ವಿಧಾನ ಪರಿಷತ್ ಸದಸ್ಯರಾದ ಸಿ.ಟಿ. ರವಿ ಬಂಧನ ಭಾರತೀಯ ಜನತಾ ಪಾರ್ಟಿ ಪತ್ರಿಭಟನೆ
ಹಾವೇರಿ 20: ನಗರದ ಹೊಸಮನಿ ಸಿದ್ದಪ್ಪ ಸರ್ಕಲ್‌ನಲ್ಲಿ ವಿಧಾನ ಪರಿಷತ್ ಸದಸ್ಯರಾದ ಸಿ.ಟಿ. ರವಿ ಅವರ ಬಂಧನ ಮಾಡಿರುವುದನ್ನು ಖಂಡಿಸಿ ಭಾರತೀಯ ಜನತಾ ಪಾರ್ಟಿ ಜಿಲ್ಲಾ ಘಟಕ ವತಿಯಿಂದ ಪತ್ರಿಭಟನೆ ಮಾಡಲಾಯಿತು.
ಜಿಲ್ಲಾಧ್ಯಕ್ಷ ಅರುಣಕುಮಾರ ಪೂಜಾರ ಮಾತನಾಡಿ ಮಾಜಿಸಚಿವರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಸಿ.ಟಿ ರವಿ ಅವರ ಮೇಲೆ ಸುವರ್ಣ ಸೌದದ ಮೊಗ ಶಾಲೆಗೆ ನುಗ್ಗಿದ ಕಾಂಗ್ರೆಸ್ ಕಾರ್ಯಕರ್ತರು ಹಲ್ಲೆ ಮಾಡಲು ಪ್ರಯತ್ನಿಸಿದ್ದು,ಅತ್ಯಂತ ಶೋಚನಿಯ ಸಂಗತಿಯಾಗಿದೆ.ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದೆ.ಜನಸಾಮಾನ್ಯರಿಗೆ ಮಾತ್ರವಲ್ಲದೆ ಸಂವಿಧಾನಬದ್ಧವಾಗಿ ವಿಧಾನ ಪರಿಷತ್ ಸದಸ್ಯರಿಗೂ ಇಂದು ಸುರಕ್ಷತೆ ಇಲ್ಲದಂತಾಗಿದೆ.ಸಿ.ಟಿ ರವಿ ಇವರ ಮೇಲೆ ಹಲ್ಲೆ ನಡೆದಿದ್ದು ಖಂಡನೀಯವಾಗಿದೆ ಎಂದರು.
ಮಾಜಿಶಾಸಕರಾದ ವಿರುಪಾಕ್ಷಪ್ಪ ಬಳ್ಳಾರಿ ಮಾತನಾಡಿ ರಾಜಕಾರಣದ ಕೊನೆಯ ನೀತಿ ಗುಂಡಾಗಿರಿಯನ್ನು ಕಾಂಗ್ರೇಸ್ ನವರು ಬಿಜೆಪಿ ಶಾಸಕರ ಮೇಲೆ ದೌರ್ಜನ್ಯವನ್ನು ಮಾಡುವುದು ಖಂಡನೀಯ ಎಂದು ಹೇಳಿದರು.ಪ್ರತಿಭಟನೆಯಲ್ಲಿ ರಾಜ್ಯ ಮಹಿಳಾ ಪ್ರಧಾನ ಕಾರ್ಯದರ್ಶಿಯಾದ ಶೋಭಾ ನಿಸ್ಸಿಮಗೌಡ್ರ,ರಾಷ್ಟ್ರೀಯ ಪರಿಷತ್ ಸದಸ್ಯರಾದ ಮಂಜುನಾಥ ಓಲೇಕಾರ,ಗವಿಸಿದ್ದಪ್ಪ ದ್ಯಾಮಣ್ಣನವರ, ಸಿದ್ದರಾಜ ಕಲಕೋಟಿ ರವರು ಮಾತನಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾ ನಂಜುಂಡೇಶ ಕಳ್ಳೇರ,ಮಂಜುನಾಥ ಗಾಣಿಗೇರ,ವೆಂಕಟೇಶ ನಾರಾಯಣಿ,ಡಾ.ಸಂತೋಷ ಆಲದಕಟ್ಟಿ,ಜಿಲ್ಲೆಯ ಹಿರಿಯ ಮುಖಂಡರಾದ ಮುರಗೆಪ್ಪ ಶೆಟ್ಟರ,ನಾಗೇಂದ್ರ ಕಡಕೋಳ,ಕೆ.ಶಿವಲಿಂಗಪ್ಪ, ಕಲ್ಯಾಣಕುಮಾರ ಶೆಟ್ಟರ,ಭಾರತಿ ಜಂಬಗಿ,ಸುರೇಶ ಹೊಸಮನಿ,ನಿಂಗಪ್ಪ ಗೊಬ್ಬೇರ ಮತ್ತು ರಾಜ್ಯ,ಜಿಲ್ಲೆ,ಮಂಡಲ ಪದಾಧಿಕಾರಿಗಳು,ಜಿಲ್ಲಾ ಮೋರ್ಚಾ ಪದಾಧಿಕಾರಿಗಳು, ಕಾರ್ಯಕರ್ತರು ಭಾಗವಹಿಸಿದ್ದರು.
.