ಸರ್ಕಾರಿ ಪ್ರೌಢಶಾಲೆಯಲ್ಲಿ ಶಾಲಾ ಸಂಸತ್ ಚುನಾವಣೆ: ಮತಹಾಕಿ ನೈಜ ಅನುಭವ ಪಡೆದ ವಿದ್ಯಾರ್ಥಿಗಳು
School Parliament elections at government high school: Students gain real-life experience by voting
ಹೂವಿನ ಹಡಗಲಿ 26- ಪಟ್ಟಣದ ಸರ್ಕಾರಿ ಅನುದಾನಿತ ತುಂಗಭದ್ರಾ ಪ್ರೌಢಶಾಲೆಯಲ್ಲಿ 2025-26 ನೇ ಸಾಲಿನ ಶಾಲಾ ಸಂಸತ್ತಿಗೆ ಗುರುವಾರ ಚುನಾವಣೆ ನಡೆಯಿತು. ಡಾ ಬಿ ಆರ್‌ಅಂಬೇಡ್ಕರ್ ಮತದಾರರ ಸಾಕ್ಷರತಾ ಕ್ಲಬ್ ವತಿಯಿಂದ ಆಯೋಜಿಸಿದ್ದ ಚುನಾವಣೆಯಲ್ಲಿಒಟ್ಟು 356 ವಿದ್ಯಾರ್ಥಿಗಳು ತಮ್ಮ ಮತ ಹಾಕುವ ಮೂಲಕ ಚುನಾವಣೆಯ ವಿವಿಧ ಹಂತಗಳನ್ನು ಅರ್ಥೈಸಿಕೊಂಡರು.
ಕೇಂದ್ರ ರಾಜ್ಯಚುನಾವಣಾಆಯೋಗದಿಂದ ನಡೆಯುವ ರೀತಿಯಲ್ಲಿಯೇ ಮತದಾನ ನಡೆದು ಮಕ್ಕಳು ಸರದಿ ಸಾಲಿನಲ್ಲಿ ನಿಂತು ನೈಜ ಅನುಭವ ಪಡೆದರು.ಚುನಾವಣೆಯಲ್ಲಿ ಬಳಸಲಾಗುವ ರಿಜಿಸ್ಟ್ರಾರ್, ಮತಪತ್ರ, ಬ್ಯಾಲೆಟ್ ಹಾಕುವ ಬಾಕ್ಸ್, ಬೆರಳಿಗೆ ಅಳಿಸಲಾಗದ ಶಾಹಿ ಇತ್ಯಾದಿ ಪರಿಕರಗಳನ್ನು ಯಥಾವತ್ತಾಗಿ ಬಳಸಲಾಯಿತು.ಚುನಾವಣೆ ಅಧಿಸೂಚನೆ ಅಭ್ಯರ್ಥಿಗಳ ಉಮೇದುವಾರಿಕೆ ನಾಮಪತ್ರಗಳ ಪರೀಶೀಲನೆ ಹಿಂಪಡೆಯುವಿಕೆ, ಪ್ರಚಾರ,ಮೊದಲಾದ ಅಂಶಗಳನ್ನು ಅಳವಡಿಸಿ ಚುನಾವಣೆ ನಡೆಸಲಾಯಿತು.ಶಿಕ್ಷಣ ಇಲಾಖೆಯ ಶೈಕ್ಷಣಿಕ ಮಾರ್ಗಸೂಚಿ ಪ್ರಕಾರ ಪ್ರತಿವರ್ಷ ಶಾಲೆಯಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನಜಾಗೃತಿ ಮೂಡಿಸಲುಚುನಾವಣೆ ನಡೆಸಲಾಗಿದೆಎಂದು ಸಂಚಾಲಕ ಆನಂದ್ ಜಿ ಹೇಳಿದರು.
ಚುನಾವಣಾ ಅಧಿಕಾರಿಗಳಾಗಿ ಸ್ವಾಮಿನಾಥರಾಮಸ್ವಾಮಿ ಬಸಪ್ಪ ಕೆ, ಎಲ್‌ಗಿಡ್ಡಾನಾಯ್ಕ್,ಗೀತಾ ಪಿ ಎಂ ಪ್ರತಿಮಾಎನ್‌ರೇಖಾಎಸ್ ಸಂತೋಷಕುಮಾರ್, ಹರೀಶ್‌ಜೆಎಸ್‌ಎಸ್ ಶಿಕ್ಷಣ ಮಹಾವಿದ್ಯಾಲಯದ ಪ್ರಶಿಕ್ಷಣ ವಿದ್ಯಾರ್ಥಿಗಳಾದ ಮಂಜುನಾಥ, ಐಶ್ವರ್ಯ, ಹುಲಿಗೆಮ್ಮ, ಕೆಂಚಪ್ಪ, ಪೂಜಾ,ಪ್ರೀತಿ, ರವಿಕುಮಾರ್ ಪೂಜಾರ,ಪುನೀತ್‌ಕುಮಾರ್, ಪವಿತ್ರ,ರಾಜೇಶ್ವರಿ, ನಾಗರತ್ನ,ವೀರಭದ್ರಯ್ಯ ಎಂ ಪಿ ಎಂ ಕಾರ್ಯ ನಿರ್ವಹಿಸಿದರು.ಮುಖ್ಯ ಗುರುಗಳಾದ ಸುರೇಶಅಂಗಡಿ ಸೂಕ್ತ ಮಾರ್ಗದರ್ಶನ ನೀಡಿದರು.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 