ಧಾರವಾಡ 21: ಪ್ರಸಕ್ತ ವರ್ಷದಿಂದ ವಿದ್ಯಾರ್ಥಿಗಳಿಗೆ ಸಸಿಗಳನ್ನು ದತ್ತು ನೀಡಿ ಅವುಗಳನ್ನು ಪೋಷಿಸುವ ಜವಾಬ್ದಾರಿಯ ಹೊಣೆ ನೀಡಲಾಗುತ್ತಿದೆ ಎಂದು ಕರ್ನಾಟಕ ಕಾಲೇಜಿನ ಪ್ರಾಚಾರ್ಯರಾದ ಡಾ. ಬಿ.ಎಫ್.ಚಾಕಲಬ್ಬಿ ಹೇಳಿದರು. ಅವರು ಕರ್ನಾಟಕ ಕಲಾ ಕಾಲೇಜಿನ ಆವರಣದಲ್ಲಿ ಕಾಲೇಜಿನ 'ಅ' ಮತ್ತು 'ಬ' ಎನ್.ಎಸ್.ಎಸ್ ಘಟಕಗಳು ಪರಿಸರ ದಿನಾಚರಣೆಯ ಅಂಗವಾಗಿ ಕಾಲೇಜಿನ ಆವರಣದಲ್ಲಿ ಸಸಿಗಳನ್ನು ನೆಟ್ಟು ಮಾತನಾಡಿದರು.
ಇದೇ ವರ್ಷದ ಆರಂಭದಿಂದ ಆಯಾ ಸೆಮಸ್ಟರ್ನ ವಿದ್ಯಾರ್ಥಿಗಳಿಗೆ ಸಸಿಗಳನ್ನು ದತ್ತು ನೀಡಿ ಅವರಿಗೆ ಕೆಸಿಡಿ ಆವರಣದಲ್ಲಿ ಈಗ ನೆಟ್ಟಿರುವ ಸಸಿಗಳನ್ನು ಮೂರು ವರ್ಷದ ವರೆಗೆ ಪೊಷಿಸುವ ಜವಾಬ್ದಾರಿಯನ್ನು ನೀಡಲಾಗುವುದು ಎಂದ ಅವರು ಮುಂಬರುವ ದಿನಗಳಲ್ಲಿ ವಿದ್ಯಾರ್ಥಿಗಳಲ್ಲಿ ಪರಿಸರ ಅರಿವು ಮೂಡಿಸವಂತಹ ಕಾರ್ಯಕ್ರಮವನ್ನು ಎನ್.ಎಸ್.ಎಸ್ ಮೂಲಕ ಆಯೋಜಿಸಲಾಗುವದು ಎಂದರು.
ಕರ್ನಾಟಕ ವಿಶ್ವವಿದ್ಯಾಲಯದ ಎನ್.ಎಸ್.ಎಸ್ ಕೋಶದ ಸಂಯೋಜನಾಧಿಕಾರಿ ಡಾ. ಎಂ.ಬಿ.ದಳಪತಿ ಮಾತನಾಡಿ ಮುಂಬರುವ ದಿನಗಳಲ್ಲಿ ಪರಿಸರ ದಿನಾಚರಣೆಯ ಅಂಗವಾಗಿ ಕರ್ನಾಟಕ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿರುವ ಕಾಲೇಜುಗಳಲ್ಲಿ ಅಲ್ಲಿನ ವಿದ್ಯಾರ್ಥಿಗಳಿಗೆ ಸಸಿಗಳನ್ನು ದತ್ತು ನೀಡಿ ಅವರಿಗೆ ಆಯಾ ಕಾಲೇಜಿನ ಆವರಣದಲ್ಲಿ ಸಸಿಗಳನ್ನು ನೆಟ್ಟು ಮೂರು ವರ್ಷದ ವರೆಗೆ ಸಸಿಗಳನ್ನು ಪೂಷಿಸುವ ಜವಾಬ್ದಾರಿಯನ್ನು ವಿದ್ಯಾರ್ಥಿಗಳಿಗೆ ನೀಡು ವಿನೋತನ ಕಾರ್ಯಕ್ರಮ ಹಾಕಿಕೊಂಡಿದೆ ಎಂದರು. ಮತ್ತು ಪರಿಸರ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುವದು ಎಂದರು.
ಕರ್ನಾಟಕ ಕಾಲೇಜಿನ ಹಳೆಯ ವಿದ್ಯಾರ್ಥಿ ವಿಜಯಪುರ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಇಂಗ್ಲೀಷ್ ವಿಷಯದ ಸಹಾಯಕ ಪ್ರಾಧ್ಯಾಪಕ ಅಕ್ಷಯ್ ಯಾರ್ದೇ ಅವರು ಈ ಸಂದರ್ಭದಲ್ಲಿ ಹತ್ತು ಹೂವಿನ ಸಸಿ ಮತ್ತು ಹತ್ತು ಹಲಸಿನ ಹಣ್ಣಿನ ಸಸಿಗಳನ್ನು ಕೂಡುಗೆಯಾಗಿ ನೀಡಿರುವ ಸಸಿಗಳನ್ನು ಕಾಲೇಜಿನ ಆವರಣದಲ್ಲಿ ನೆಡಲಾಯಿತು.
ಕಾರ್ಯಕ್ರಮದಲ್ಲಿ ಎನ್.ಎಸ್ ಎಸ್ ಅಧಿಕಾರಿಗಳಾದ ಡಾ. ಬಿ.ಎಸ್ ಭಜಂತ್ರಿ, ಡಾ. ಎಸ್.ಎ.ಕೊಳೂರ, ಕಾಲೇಜಿನ ಮರಾಠಿ ವಿಭಾದ ಮುಖ್ಯಸ್ಥರಾದ ಡಾ. ಅಮೃತ್ ಯಾರ್ದೇ , ಡಾ. ಪ್ರೊ. ಅಕ್ಷಯ ಯಾರ್ದೇ , ಪ್ರಭಾಕರ ಕಾಂಬಳೆ ಹಾಜರಿದ್ದರು. ಕಾಲೇಜಿನ ಎನ್.ಎಸ್.ಎಸ್ ಸ್ವಯಂ ಸೇವಕರು ಕಾಲೇಜಿನ ಆವರಣದಲ್ಲಿ ಸಸಿಗಳನ್ನು ನೆಟ್ಟರು.