಠೇವಣಿ ಹಣದಿಂದ ಬರುವ ಬಡ್ಡಿ ಹಣದಲ್ಲಿ ಪ್ರತಿ ವರ್ಷ ಜುಲೈ ತಿಂಗಳಲ್ಲಿ ನಡೆಯಲಿರುವ ಪತ್ರಿಕಾ ದಿನಾಚರಣೆ ಸಂದರ್ಭದಲ್ಲಿ ಪತ್ರಕರ್ತರೊಬ್ಬರಿಗೆ ಅತ್ಯುತ್ತಮ ವರದಿಗೆ ನೀಡುವ ಪ್ರಶಸ್ತಿ ಮತ್ತು ಬಹುಮಾನಕ್ಕಾಗಿ ಬಳಸಿಕೊಳ್ಳಬಹುದು ಎಂದು ತಿಳಿಸಲಾಗಿದೆ, ಜಿ ,ಎಸ್. ಗೋನಾಳ ರವರ ಈ ಕಾರ್ಯ ಅತ್ಯಂತ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಹನುಮಂತ ಹಳ್ಳಿಕೇರಿ ರವರು ಸಂಘದ ಪರವಾಗಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಅವರೊಂದಿಗೆ ಸಂಘದ ರಾಜ್ಯ ಕಾರ್ಯಕಾರಣಿ ಸಮಿತಿ ಸದಸ್ಯ ಎಂ ಸಾಧಿಕ್ ಅಲಿ, ರಾಜ್ಯ ಕಾರ್ಯಕಾರಣಿ ಸಮಿತಿ ವಿಶೇಷ ಅಹ್ವಾನಿತ ಸದಸ್ಯ ಎಚ್,ಎಸ್, ಹರೀಶ್, ಸಂಘದ ಜಿಲ್ಲಾ ಕಾರ್ಯದರ್ಶಿ ವೀರಣ್ಣ ಕಳ್ಳಿಮನಿ, ಪತ್ರಿಕಾ ಭವನ ಕನ್ನಡ ಸಮಿತಿ ಅಧ್ಯಕ್ಷ ಎನ್,ಎಂ ದೊಡ್ಡಮನಿ ಅಲ್ಲದೆ ಠೇವಣಿ ಪ್ರಮಾಣ ಪತ್ರ ನೀಡಿದ ಕೊಪ್ಪಳ ಯುನೈಟೆಡ್ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘ ನಿಯಮಿತ ಬ್ಯಾಂಕಿನ ಸಿಇಓ ಗಿರಿಜಾ ವಸ್ತ್ರದ, ಕ್ಯಾಶಿಯರ್ ಅರ್ಿತಾ ಪಾಟೀಲ್, ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 