ಸ್ವಾರ್ಥ ತ್ಯಾಗ ಮಾಡಿ ವಿಜಯಪುರಕ್ಕೆ 371ಜೆ ಮೀಸಲಾತಿ ಒದಗಿಸಬೇಕು : ರಾಜ್ಯಾಧ್ಯಕ್ಷ ಕೆಂಗನಾಳ
Selfishness should be sacrificed and 371J reservation should be provided to Vijayapura: State Presid
ವಿಜಯಪುರ 25: ವಿಜಯಪುರ ಜಿಲ್ಲೆಗೆ 371 ಜೆ ಕಲ್ಯಾಣ ಕರ್ನಾಟಕ ಮೀಸಲಾತಿ ನೀಡುವಂತೆ ಒತ್ತಾಯಿಸಿ ರೈತ ಭಾರತ ಪಕ್ಷದಿಂದ ನಗರದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ನಗರದ ಗೋಲಗುಂಬಜ್ ಗೇಟ್‌ದಿಂದ ಕುದುರೆ ಟಾಂಗಾದ ಮೂಲಕ ಪ್ರಾರಂಭವಾದ ಪ್ರತಿಭಟನಾ ಮೆರವಣಿಗೆಯುದ್ದಕ್ಕೂ ಬಡಾವಣೆಗಳ ಜನರಿಗೆ ಕರ ಪತ್ರ ವಿತರಿಸಿ ಜಿಲ್ಲೆಯ ಶಾಸಕರು ಮತ್ತು ಸಂಸದರು ಮೀಸಲಾತಿ ವಿಚಾರದಲ್ಲಿ ಜನರಿಗೆ ಮಾಡಿದ ಮೋಸ ವಂಚನೆಗಳ ಬಗ್ಗೆ ತಿಳುವಳಿಕೆ ಮೂಡಿಸಿದರು.
ನಂತರ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳು, ಪ್ರಧಾನ ಮಂತ್ರಿ, ಕೇಂದ್ರ ಗೃಹಮಂತ್ರಿ, ರಾಜ್ಯಪಾಲರು, ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗಳಿಗೆ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ರೈತ ಭಾರತ ಪಕ್ಷದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಕೆಂಗನಾಳ ಮಾತನಾಡಿ, ರಾಜ್ಯದಲ್ಲಿ 371 ಜೆ ಮೀಸಲಾತಿ ವಿಚಾರ ಚರ್ಚೆಯಲ್ಲಿರುವಾಗ ಜಿಲ್ಲೆಯ ರಾಜಕಾರಣಿಗಳು ಮೀಸಲಾತಿ ಬಗ್ಗೆ ಧ್ವನಿ ಎತ್ತದೆ ಜಿಲ್ಲೆಯ ಜನರು ನೀಡಿದ ಅಧಿಕಾರವನ್ನು ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳುತ್ತ ಬಂದಿದ್ದಾರೆ. ಇಲ್ಲಿಯ ಜನರ ಮುಗ್ದತೆಯೇ ಇವರ ಅಧಿಕಾರದ ಬಂಡವಾಳವಾಗಿದೆ. ಕಳೆದ ಲೋಕಸಭೆಯ ಚುನಾವಣೆ ಸಂದರ್ಭದಲ್ಲಿ ನಮ್ಮ ಪಕ್ಷದಿಂದ ಮೀಸಲಾತಿ ಭರವಸೆ ನೀಡಿದ್ದನ್ನು ಹೈಜಾಕ್ ಮಾಡಿ ಕಾಂಗ್ರೆಸ್ ಪಕ್ಷದವರು ಜಿಲ್ಲೆಗೆ ಮೀಸಲಾತಿ ಒದಗಿಸುವುದಾಗಿ ಪ್ರಣಾಳಿಕೆಯಲ್ಲಿ ಭರವಸೆ ನೀಡಿದ್ದರು. ಚುನಾವಣೆ ಮುಗಿದ ನಂತರ ಮೀಸಲಾತಿ ಬಗ್ಗೆ ಮಾತನಾಡದೆ ಜಿಲ್ಲೆೆಯ ಜನರಿಗೆ ಅನ್ಯಾಯ ಎಸಗಿದ್ದಾರೆ. ಎಸಗುತ್ತಿದ್ದಾರೆ. ಇದು ಅವರ ಸ್ವಾರ್ಥ ರಾಜಕೀಯದ ಪರಮಾವಧಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ರಾಜಕಾರಣಿಗಳು ತಮ್ಮ ಸ್ವಾರ್ಥ ತ್ಯಾಗ ಮಾಡಿ ವಿಜಯಪುರಕ್ಕೆ 371ಜೆ ಮೀಸಲಾತಿ ಒದಗಿಸಬೇಕೆಂದು ಒತ್ತಾಯಿಸಿದರು.
