ಸಮಸ್ಯಾತ್ಮಕ ಸೇವಂತಿಗೆ ಕ್ಷೇತ್ರಗಳಿಗೆ ವಿಜ್ಞಾನಿಗಳ ಭೇಟ್ಟಿ
ಗದಗ 18: ಜಿಲ್ಲೆಯಲ್ಲಿ ಸೇವಂತಿಗೆ ಬೆಳೆಯನ್ನು ಸುಮಾರು 450 ಹೆಕ್ಟರ್ ಪ್ರದೇಶದಲ್ಲಿ ಬೆಳೆಯುತಿದ್ದು, ಗದಗ ತಾಲೂಕಿನ ಕಣವಿ-ಹೊಸೂರು, ಹರ್ತಿ, ಮುಳಗುಂದ, ಸಂಭಾಪೂರ, ಲಕ್ಕುಂಡಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ 290 ಹೆಕ್ಟರ್ ಪ್ರದೇಶದಲ್ಲಿ ಕಳೆದ 20 ವರ್ಷಗಳಿಂದ ರೈತರು ಸೇವಂತಿಗೆ ಬೆಳೆಯನ್ನು ಬೆಳೆಯುತ್ತಿದ್ದಾರೆ. ಹಬ್ಬ-ಹರಿ ದಿನಗಳಲ್ಲಿ ಹೂವಿನ ಮಾರಾಟದಿಂದ ಹೆಚ್ಚಿನ ಲಾಭವನ್ನು ಪಡೆಯುತ್ತಿದ್ದಾರೆ. ಆದರೆ, ಕಳೆದ ಮೂರು ವರ್ಷಗಳಿಂದ ಅತಿಯಾದ ರಸಹೀರುವ ಕೀಟಗಳ ಬಾಧೆಯಿಂದ ಹಾಗೂ ಸೊರಗು ರೋಗಗಳ ಸಮಸ್ಯೆಯಿಂದ ಸೇವಂತಿಗೆ ಹೂವಿನ ಇಳುವರಿ ಕಡಿಮೆಯಾಗಿದೆ. ಸಮಸ್ಯಾತ್ಮಕ ಸೇವಂತಿಗೆ ತೋಟಗಳಿಗೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬಾಗಲಕೋಟಯ ಸಹ ಪ್ರಾಧ್ಯಾಪಕರಾದ ಡಾ. ಅರುಣಕುಮಾರ ಕೆ.ಟಿ, (ರೋಗ ಶಾಸ್ತ್ರಜ್ಞರು) ಹಾಗೂ ಡಾ. ಹರ್ಷವರ್ಧನ ಎಮ್., (ಪುಷ್ಪ ಕೃಷಿ)ಹಾಗೂ ಗದಗ ತಾಲೂಕಿನ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ಶೈಲೇಂದ್ರ ಬಿರಾದರ, ಕೆ.ಎಚ್.ಪಾಟೀಲ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿಗಳು ಹಾಗೂ ಮುಖ್ಯಸ್ಥರಾದ ಡಾ.ಸುಧಾ ವಿ. ಮಂಕಣಿ ಮತ್ತು ತೋಟಗಾರಿಕೆ ವಿಷಯ ತಜ್ಞರಾದ ಹೇಮಾವತಿ ಹಿರೇಗೌಡರ ಇವರನ್ನು ಒಳಗೊಂಡ ವಿಜ್ಞಾನಿಗಳ ತಂಡವು ಕಣವಿ, ಹೊಸೂರು, ಸಂಭಾಪೂರ, ಹರ್ತಿ ಹಾಗೂ ಮುಳಗುಂದ ಗ್ರಾಮಗಳ ಸೇವಂತಿಗೆ ತೋಟಗಳಿಗೆ ಭೇಟ್ಟಿ ನೀಡಿತು.
ಕ್ಷೇತ್ರ ಪರೀಶೀಲನೆ ಕೈಗೊಂಡು, ರೈತರೊಂದಿಗೆ ಚರ್ಚಿಸಿ, ಸಮಗ್ರ ಕೀಟ ಮತ್ತು ರೋಗಗಳ ನಿರ್ವಹಣೆಗಾಗಿ ಮಾಹಿತಿಯನ್ನು ನೀಡಿದರು.
