ಮಾತೋಶ್ರೀ ರತ್ನಮ್ಮ ಹೆಗ್ಗಡೆ ಮಹಿಳಾ ಗ್ರಂಥ ಬಹುಮಾನಕ್ಕೆ ಆಯ್ಕೆ

ಮಾತೋಶ್ರೀ ರತ್ನಮ್ಮ ಹೆಗ್ಗಡೆ ಮಹಿಳಾ ಗ್ರಂಥ ಬಹುಮಾನಕ್ಕೆ ಆಯ್ಕೆ Selected for Matoshree Ratnamma Heggade Women's Book Award

ಲೋಕದರ್ಶನ ವರದಿ 

ಧಾರವಾಡ 09: ಕರ್ನಾಟಕ ವಿದ್ಯಾವರ್ಧಕ ಸಂಘವು ಮಾತೋಶ್ರೀ ರತ್ನಮ್ಮ ಹೆಗ್ಗಡೆ ದತ್ತಿ ಅಂಗವಾಗಿ ನೀಡುವ ಪ್ರತಿಷ್ಠಿತ ಮಹಿಳಾ ಗ್ರಂಥ ಬಹುಮಾನ-2024ನೇ ಸಾಲಿನ ಮಾತೋಶ್ರೀ ರತ್ನಮ್ಮ ಹೆಗ್ಗಡೆ ಮಹಿಳಾ ಗ್ರಂಥ ಬಹುಮಾನ ಆಯ್ಕೆಗಾಗಿ ಬಂದ ಲೇಖಕಿಯರ ವಿವಿಧ ಸಾಹಿತ್ಯ ಪ್ರಕಾರಗಳ 121 ಕೃತಿಗಳಲ್ಲಿ ಕಥೆ-ಕಾದಂಬರಿ, ಕವನ ಸಂಕಲನ ಹಾಗೂ ಇತರೆ ಪ್ರಕಾರಗಳು ಹೀಗೆ ನಾಲ್ಕು ವಿಭಾಗದಲ್ಲಿ ಶ್ರೇಷ್ಠ ಕನ್ನಡ ಕೃತಿಗಳನ್ನು ನಿರ್ಣಾಯಕರ ಸಮಿತಿ ಆಯ್ಕೆ ಮಾಡಿದ್ದು ಪ್ರತಿ ಬಹುಮಾನಿತ ಕೃತಿಗೆ 15,000/- ರೂಗಳನ್ನು ಬಹುಮಾನವಾಗಿ ನೀಡಿ ಪ್ರಶಸ್ತಿ ಫಲಕದೊಂದಿಗೆ ಲೇಖಕಿಯರನ್ನು ಸನ್ಮಾನಿಸಿ ಗೌರವಿಸಲಾಗುವುದು. 

ಬಹುಮಾನ ಪಡೆದ ಲೇಖಕಿಯರು ಮತ್ತು ಕೃತಿಗಳು 1) ಸವಿತಾ ನಾಗಭೂಷಣ, ಶಿವಮೊಗ್ಗ ಅವರ ದಿನದ ಪ್ರಾರ್ಥನೆ (ಕವನ ಸಂಕಲನ) ಮತ್ತು ಡಾ. ಕಾತ್ಯಾಯಿನಿ ಕುಂಜುಬೆಟ್ಟು(ಉಡುಪಿ) ಅವರ ತಂಬೂರಿ (ಕವನ ಸಂಕಲನ) 2) ರೇಣುಕಾ ಕೋಡಗುಂಟಿ, ಬೆಂಗಳೂರು ಅವರ ಚಿಗುರೊಡೆದ ಬೇರು(ಕಥಾ ಸಂಕಲನ) 3) ಡಾ. ಗೀತಾ ಸೀತಾರಾಮ, ಮೈಸೂರು ಅವರ ಮಾಳ್ವ ಸಾಮ್ರಾಜ್ಯದ ರಾಜಯೋಗಿನಿ ಅಹಲ್ಯಾಬಾಯಿ ಹೋಳ್ಕರ್(ಕಾದಂಬರಿ) ಹಾಗೂ 4) ಡಾ. ಕೆ.ಎಸ್‌. ಪವಿತ್ರಾ, ಶಿವಮೊಗ್ಗ ಧೀ ತನನ ! (ಕಲೆ-ಸಾಹಿತ್ಯ-ಮನಸ್ಸು) (ಇತರೆ) 

ಮಾತೋಶ್ರೀ ರತ್ನಮ್ಮ ಹೆಗ್ಗಡೆ ಮಹಿಳಾ ಗ್ರಂಥ ಬಹುಮಾನವನ್ನು 1977 ರಿಂದ ಅಂದರೆ 50 ವರ್ಷಗಳಿಂದ ಸಂಘವು ನೀಡುತ್ತಾ ಬಂದಿದ್ದು, ಮಹಿಳಾ ಸಾಹಿತ್ಯದ 4 ಪ್ರಕಾರಗಳಿಗೆ ಪ್ರಾಶಸ್ತ್ಯ ನೀಡಿದೆ. ಪ್ರಸಕ್ತ ಬಹುಮಾನಗಳನ್ನು ಮಾರ್ಚ ಮೊದಲ ವಾರದಲ್ಲಿ ಸಂಘದಲ್ಲಿ ನೀಡಿ ಗೌರವಿಸಲಾಗುವುದು.