ಸ್ವಯಂ ಉದ್ಯೋಗದಿಂದ ಸ್ವಾವಲಂಬನೆ ಸಾಧ್ಯ

Self-reliance is possible through self-employment

ಸ್ವಯಂ  ಉದ್ಯೋಗದಿಂದ ಸ್ವಾವಲಂಬನೆ ಸಾಧ್ಯ 

ಹಿಡಕಲ್ ಡ್ಯಾಂ.10 : ಮಹಿಳೆಯರು ತಮ್ಮ ಬಿಡುವಿನ ವೇಳೆಯಲ್ಲಿ ಕುಟುಂಬ ನಿರ್ವಹಣೆ  ಜೊತೆಗೆ ಸ್ವಯಂ ಉದ್ಯೋಗಗಳಲ್ಲಿ ತೊಡಗಿಕೊಂಡು ಆರ್ಥಿಕ ಪ್ರಗತಿಯ ಜೊತೆಗೆ ಸ್ವಾವಲಂಬಿಗಳಾಗಿ ಬದುಕಬಹುದೆಂದು ಮಹಿಳಾ ಕಲ್ಯಾಣ ಸಂಸ್ಥೆಯ ಸಂಯೋಜಕರಾದ ಎಂ.ಎಸ್‌.ಚೌಗಲಾ ಅಭಿಪ್ರಾಯಪಟ್ಟರು. 

    ಬೆಂಗಳೂರಿನ ಏಫ್‌.ವ್ಹಿ.ಟಿ.ಆರ್‌.ಎಸ್‌. ಸಂಸ್ಥೇಯ ಸಹಯೋಗದಲ್ಲಿ ಮಹಿಳಾ ಕಲ್ಯಾಣ ಸಂಸ್ಥೆಯ ಶಕ್ತಿ ಸದನ ಕೇಂದ್ರದಲ್ಲಿ ಸ್ವಯಂ ಉದ್ಯೋಗ ತರಬೇತಿ ಪಡೆದ ಫಲಾನುಭವಿಗಳಿಗೆ ಟೇಲರಿಂಗ ಕಿಟ್ ವಿತರಣಾ ಸಮಾರಂಭದಲ್ಲಿ ಮಾತನಾಡಿದರು.  ಉತ್ತಮ ಸಂವಹನ, ವಿನೂತನತೆ, ಗ್ರಾಹಕರೊಂದಿಗೆ ಉತ್ತಮ ಸಂಪರ್ಕ, ಸಮಯ ನಿರ್ವಹಣೆ, ಮುಂತಾದ ಗುಣಗಳನ್ನು ಅಳವಡಿಸಿಕೊಂಡು ಯಶಸ್ವಿ ಉದ್ಯಮಿಗಳಾಗಬೇಕು ಎಂದು ಸಲಹೆ ನೀಡಿದರು.  

     ತರಬೇತಿದಾರರಾದ ಸುರೇಖಾ.ಡಿ.ಪಾಟೀಲ, ಬಸವರಾಜ ಮಣ್ಣಿಕೇರಿ, ಶ್ರೀಮತಿ ಮಂದಾಕಿನಿ ಹಟ್ಟಿ ಉಪಸ್ಥಿತರಿದ್ದರು.  ಹಿಡಕಲ್ ಡ್ಯಾಂ ಮತ್ತು ಸಿಂಧಿಹಟ್ಟಿ ಗ್ರಾಮಗಳಲ್ಲಿ ಜರುಗಿದ 30 ಕ್ಕೂ ಹೆಚ್ಚು ಫಲಾನುಭವಿಗಳಿಗೆ ಉಚಿತ ಹೊಲಿಗೆ ಪರಿಕರಗಳನ್ನು ವಿತರಿಸಲಾಯಿತು. ಕರ್ನಾಟಕ ಪಬ್ಲಿಕ್ ಸ್ಕೂಲ್ ಪ್ರಾಚಾರ್ಯ ಕಿರಣ ಚೌಗಲಾ, ಶ್ರೀಮತಿ ಶಾಹೀನ ಹೊಂಬಾಳ ಉಪಸ್ಥಿತರಿದ್ದರು.  ರೇಡಿಯೋ ಕೇಂದ್ರದ ಮೀರಾ ಚೇತನ, ಕುಲಕರ್ಣಿ ಕಾರ್ಯಕ್ರವನ್ನು ನಿರೂಪಿಸಿ ವಂದಿಸಿದರು.