ರಸ ಹೀರುವ ಕೀಟಗಳಾದ ಥ್ರಿಪ್ಸ ನುಸಿ, ಕರಿ ನುಸಿ ್ಘ ಹೇನು ನಿರ್ವಹಣೆಗಾಗಿ ಪ್ರತಿ ಎಕರೆಗೆ 4 ರಿಂದ 5 ಹಳದಿ ಹಾಗೂ ನೀಲಿ ಅಂಟು ಬಲೆಗಳನ್ನು ಹಾಕಬೇಕು. 2.5 ಮಿ.ಲೀ ಬೇವಿನ ಎಣ್ಣೆಯನ್ನು ಪ್ರತಿ ಲೀಟರ ನೀರಿಗೆ ಬೆರೆಸಿ ರಸ ಹೀರುವ ಕೀಟಗಳು ಕಂಡತಕ್ಷಣ ಮೊದಲ ಸಿಂಪರಣೆಯನ್ನು ಕೈಗೊಳ್ಳಬೇಕು. 30 ದಿನದ ಸೇವಂತಿಗೆ ಬೆಳೆಗೆ 5 ಗ್ರಾಂ ಬೆವೇರಿಯಾ ಬಾಸಿಯಾನ (ಃಜಚಿಣತಜಡಿಚಿ ಛಛಿಚಿಟಿಚಿ) ವನ್ನು ಪ್ರತಿ ಲೀಟರ ನೀರಿಗೆ ಬೆರೆಸಿ 15 ದಿನಗಳ ಅಂತರದಲ್ಲಿ ಬೆಳೆಗೆ ಸಿಂಪಡಿಸಬೇಕು. 0.5 ಮಿ.ಲೀ ಸ್ಪೈರೋಟೆಟ್ರಾಮ್ಯಾಟ್ (ಒಠಜಟಿಣಠ) ಅಥವಾ 0.5 ಮಿ.ಲೀ ಡೈಫೆನ್‌ಥಿರಾನ್ (ಆಜಿಜಟಿಣಡಿಠಟಿ-ಕಜರಛಿ) ಅಥವಾ 0.2 ಮಿ.ಲೀ ಬ್ರಾಪ್ಲಾನಿರಿಡೇ (ಇಥಠ) ನ್ನು ಪ್ರತಿ ಲೀಟರ ನೀರಿಗೆ ಸೇರಿಸಿ ಸಿಂಪರಣೆ ಮಾಡಬೇಕು. ಹೂ ಕೊರಕ ಕೀಟದ ನಿರ್ವಹಣೆಗಾಗಿ ಒಂದು ಮಿ.ಲೀ ಇಂಡಾಕ್ಸಿಕಾರ್ಬ (ಂತಠಣ) ಅಥವಾ 0.3 ಮಿ.ಲೀ ಸ್ಪೈನೊಸ್ಯಾಡ್ (ಖಿಡಿಚಿಛಿಜಡಿ) ಅಥವಾ 0.5 ಮಿ.ಲೀ ಸ್ಪೈರೋಮೆಸೀಫೆನ್ (ಓಛಜಡಿಠ) ನ್ನು ಪ್ರತಿ ಲೀಟರ ನೀರಿಗೆ ಸೇರಿಸಿ ಸಿಂಪರಣೆ ಮಾಡಬೇಕು.
ರೋಗಗಳ ಹತೋಟಿಗಾಗಿ ಒಂದು ಕ್ವಿಂಟಾಲ ಕೊಟ್ಟಿಗೆ ಗೊಬ್ಬರಕ್ಕೆ 1 ಕಿಲೋ ಟ್ರೈಕೊಡರ್ಮಾದಿಂದ ಉಪಚರಿಸಿ ಮಣ್ಣಿಗೆ ಸೇರಿಸಬೇಕು. ಪ್ರತಿ ಎಕರೆಗೆ 13 ಕಿಲೋ ಸಾರಜನಕ, 60 ಕಿಲೋ ರಂಜಕ, 40 ಕಿಲೋ ಪೊಟ್ಯಾಶಯುಕ್ತ ರಾಸಾಯನಿಕ ಗೊಬ್ಬರಗಳನ್ನು ಕಾಲುವೆಗಳಲ್ಲಿ ಹಾಕಿ ಮಣ್ಣಿನೊಂದಿಗೆ ಮಿಶ್ರಣ ಮಾಡಿ, 1 ರಿಂದ 1.5 ಫೂಟು ಎತ್ತರದ ಏರು ಮಡಿಗಳನ್ನು 3 ರಿಂದ 4 ಫೂಟು ಅಂತರದಲ್ಲಿ ಮಾಡಬೇಕು. ಮಡಿಗಳಲ್ಲಿ ಸಾಲಿನಿಂದ ಸಾಲಿಗೆ, ಸಸಿಯಿಂದ ಸಸಿಗೆ 1 ಫೂಟು ಅಂತರದಲ್ಲಿ ಸಸಿಗಳನ್ನು ನಾಟಿ ಮಾಡುವುದರಿಂದ ಸರಾಗವಾಗಿ ಗಾಳಿ ಆಡುತ್ತದೆ. ಇದರಿಂದ ರೋಗದ ಬಾಧೆ ಕಡಿಮೆಯಾಗುತ್ತದೆ. ನಾಟಿ ಮಾಡಿದ 30 ದಿನಗಳ ನಂತರ ಗಿಡಗಳ ತುದಿಯನ್ನು ಚಿವುಟಿ, ಪ್ರತಿ ಎಕರೆಗೆ 13 ಕಿಲೋ ಸಾರಜನಕ ಒದಗಿಸಬೇಕು. ಒಂದು ತಿಂಗಳ ನಂತರ ಮತ್ತೊಮ್ಮೆ 13 ಕಿಲೋ ಸಾರಜನಕವನ್ನು ಬೆಳೆಗೆ ನೀಡಬೇಕು.
