ಮಹಿಳಾ ಕೂಲಿ ಕಾರ್ಮಿಕರ ಗರ್ಭಾಶಯಗಳಿಗೆ ಕತ್ತರಿ; ಉದ್ಧವ್ ಠಾಕ್ರೆಗೆ ಕಾಂಗ್ರೆಸ್ ನಾಯಕನ ಸಂಚಲದ ಪತ್ರ

ನಾಗಪುರ (ಮಹಾರಾಷ್ಟ್ರ) ಡಿ, ೨೫ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಪರಿಶಿಷ್ಟ  ವಿಭಾಗದ ಅಧ್ಯಕ್ಷ ನಿತಿನ್ ರಾವತ್, ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಸಂಚಲನಾತ್ಮಕ  ಪತ್ರ ಬರೆದಿದ್ದಾರೆ. ಕಬ್ಬಿನ ತೋಟಗಳಲ್ಲಿ ದುಡಿಯುತ್ತಿರುವ ಸುಮಾರು ೩೦,೦೦೦ ಬಡ ಮಹಿಳಾ  ಕೂಲಿ  ಕಾರ್ಮಿಕರು ತಮ್ಮ ಗರ್ಭಕೋಶಗಳನ್ನೇ  ತೆಗೆಸಿಕೊಂಡಿದ್ದಾರೆ ಎಂದು  ಆಲ್ ಇಂಡಿಯಾ ಕಾಂಗ್ರೆಸ್  ಕಮಿಟಿ  ಎಸ್ ಸಿ  ವಿಭಾದ ಮುಖ್ಯಸ್ಥ   ನಿತಿನ್ ರಾವತ್   ತಮ್ಮ ಪತ್ರದಲ್ಲಿ   ವಿವರಿಸಿದ್ದಾರೆ.ಮಾಸಿಕ ಋತುಸ್ರಾವ  ಅವಧಿಯಲ್ಲಿ,  ಕೂಲಿ ಕೆಲಸಕ್ಕೆ ತೆರಳಲು  ಸಾಧ್ಯವಾಗದೆ,  ಕೂಲಿ ಹಣ ತಪ್ಪಿಹೋಗುವ ಭಯದಿಂದ ಅವರು   ಹಿಸ್ಟರೆಕ್ಟಮಿ  ಶಸ್ತ್ರಚಿಕಿತ್ಸೆಗೆ ಒಳಗಾಗಿ   ಗರ್ಭಕೋಶಗಳನ್ನು  ತೆಗೆಸಿಕೊಂಡಿದ್ದಾರೆ   ಎಂದು ನಿತಿನ್ ರಾವತ್  ಪತ್ರದಲ್ಲಿ ವಿವರಿಸಿದ್ದಾರೆ. ದುಡಿಯಲು ಕೃಷಿ ಭೂಮಿ ಇಲ್ಲದ  ಈ ಬಡ ಮಹಿಳೆಯರು ಜೀವನೋಪಾಯಕ್ಕಾಗಿ ಕಬ್ಬಿನ ಹೊಲಗಳಲ್ಲಿ  ಕೂಲಿ ಕೆಲಸ ಮಾಡುತ್ತಿದ್ದಾರೆ. ಜೀವನೋಪಾಯಕ್ಕಾಗಿ  ತಮ್ಮ ಗರ್ಭಾಶಯವನ್ನು ತೆಗೆಸಿಕೊಳ್ಳುವ  ಮಹಿಳೆಯರಿಗೆ  ನೆರವಾಗಲು  ಸರ್ಕಾರ  ಸೂಕ್ತ  ಕ್ರಮಗಳನ್ನು ತೆಗೆದುಕೊಳ್ಳಬೇಕು  ಎಂದು   ಮುಖ್ಯಮಂತ್ರಿ  ಉದ್ಧವ್ ಠಾಕ್ರೆ ಅವರನ್ನು ನಿತಿನ್ ರೌತ್ ಒತ್ತಾಯಿಸಿದರು.  ಕೂಲಿ ಕೆಲಸಗಳಿಗಾಗಿ  ಮಹಿಳೆಯರು ಈ ರೀತಿಯಲ್ಲಿ  ಗರ್ಭಾಶಯ  ತೆಗೆಸಿಕೊಳ್ಳುವ  ಘಟನೆಗಳು ಮಹಾರಾಷ್ಟ್ರದಲ್ಲಿ  ಸಂಚಲನ ಸೃಷ್ಟಿಸಿವೆ.