ವಿವಿಧ ದಲಿತ ಸಂಘಟನೆಗಳ ಪ್ರತಿಭಟನೆ

Protest by various dalit organizations


ವಿವಿಧ ದಲಿತ ಸಂಘಟನೆಗಳ ಪ್ರತಿಭಟನೆ 

ಮೂಡಲಗಿ  20: ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಅವರು ಡಾ: ಬಾಬಾಸಾಹೇಬ ಅಂಬೇಡ್ಕರವರ ಕುರಿತು ಹಗೂರವಾಗಿ, ವ್ಯಂಗ್ಯವಾಗಿ ಮಾತನಾಡಿರುವ ಖಂಡಿಸಿ ಮೂಡಲಗಿ ಪಟ್ಟಣದ ಕಲ್ಮೇಶ್ವರ ವೃತ್ತದಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಮಿತಿ ಬೆಳಗಾವಿ ಹಾಗೂ ವಿವಿಧ ದಲಿತ ಸಂಘಟನೆಗಳು ಪ್ರತಿಭಟಿಸಿ ಮೂಡಲಗಿ ತಹಶೀಲ್ದಾರ ಮುಖಾಂತರ ರಾಷ್ಟ್ರಪತಿಗಳಿಗೆ ಶುಕ್ರವಾರದಂದು ಮನವಿ  ಸಲ್ಲಿಸಿದರು.  


. ಅಮಿತ್ ಶಾ ಅಂಬೇಡ್ಕರ ವಿರೋದಿ ಹೇಳಿಕೆ ನೀಡಿ ದೇಶಕ್ಕೆ ಮಾಡಿದ ಅಪಮಾನವಾಗಿದೆ. ಈ ದೇಶಕ್ಕೆ ಮತ್ತು ಇಡಿ ಜಗತ್ತು ಮೆಚ್ಚುವ ಸಂವಿಧಾನವನ್ನು ನೀಡಿದ ಡಾಽ ಬಾಬಾ ಸಾಹೇಬರಿಗೆ ಅವಮಾನ ಮಾಡಿರುವುದು ಖಂಡನೀಯ ಮತ್ತು ಇವರು ಅಂಬೇಡ್ಕರ ವಿರೋಧಿಗಳು ಎಂದು ಸಾಬೀತಾಗಿದೆ ಕೂಡಲೇ ಅಮಿತ್ ಶಾ ರವರು ಮಂತ್ರಿ ಪದವಿಗೆ ರಾಜೀನಾಮೆ ನೀಡಬೇಕು ಮತ್ತು ದೇಶದ ಜನತೆ ಮುಂದೆ ಕ್ಷಮೆ ಕೇಳಬೇಕು. ಮಂತ್ರಿ ಪದವಿಗೆ ರಾಜೀನಾಮೆ ಕೊಡದಿದ್ದರೆ ಮತ್ತು ಕ್ಷಮೆ ಕೇಳದಿದ್ದರೆ ಕೂಡಲೇ ರಾಷ್ಟ್ರಪತಿಗಳು ಮಂತ್ರಿ ಸ್ಥಾನದಿಂದ ವಜಾಗೊಳಿಸಬೇಕು ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಳಿಸಬೇಕು ಬಿ.ಜೆ.ಪಿ ಪಕ್ಷ ಕೂಡಾ ಅಮಿತ್ ಶಾರನ್ನು ರಕ್ಷಿಸಬಾರದು. ಅಮಿತ್ ಶಾ ಮೇಲೆ ಕ್ರಮ ಜರುಗಿಸದೇ ಹೋದರೆ ಇಡೀ ದೇಶಾದ್ಯಾಂತ ಅಂಬೇಡ್ಕರ ಅಭಿಮಾನಿಗಳು ಬೀದಿಗಿಳಿದು ಹೋರಾಟ ಮಾಡಲಾಗುವುದು ಎಂದು ಮನವಿ ಮೂಲಕ ಆಗ್ರಹಿಸಿದರು.  


ಈ ಸಮಯದಲ್ಲಿ  ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ರಮೇಶ ಸಣ್ಣಕ್ಕಿ, ಶಾಬಪ್ಪಾ ಸಣ್ಣಕ್ಕಿ. ಸುರೇಶ ಸಣ್ಣಕ್ಕಿ, ಅಶೋಕ ಶಿದ್ದೀಲಿಂಗಪ್ಪಗೋಳ,  ಯಶವಂತ ಮಂಟುರ, ರಮೇಶ ಇರಗಾರ, ಪ್ರಭಾಕರ ಮಂಟುರ, ತುಕಾರಾಮ  ಬ.ಮಾದರ,  ಯಶವಂತ ಮರೆನ್ನವರ, ಯಾಕೋಬ ಸಣ್ಣಕ್ಕಿ,  ವಿಲಸನ ಡವಳೇಶ್ವರ,  ಸುಂದರ ಬಾಲಪ್ಪನವರ, ಈರ​‍್ಪ ಡವಳೆಶ್ವರ,  ಬಸವರಾಜ ಬಡಿಗವಾಡ, ತಮಣ್ಣ ಗಸ್ತಿ, ಯಮನ್ನಪ್ಪ ಮೇತ್ರಿ, ಯಲ್ಲಪ್ಪ ಮನಕಪ್ಪಗೋಳ, ಶಿವಾನಂದ ಹೊಸಮನಿ, ರವಿ ಮೂಡಲಗಿ, ರಮೇಶ  ಶಿಡಪ್ಪಗೋಳ, ಶಾನೂರ ಸಣ್ಣಕ್ಕಿ, ಪ್ರವೀನ ಕೆಂಗೇರಿ ಭೀಮಶೀ ತಳವಾರ ಹನಮಂತ ಸಣ್ಣಕ್ಕಿ ಮತ್ತಿತರರು ಇದ್ದರು.