ಸಸಿ ನಾಟಿ ಮಾಡುವ ಮೊದಲು ಸಸಿಗಳನ್ನು 3 ಗ್ರಾಂ ತಾಮ್ರದ ಆಕ್ಸಿಕ್ಲೋರೈಡ್ (ಅಓಅ)ನ್ನು ಪ್ರತಿ ಲೀಟರ ನೀರಿನಲ್ಲಿ ಬೆರೆಸಿದ ದ್ರಾವಣದಲ್ಲಿ 10 ರಿಂದ 15 ನಿಮಿಷ ಅದ್ದಿ ನಾಟಿ ಮಾಡಬೇಕು. ತೋಟದಲ್ಲಿ ನೀರು ನಿಲ್ಲದಂತೆ, ಹೆಚ್ಚಾದ ನೀರು ಬಸಿದು ಹೋಗುವ ಹಾಗೆ ನೋಡಿಕೊಳ್ಳಬೇಕು. ಸೊರಗು ರೋಗ ಕಂಡ ತಕ್ಷಣ ಬಾಧಿತ ಗಿಡವನ್ನು ಕಿತ್ತು ಸುಡಬೇಕು, 3 ಗ್ರಾಂ ತಾಮ್ರದ ಆಕ್ಸಿಕ್ಲೋರೈಡ್‌ನ್ನು ಪ್ರತಿ ಲೀಟರ ನೀರಿಗೆ ಬೆರೆಸಿ, ಗಿಡ ಕಿತ್ತ ಸ್ಥಳದಲ್ಲಿ ಹಾಕಬೇಕು. ಇದರಿಂದ ರೋಗ ಹರಡದಂತೆ ಮಾಡಬಹುದು. 3 ಗ್ರಾಂ ತಾಮ್ರದ ಆಕ್ಸಿಕ್ಲೋರೈಡ್‌ನ್ನು ಪ್ರತಿ ಲೀಟರ ನೀರಿಗೆ ಬೆರೆಸಿ, ಸಸಿಗಳ ಬೇರುಗಳು ತೊಯ್ಯುವಂತೆ ಹಾಕಬೇಕು. ರೋಗದ ನಿರ್ವಹಣೆಗಾಗಿ 3 ಗ್ರಾಂ ರಿಡೊಮಿಲ್ ಎಮ್-ಜಿಡ್ ಅಥವಾ ರಿಡೋಮಿಲ್ ಗೋಲ್ಡ, ಕರ್ಜಿಟೆ (ಅಣಡಿದಚಿಣಣಜ) ಅಥವಾ ಫಾಸಿಟೆಲ್ ಂಋ ಅಥವಾ ವೈಟಾ ಪಾವರ (ಗಿಣಚಿ ಕಠಜಡಿ) ಪ್ರತಿ ಲೀಟರ ನೀರಿಗೆ ಸೇರಿಸಿ ಬೆಳೆಗೆ ಸಿಂಪಡಿಸಬೇಕು. ಎಲೆ ಚುಕ್ಕೆ ರೋಗ (ಬೆಂಕಿ ರೋಗ) ನಿಯಂತ್ರಣಕ್ಕಾಗಿ 2 ಗ್ರಾಂ ಕ್ಯಾಬ್ರಿಯೊಟಾಪ್ (ಒಜಣಡಿಚಿಟ + ಕಥಿಡಿಠಟಣಡಿಠಟಿ)ನ್ನು ಪ್ರತಿ ಲೀಟರ ನೀರಿಗೆ ಅಥವಾ ಒಂದು ಮಿ.ಲೀ ಟೆಬುಕೊನಾಜೊಲ್ (ಖಿಜಛಣಛಿಠಚಿದಠಜ-ಈಠಛಿಣಡಿ) ನ್ನು ಹಾಕಿ ಸಿಂಪಡಿಸಬೇಕು.
ಕಣವಿ ಹೊಸೂರು ಗ್ರಾಮದ ಸೇವಂತಿಗೆ ಬೆಳೆಗಾರರಾದ ವಿರೇಶ ಸಿದ್ದಪ್ಪ ಸುಸರಭಿ, ಮಂಜುನಾಥ ಕುರಿ ಮತ್ತು ಅನಿಲ ಅರಗುಂಜಿ ಹಾಗೂ ಸಂಭಾಪೂರ ಗ್ರಾಮದ ಹನುಮರಡ್ಡಿ ನಾಗನೂರ, ಕೃಷ್ಣಗೌಡ ಹೊಸಮನಿ ಹಾಗೂ ಇನ್ನಿತರ ಪ್ರಗತಿ ಪರರೈತರ ಹೊಲಗಳಿಗೆ ಭೆಟ್ಟಿ ಮಾಡಿ, ಸೇವಂತಿಗೆ ಬೆಳೆಗಾರರಿಗೆ ಸೇವಂತಿಗೆ ಬೆಳೆಯಲ್ಲಿ ಅನುಸರಿಸಬೇಕಾದ ಸುಧಾರಿತ ಬೇಸಾಯ ಕ್ರಮಗಳ ಕುರಿತು ವಿವರಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 