ಪಾರದರ್ಶಕತೆಯಿಂದ ಆಶ್ರಯ ಯೋಜನೆಯ ಫಲಾನುಭವಿಗಳ ಆಯ್ಕೆ: ಮನಗೂಳಿ

ಪಾರದರ್ಶಕತೆಯಿಂದ ಆಶ್ರಯ ಯೋಜನೆಯ ಫಲಾನುಭವಿಗಳ ಆಯ್ಕೆ: ಮನಗೂಳಿ Selection of beneficiaries of the shelter scheme should be done with transparency: Managooli

ಸಿಂದಗಿ 26: ಆಶ್ರಯ ಯೋಜನೆಯ ಮನೆಗಳನ್ನು ಲಾಟರಿ ಮೂಲಕ ಆಯ್ಕೆ ಮಾಡುವ ಮೂಲಕ ಪಾರದರ್ಶಕತೆಯಿಂದ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುವುದು ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು. 

ಪಟ್ಟಣದ ಪುರಸಭೆ ಸಭಾಭವನದಲ್ಲಿ ಬುಧವಾರ ಜರುಗಿದ ಆಶ್ರಯ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.  

2021-22ನೇ ಸಾಲಿನ ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮದಡಿಯಲ್ಲಿನ 750 ಹೆಚ್ಚುವರಿ ಮನೆಗಳ ಫಲಾನುಭವಿಗಳ ಆಯ್ಕೆ ಪ್ರಕ್ರೀಯೆಯಲ್ಲಿ ಪಾರದರ್ಶಕತೆಯಿರಬೇಕು. ವರ್ಗವಾರು ಆಯ್ಕೆಯಾಗಬೇಕು. 750 ವಸತಿ ಯೋಜನೆಯ ಮನೆಗಳಲ್ಲಿ 494 ಸಾಮಾನ್ಯ, 129 ಪರಿಶಿಷ್ಟ ಜಾತಿ, 52 ಪರಿಶಿಷ್ಟ ಪಂಗಡ ಹಾಗೂ 75 ಅಲ್ಪಸಂಖ್ಯಾತರಿಗೆ ಹಂಚಿಕೆಯಾಗಬೇಕು. ಈಗಾಗಲೇ 389 ಫಲಾನುಭವಿಗಳ ಆಯ್ಕೆ ಮಾಡಲಾಗಿದೆ. ಇನ್ನೂಳಿದ ಫಲಾನುಭವಿಗಳನ್ನು ವರ್ಗವಾರು ಆಯ್ಕೆ ಮಾಡಬೇಕು. ನಿಗದಿತ ಸಂಖ್ಯೆಯಂತೆ ವರ್ಗವಾರು ಫಲಾನುಭವಿಗಳ ಆಯ್ಕೆಯಾಗಬೇಕು ಎಂದು ಹೇಳಿದರು. 

175 ಅನರ್ಹ ಫಲಾನುಭವಿಗಳು ಎಂದು ಗುರುತಿಸಲಾಗಿದೆ. ಅವರನ್ನು ಹಿಂದಿನ ಠರಾವದಿಂದ ಕೈಬಿಡಲಾಗುವುದು. 750 ಹೆಚ್ಚುವರಿ ಮನೆಗಳ ಫಲಾನುಭವಿಗಳನ್ನು ಸ್ಥಳಿಯರನ್ನು ಆಯ್ಕೆ ಮಾಡಲಾಗುವುದು. ಸ್ಥಳಿಯ ವಾಸ್ಥಳದ ದಾಖಲೆ ನೀಡಬೇಕು. ಆಶ್ರಯ ಯೋಜನೆಯ ಮನೆಗಳ ಆಯ್ಕೆಯನ್ನು ನಿಗದಿ ಪಡೆಸಿದಂತೆ ವರ್ಗವಾರು ಪಾರದರ್ಶಕತೆಯಿಂದ ಆಯ್ಕೆ ಮಾಡಲಾಗುವುದು ಎಂದು ಸ್ಪಷ್ಟಪಡೆಸಿದರು. 

129 ಪರಿಶಿಷ್ಟ ಫಲಾನುಭವಿಗಳಲ್ಲಿ ಈಗಾಗಲೇ 65 ಜನ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. ಇನ್ನೂಳಿದ 64 ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುವುದು. ವಸತಿ ಯೋಜನೆಗಳ ಹಂಚಿಕೆಯಲ್ಲಿ ಶಾಸಕರು, ಪುರಸಭೆ ಅಧ್ಯಕ್ಷರಿಗೆ, ಅಧಿಖಾರಿಗಳಿಗೆ ಜವಾಬ್ದಾರಿಯಿದೆ ಅಷ್ಟೇ ಸಾರ್ವಜನಿಕರ ಜವಾಬ್ದಾರಿಯಿದೆ. ನೋಟಿಫಿಕೇಶನ ಕರೆಯಲಾಗುವುದು. ಸರಿಯಾಗಿ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬೇಕು ಎಂದು ಮನವಿ ಮಾಡಿಕೊಂಡರು. 

ಪುರಸಭೆ ಅಧ್ಯಕ್ಷ ಡಾ.ಶಾಂತವೀರ ಮನಗೂಳಿ, ಆಶ್ರಯ ಕಮೀಟಿ ಸದಸ್ಯರಾದ ಮಲ್ಲಿಕಾರ್ಜುನ ಸದುಗೋಳ, ಶೈಲಾ ಪೂಜಾರಿ, ಭೀಮಾಶಂಕರ ರೋಡಗಿ, ರಾಜಾಅಹ್ಮದ ಖೇಡ, ಮುಖ್ಯಾಧಿಕಾರಿ ಎಸ್‌. ರಾಜಶೇಖರ, ಹಿರಿಯ ಆರೋಗ್ಯ ನೀರೀಕ್ಷಕ ನಬಿರಸೂಲ ಉಸ್ತಾದ, ಅಧಿಕಾರಿ ಸಿದ್ದು ಅಂಗಡಿ, ಅಭಿಯಂತರ ದಯಾನಂದ ಇವಣಿ, ಸಚಿನ ಮೋರಟಗಿ, ಖ್ಯಾತಪ್ಪ ಕುಂಬಾರ, ದತ್ತಾತ್ರೇಯ ಹಳ್ಳಿ ಅವರು ಚರ್ಚೆಯಲ್ಲಿ ಭಾಗವಹಿಸಿದ್ದರು.