ಲೋಕದರ್ಶನ ವರದಿ
ಬೈಲಹೊಂಗಲ 09: ಮಕ್ಕಳಲ್ಲಿರುವ ಬೌದ್ದಿಕ ಮಟ್ಟವನ್ನು ಹೆಚ್ಚಿಸಲು ಮಕ್ಕಳ ವಿಜ್ಞಾನ ಹಬ್ಬ ಪೂರಕವಾಗಲಿದೆ ಎಂದು ತಹಸೀಲ್ದಾರ ಡಾ.ಡಿ.ಎಚ್. ಹೂಗಾರ ಹೇಳಿದರು.
ಅವರು ಸೋಮವಾರ ಪಟ್ಟಣದ ಶಾಸಕರ ಮತಕ್ಷೇತ್ರ ಮಾದರಿ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ ನಂ.4ರಲ್ಲಿ ನಡೆದ ಭಾರತ ಜ್ಞಾನ ವಿಜ್ಞಾನ ಸಮಿತಿ, ಜಿಲ್ಲಾ ಪಂಚಾಯತ ಬೆಳಗಾವಿ ಸಾರ್ವಜನಿಕ ಶಿಕ್ಷಣ ಇಲಾಖೆ, ಸಮಗ್ರ ಶಿಕ್ಷಣ ಅಭಿಯಾನ ಬೆಳಗಾವಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಕಾಯರ್ಾಲಯ, ಸಮೂಹ ಸಂಪನ್ಮೂಲ ಕೇಂದ್ರ ಇವರುಗಳ ಸಂಯುಕ್ತ ಆಶ್ರಯದಲ್ಲಿ ಕ್ಲಸ್ಟರ್ ಮಟ್ಟದ ಮಕ್ಕಳ ವಿಜ್ಞಾನ ಹಬ್ಬ-2019 ಸಮಾರಂಭವನ್ನು ನೀರ ಗುಳ್ಳೆ ಊದುವ ಮೂಲಕ ಚಾಲನೆ ನೀಡಿ ನಂತರ ಮಾತನಾಡಿ, ಇಂದಿನ ಜಾಗತಿಕ ಸ್ಪಧರ್ಾತ್ಮಕ ಯುಗದಲ್ಲಿ ಮಕ್ಕಳು ಹೆಚ್ಚಿನ ಅಧ್ಯಯನ ಅವಶ್ಯಕತೆ ಇದೆ.
ವೈಜ್ಞಾನಿಕ ಮನೋಭಾವ, ಕೌಶಲ್ಯ, ವಿಜ್ಞಾನ ಮಾದರಿ, ವೈಜ್ಞಾನಿಕ ಪ್ರಯೋಗ, ಚಚರ್ೆಗಳ ಮೂಲಕ ಮಕ್ಕಳಲ್ಲಿ ಆತ್ಮಸೈರ್ಯವನ್ನು ಹೆಚ್ಚಿಸಲು ಸಹಕಾರಿಯಾಗಲಿದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಪಾರ್ವತಿ ವಸ್ತ್ರದ ಪ್ರಾಸ್ತಾವಿಕವಾಗಿ ಮಾತನಾಡಿ, ಮಕ್ಕಳಲ್ಲಿ ಸೃಜನಶೀಲತೆ, ಪ್ರಶ್ನಿಸುವ ಮನೋಭಾವ, ಪ್ರಾಯೋಗಿಕ ಕಲಿಕೆಗೆ ಪೂರಕವಾಗಿ, ಮಕ್ಕಳಲ್ಲಿ ಮಾನವೀಯ ಮೌಲ್ಯ ಬೆಳೆಸುವ, ಹಿಂಜರಿಕೆಯನ್ನು ಆಳಿಸಿ ಆತ್ಮವಿಶ್ವಾಸ ತುಂಬುವ ನಿಟ್ಟಿನಲ್ಲಿ ನಡೆಯುವ ಹಬ್ಬ ಇದಾಗಿದೆ.
ಇದು ವಿಜ್ಞಾನ ಚಟುವಟಿಕೆಗೆ ಸೀಮಿತವಲ್ಲ. ಭಾಷೆ, ವಿಜ್ಞಾನ, ಗಣಿತ, ಕಲೆ, ನಾಟಕ, ನೃತ್ಯ ಎಲ್ಲವನ್ನೋಳಗೊಂಡು ಮಕ್ಕಳು ವೈಜ್ಞಾನಿಕವಾಗಿ ಕಲಿಯುವ ಕ್ರಮವನ್ನು ಅನ್ವೇಷಿಸುವ ಪ್ರಕ್ರೀಯೆಯಾಗಿದೆ. ಸಕರ್ಾರಿ ಶಾಲೆಗಳೆಡೆಗೆ ಜನರಲ್ಲಿ ಪ್ರೀತಿ ಬೆಳೆಸುವ ಉದ್ದೇಶದಿಂದ ಸಮುದಾಯದ ಸಕ್ರಿಯ ಪಾಲ್ಗೊಳ್ಳುವಿಕೆಯಲ್ಲಿ ಎಲ್ಲವನ್ನೂ ಸಂಘಟಿಸಲಾಗುತ್ತದೆ ಎಂದರು.
