ಚಿದಾನಂದ ಬಸಪ್ರಭು ಕೋರೆ ಸಹಕಾರಿ ಸಕ್ಕರೆ ಕಾರಖಾನೆ ಕಾರ್ಯ ಸ್ಥಳದಲ್ಲಿ
ಮಾಂಜರಿ 20: ಚಿಕ್ಕೋಡಿಯ ಚಿದಾನಂದ ಬಸಪ್ರಭು ಕೋರೆ ಸಹಕಾರಿ ಸಕ್ಕರೆ ಕಾರಖಾನೆ ಹಾಗೂ ಕರ್ನಾಟಕ ಸರಕಾರದ ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಚಿಕ್ಕೋಡಿ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ ಚಿಕ್ಕೋಡಿಯವರ ಸಂಯೋಗದಲ್ಲಿ ಮಹಾರಾ?್ಟ್ರದ ಬೀಡ, ಜಾಲನಾ, ಪರಬನಿ ಜಿಲ್ಲೆಗಳಿಂದ ಬಂದ ಕಬ್ಬು ಕಟಾವು ಮತ್ತು ಸಾರಿಗೆ ಕೆಲಸ ಮಾಡಲು ತಮ್ಮ ಮಕ್ಕಳೊಂದಿಗೆ ಆಗ"ುಸಿದ್ದು, ಸದರಿ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದೇಂದು ಪ್ರತಿ ವ?ರ್ದಂತೆ ಕಾರಖಾನೆಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಕೋರೆಯವರ ಮಾರ್ಗದರ್ಶನದಂತೆ ಕಾರಖಾನೆಯ ಆವರಣದಲ್ಲಿ "ಗುಡಾರ ಶಾಲೆ" ಎಂದು ಚಾಲನೆ ಮಾಡಲಾುತು.
ಈ ಸಂದರ್ಬದಲ್ಲಿ ಕಾರಖಾನೆಯ ಪ್ರಧಾನ ವ್ಯವಸ್ಥಾಪಕರಾದ ಶ್ರೀ ಎನ್.ಎಸ್."ರೆಮಠ ಇವರು ಮಾತನಾಡಿ ಕಬ್ಬು ಕಟಾವು ಮಾಡಲು ಬಂದ ಜನರ ಮಕ್ಕಳು ಯಾರು ಕೂಡ ಶಿಕ್ಷಣದಿಂದ ವಂಚಿತರಾಗಬಾರದು ಪ್ರತಿ ಮಕ್ಕಳಿಗೂ ಶಿಕ್ಷಣ ಸಿಗಬೇಕೆಂದು ಹೇಳಿದರು. ಅಲ್ಲದೇ ಮಕ್ಕಳಿಗೆ ಶಿಕ್ಷಣ ಇಲಾಖೆುಂದ ಮಕ್ಕಳಿಗೆ ಪ್ಠೊಕ ಆಹಾರ, ಊಟ, ಪಠ್ಯ ಪುಸ್ತಕ ಜೋತೆಗೆ ಕಾರಖಾನೆಯ ಮಕ್ಕಳಿಗೆ ಬೇಕಾದ ಬುಕ್, ಪೆನ್ನುಗಳು ಇತರೆ ಸಾಮಗ್ರಿಗಳನ್ನು ನೀಡಲಾಗವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾನ್ಯ ಕ್ಷೇತ್ರ ಸಮನ್ವಯಾಧಿಕಾರಿಗಳು ಆಯ್.ಎಸ್.ಇಕ್ಕಲಮಾರ, ಸಿ.ಆರ್.ಪಿ ಚಿಕ್ಕೋಡಿ ಮರಾಠಿ ಎಸ್.ಎಮ್.ಮಾನೆ, ಜಿ.ಎಸ್.ಕಾಂಬಳೆ, ಪಿ.ಡಿ.ಮಜಲಟ್ಟಿ, ಗಂಗಾ ಶುಗರ್ ಶಾಲೆಯ ಶಿಕ್ಷಕರಾದ ".ಎನ್.ರಾವಣಗೋಳ, "ಗುಡಾರ ಶಾಲೆಯ ಶಿಕ್ಷಕರಾದ ಎಸ್.ಎಸ್.ಕೋಳಿ, ಪಿ.ಮ್.ತೋಂಬರೆ, ಜಿ.ಎಮ್.ಧರ್ಮೋಜೆ ಹಾಗೂ ಕಾರಖಾನೆಯ ಅಧಿಕಾರಿಗಳಾದ ಅನೀಲ ಶೇಟ್ಟಿ ಮಾಳಿ, ಸುಭಾ? ಖೋತ, ತಾತ್ಯಾಸಾಬ ಮತ್ತಿವಾಡೆ, ಉದಯ ಕಾಗಲೆ, ಬೀಡ ಜಿಲ್ಲೆ ಬಂದ ಕಬ್ಬು ಮಕ್ತೆದಾರು ಹಾಗೂ ಮಕ್ಕಳು ಉಪಸ್ಥಿತರಿದ್ದರು.