ಅಧಿವೇಶನದಲ್ಲಿ ವಿಜಯಪುರ ಜಿಲ್ಲೆಗೆ 371 ಜೆ ಕುರಿತು ಧ್ವನಿ ಎತ್ತಿ ಇಲ್ಲವಾದಲ್ಲಿ ರಾಜಕೀಯ ಸನ್ಯಾಸತ್ವ ಸ್ವೀಕರಿಸಿ ಎಂದು ಸವಾಲು ಹಾಕಲಾಗಿತ್ತು ನಮ್ಮ ಸವಾಲು ಸ್ವೀಕರಿಸಿದ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲರು ಮೀಸಲಾತಿ ಕುರಿತು ಧ್ವನಿ ಎತ್ತಿದ್ದಾರೆ. ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವರಾದ ಎಂ.ಬಿ.ಪಾಟೀಲ, ಸಚಿವ ಶಿವಾನಂದ ಪಾಟೀಲ ಸೇರಿದಂತೆ ಇನ್ನುಳಿದ 6 ಶಾಸಕರು ಹಾಗೂ ನಾಲ್ಕು ಜನ ವಿಧಾನ ಪರಿಷತ್ತಿನ ಸದಸ್ಯರು ಮೀಸಲಾತಿ ಕುರಿತು ಧ್ವನಿ ಎತ್ತದೆ ಕೇವಲ ವಯಕ್ತಿಕ ಸ್ವಾರ್ಥಕ್ಕಾಗಿ ಅಧಿವೇಶನದ ಚರ್ಚೆಗಳಲ್ಲಿ ಭಾಗವಹಿಸಿ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳನ್ನು ಮಾರಾಟಕ್ಕೆ ಇಟ್ಟು ಹಿಂಬಾಗಿಲ ಮೂಲಕ ತಮ್ಮ ಸಂಸ್ಥೆಗಳಲ್ಲಿ ಮರ್ಜ ಮಾಡಿಕೊಳ್ಳಲು ಯತ್ನಿಸುತ್ತಿರುವುದನ್ನು ಜಿಲ್ಲೆಯ ಜನ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಮುಂಬರುವ ದಿನಗಳಲ್ಲಿ ಇವರಿಗೆ ಜಿಲ್ಲೆಯ ಜನ ತಕ್ಕ ಪಾಠ ಕಲಿಸಲಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಈ ಸಂದರ್ಭದಲ್ಲಿ ಅಂಬಾಜಿ ನಾರಾಯಣಕರ ಮಾತನಾಡಿ, ಜಿಲ್ಲೆಯ ಶಾಸಕರು, ಸಂಸದರು ತಮ್ಮ ಅಧಿಕಾರ, ಹುದ್ದೆ ಶಾಶ್ವತ ಎಂಬ ಹುಚ್ಚು ಭ್ರಮೆಯಲ್ಲಿದ್ದಾರೆ. ಇವರಿಗೆ ಅಧಿಕಾರದ ಮಧ ಏರಿದೆ. ವಿಜಯಪುರ ಜಿಲ್ಲೆ ಕಲ್ಯಾಣ ಶರಣರ ನಾಡು ಶಾಸಕರು, ಸಂಸದರು ಬಸವಾದಿ ಶರಣರ ವಚನ ಸಾಹಿತ್ಯವನ್ನು ಓದಿಕೊಂಡು ಸಮ ಸಮಾಜ ನಿರ್ಮಾಣಕ್ಕಾಗಿ ವಯಕ್ತಿಕ ಸ್ವಾರ್ಥವನ್ನು ಬಿಟ್ಟು ಜಿಲ್ಲೆಯ ಜನರ ಸರ್ವತೋಮುಖ ಅಭಿವೃದ್ಧಿಗಾಗಿ 371 ಜೆ ಮೀಸಲಾತಿ ಒದಗಿಸಲು ಪ್ರಾಮಾಣಿಕ ಪ್ರಯತ್ನಮಾಡಬೇಕು. ಇಲ್ಲವಾದಲ್ಲಿ ರಾಜೀನಾಮೆ ನೀಡಿ ಸಾರ್ವಜನಿಕ ಬದುಕಿನಿಂದ ತೊಲಗಬೇಕು ಎಂದರು.
ಈ ಸಂದರ್ಭದಲ್ಲಿ ಶ್ರೀಶೈಲ ಗಣತಿ, ಯಮನಪ್ಪ ಮಳಜಿ, ಚಂದ್ರಶೇಖರ ರಾಠೋಡ, ಇಬ್ರಾಹಿಂ ಗಣಿಹಾರ, ಸಿದ್ದಪ್ಪ ಪೂಜಾರಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 