ವಿದ್ಯಾರ್ಥಿಗಳಲ್ಲಿ ಸ್ವಾಭಿಮಾನ ಮತ್ತು ಧನಾತ್ಮಕ ಚಿಂತನೆ ಬೆಳೆಸಬೇಕು: ಎಂ.ಕೆ. ಪತ್ತಾರ್

ವಿದ್ಯಾರ್ಥಿಗಳಲ್ಲಿ ಸ್ವಾಭಿಮಾನ ಮತ್ತು ಧನಾತ್ಮಕ ಚಿಂತನೆ ಬೆಳೆಸಬೇಕು: ಎಂ.ಕೆ. ಪತ್ತಾರ್ Self-esteem and positive thinking should be developed among students: M.K. Pattar

ವಿದ್ಯಾರ್ಥಿಗಳಲ್ಲಿ ಸ್ವಾಭಿಮಾನ ಮತ್ತು ಧನಾತ್ಮಕ ಚಿಂತನೆ ಬೆಳೆಸಬೇಕು: ಎಂ.ಕೆ. ಪತ್ತಾರ್  

ಚಿಕ್ಕೋಡಿ 04: ಒಂದು ಉತ್ತಮ ವಿವೇಚನೆಗೆ ಇತಿಹಾಸವನ್ನು ಸೃಷ್ಟಿಸುವ ಶಕ್ತಿ ಇದೆ. ಬೆಳೆಯುವ ಮಕ್ಕಳಲ್ಲಿ ಸ್ವಾಭಿಮಾನದ ಪಾಠದೊಂದಿಗೆ ಧನಾತ್ಮಕ ಅಂಶಗಳನ್ನು ಬೆಳೆಸಬೇಕು ಎಂದು ಹಿರಿಯ ಶಿಕ್ಷಕರಾದ ಎಂ.ಕೆ. ಪತ್ತಾರ್ ಹೇಳಿದರು.ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆ ಹಾಗೂ ಕಲಿಕೆಯ ಗುಣಮಟ್ಟ ಹೆಚ್ಚಿಸುವ ಉದ್ದೇಶದಿಂದ ಚೌಸನ್ ಶಿಕ್ಷಣ ಮಹಾವಿದ್ಯಾಲಯ ಹಾಗೂ ಸರ್ಕಾರಿ ಪ್ರೌಢಶಾಲೆ ಕೇರೂರ್ ಇವರ ಸಂಯುಕ್ತ ಆಶ್ರಯದಲ್ಲಿ ಕೇರೂರ್ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ಸಮೂಹ ಪಾಠ ಬೋಧನೆ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು. ಚೌಸನ್ ಫೌಂಡೇಶನ್ ನಡೆಸುತ್ತಿರುವ ಶೈಕ್ಷಣಿಕ ಚಟುವಟಿಕೆಗಳು ವಿದ್ಯಾರ್ಥಿಗಳಲ್ಲಿ ಕಲಿಕೆಯ ಆಸಕ್ತಿಯನ್ನು ಹೆಚ್ಚಿಸುತ್ತಿವೆ. ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಗೆ ಉತ್ತೇಜನ ನೀಡುವ ಉದ್ದೇಶದಿಂದ ನೀಡಲಾಗುತ್ತಿರುವ ಪ್ರಮಾಣಪತ್ರಗಳು ಹಾಗೂ ಸ್ಮರಣಿಕೆಗಳು ಅತ್ಯಂತ ಪ್ರೇರಣಾದಾಯಕವಾಗಿವೆ ಎಂದರು. ಗ್ರಾಮೀಣ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುತ್ತಿರುವ ಚೌಸನ್ ಫೌಂಡೇಶನ್ ವ್ಯವಸ್ಥಾಪಕರಾದ ಸುರೇಂದ್ರನಾಥ ಟಿ. ಚೌಗುಲೆ ಹಾಗೂ ಮಾಜಿ ಶಾಸಕರಾದ ಶಕುಂತಲಾ ಟಿ. ಚೌಗುಲೆ ಅವರ ಕಾರ್ಯ ಶ್ಲಾಘನೀಯವಾಗಿದೆ ಎಂದು ಹೇಳಿದರು.ಅತಿಥಿಗಳಾಗಿ ಭಾಗವಹಿಸಿದ್ದ ಪ್ರಾಧ್ಯಾಪಕರಾದ ಡಾ. ಎನ್‌.ಎಸ್‌. ಸಿಂದೆ ಅವರು, ಬದುಕಿನ ಯಶಸ್ಸಿಗೆ ಅಂಕಗಳೇ ಆಧಾರವಲ್ಲ. ಸಾಮಾನ್ಯ ಜ್ಞಾನ ಹಾಗೂ ಬೌದ್ಧಿಕ ವಿಕಸನದತ್ತ ಶಿಕ್ಷಕರು ಮತ್ತು ಪಾಲಕರು ಶ್ರಮಿಸಬೇಕು. ವಿದ್ಯಾರ್ಥಿಗಳಲ್ಲಿ ಸಮಾಜಮುಖಿ ಚಿಂತನೆಯನ್ನು ಬೆಳೆಸುವುದು ಅಗತ್ಯವೆಂದರು.ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕರಾದ ಡಾ. ಕೆ.ಡಿ. ಕನಕಗಿರಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕಲಿಕೆಯಲ್ಲಿ ಗುಣಾತ್ಮಕ ಸುಧಾರಣೆ ತರುವ ಸಲುವಾಗಿ ವಿಷಯವಾರು ಪರೀಕ್ಷೆ ಹಾಗೂ ಚಿತ್ರಕಲಾ ಸ್ಪರ್ಧೆ ಆಯೋಜಿಸಲಾಗಿತ್ತು. ಪರೀಕ್ಷೆಯಲ್ಲಿ ಅಗ್ರ ಮೂರು ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಹಾಗೂ ಭಾಗವಹಿಸಿದವರಿಗೆ ಪ್ರಶಸ್ತಿ ಪತ್ರ ಮತ್ತು ಬಹುಮಾನ ವಿತರಿಸಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯೋಪಾಧ್ಯಾಯರಾದ ಆರಿ​‍್ಟ. ಕಾಂಬ್ಳೆ ವಹಿಸಿದ್ದರು. ಶಿಕ್ಷಕರಾದ ಆರ್‌.ಎ. ದೇವಋಷಿ, ಎನ್‌.ಜಿ. ಬೊಂಗಾಳೆ, ಎಂ.ಎಂ. ಮಗದುಮ್, ಎಂ.ಎಚ್‌. ರಾವುತಪ್ಪ, ಎಸ್‌.ಆರ್‌. ಚೌಗುಲೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.ಕಾರ್ಯಕ್ರಮವನ್ನು ರಂಜಿತ್ ಕೊಕ್ಕಾಟೆ ನಿರ್ವಹಿಸಿದರು. ಪ್ರಿಯಾಂಕಾ ದೇವನಗೋಳ ಸ್ವಾಗತಿಸಿದರು. ಪ್ರೀತಿ ವಡ್ಡರ್ ಸಂಗಡಿಗರು ಪ್ರಾರ್ಥನೆ ಗೀತೆ ಹಾಡಿದರು. ಮಾಲಾಶ್ರೀ ಸಂಗಡಿಗರು ಸ್ವಾಗತಿ ಗೀತೆ ಹಾಡಿದರು. ಅಕ್ಷಯ ಪಟ್ಟಣಶೆಟ್ಟಿ ವಂದಿಸಿದರು.