ತಾಪಂ. ಇಓ ಸಮೀರ ಮುಲ್ಲಾ ಮಾತನಾಡಿ, ಮಕ್ಕಳಲ್ಲಿ ಚೈತನ್ಯದ ಸ್ಪೂತರ್ಿ ಹೆಚ್ಚಿಸಲು ಪ್ರಾಥಮಿಕ ಹಂತದಲ್ಲಿಯೇ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಅವಶ್ಯವಾಗಿದೆ ಎಂದರು.
ಬಿ.ಎನ್. ಕಸಾಳೆ, ಶಿವಾನಂದ ಕುಡಸೋಮನ್ನವರ, ಬಿ.ಕೆ.ತಲ್ಲೂರ, ಆರ್.ಆರ್. ದೊಡಗೌಡ್ರ, ಎಮ್.ಎಸ್.ಬೋಳನ್ನವರ, ಬಿ.ಬಿ. ಬಸಕ್ರಿ, ಜಿ.ಬಿ. ತುರಮರಿ, ಆಯ್.ಎಫ್. ತಿಗಡಿ, ಬಿ.ಎಸ್.ಫಕೀರಸ್ವಾಮಿಮಠ, ಬಿ.ಆಯ್.ಬಾಳಿಕಾಯಿ, ಬಿ.ಡಿ.ತಮ್ಮನ್ನವರ, ಪಿ.ಪಿ.ಸೊಂಟಕ್ಕಿ, ಸಿ.ಡಿ.ಹಿರೇಮಠ, ಗಾಯಿತ್ರಿ ಪತ್ತಾರ, ಎಸ್.ಜಿ.ಹಿರೇಮಠ, ಎ.ವಿ.ಹೋಮಕರ, ವಿ.ಎಮ್.ಗೌಡರ, ಎಸ್.ಸಿ.ಪಾಟೀಲ, ಎಸ್.ಡಿ.ಎಂ.ಸಿ.ಆಡಳಿತ ಸಿಬ್ಬಂದಿ ಹಾಗೂ ಪಾಲಕರು ಇದ್ದರು.
ಶಾಲೆಯನ್ನು ತಮ್ಮ ಕಲಾಕುಂಚದಿಂದ ಅಲಂಕರಿಸಿದ ಚಿತ್ರಕಲಾ ಶಿಕ್ಷಕರಾದ ಎಸ್.ಎಫ.ನದಾಫ, ಬಸವರಾಜ ಪೂಜೇರ, ರವಿ ಖಂಡಿ ಸನ್ಮಾನಿಸಲಾಯಿತು.
ಮುಖ್ಯೋಪಾಧ್ಯಾಯ ಶ್ರೀಕಾಂತ ಯರಡ್ಡಿ ಸ್ವಾಗತಿಸಿದರು, ಬಸವರಾಜ ಭರಮನ್ನವರ ನಿರೂಪಿಸಿದರು. ರಾಜು ಹಕ್ಕಿ ವಂದಿಸಿದರು.
ಗಮನ ಸೆಳೆದ ಚಕ್ಕಡಿ ಜಾಥಾ : ಮಕ್ಕಳ ವಿಜ್ಞಾನ ಹಬ್ಬಕ್ಕೆ ತಹಸೀಲ್ದಾರ ಡಾ.ಡಿ.ಎಚ್.ಹೂಗಾರ, ಕ್ಷೇತ್ರ ಶಿಕ್ಷಣಾಧಿಕಾರಿ ಪಾರ್ವತಿ ವಸ್ರ್ತದ, ತಾಪಂ. ಇಓ ಸಮೀರ ಮುಲ್ಲಾ, ದೈಹಿಕ ಪರೀವಿಕ್ಷಕ ಆರ್.ಬಿ.ಗೋಕಾಕ ಅವರು ಚಕ್ಕಡಿ ಏರಿ ಮಕ್ಕಳ ವಿಜ್ಞಾನ ಹಬ್ಬ-2019 ಜಾಥಾಕ್ಕೆ ಚಾಲನೆ ನೀಡಿದರು.
ಚಕ್ಕಡಿಯನ್ನು ರಿಬ್ಬನ್, ಹೂಮಾಲೆಗಳಿಂದ ಶೃಂಗರಿಸಲಾಗಿತ್ತು. ನೂರಾರು ಮಕ್ಕಳು ಜಾಥಾದಲ್ಲಿ ಪಾಲ್ಗೊಂಡು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮಕ್ಕಳ ವಿಜ್ಞಾನ ಹಬ್ಬಕ್ಕೆ ಜಯಘೋಷ ಕೂಗುತ್ತ ಸಾಗಿ ಮರಳಿ, ಶಾಲೆಯ ಆವರಣಕ್ಕೆ ತಲುಪಿತು.
ಕ್ಲಸ್ಟರ ಮಟ್ಟದ ಸರಕಾರಿ ಶಾಲೆಗಳಿಂದ ಆಗಮಿಸಿದ್ದ ವಿದ್ಯಾಥರ್ಿ, ವಿದ್ಯಾಥರ್ಿನಿಯರು, ಶಿಕ್ಷಕ, ಶಿಕ್ಷಕಿಯರು ವಿವಿಧ ವೇಷಬೂಷಣಗಳಲ್ಲಿ ಮಿಂಚಿ ನೋಡುಗರ ಗಮನ ಸೆಳೆದರು. ಮಕ್ಕಳ ವಿಜ್ಞಾನ ಹಬ್ಬಕ್ಕೆ ವಿದ್ಯಾಥರ್ಿನಿಯರ ಕುಂಭಮೇಳ ಮೆರಗು ತಂದಿತು.