ಯೋಗ ಜಾಥಕ್ಕೆ ಶಾಲಾ ಮಕ್ಕಳ ಬಳಕೆ : ಯೋಗದ ನಡಿಗೆ ಆರೋಗ್ಯದೆಡೆಗೆ - ಮಳೆಯಲ್ಲೇ ಜಾಥಾ

ಕಾರವಾರ ; ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್  ಆಯುಷ್,  ಆರೋಗ್ಯ, ಸಾರ್ವಜನಿಕ ಶಿಕ್ಷಣ ಇಲಾಖೆ  ಸ್ಕೌಟ್ಸ್ ಮತ್ತು ಗೈಡ್ಸ್, ಭಾರತ ಸೇವಾದಳ,  ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಆಶ್ರಯದಲ್ಲಿ  ಹಮ್ಮಿಕೊಳ್ಳಲಾಗಿದ್ದ ಯೋಗ ನಡಿಗೆ  ಆರೋಗ್ಯದೆಡೆಗೆ ಜಾಥಾಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.  ಜಿ.ಎನ್ ಅಶೋಕ ಕುಮಾರ  ಚಾಲನೆ ನೀಡಿದರು.

  ಜಿಲ್ಲಾ ಆಯಷ್ ಇಲಾಖೆ ಕಚೇರಿಯಿಂದ  ಆರಂಭಗೊಂಡ ಜಾಥಾಕ್ಕೆ ಶಾಲಾ ಮಕ್ಕಳನ್ನು ಬಳಸಿಕೊಳ್ಳಲಾಯಿತು. ಜಾಥ  ಪಿಕಳೆ ರಸ್ತೆ, ಜಿಲ್ಲಾಧಿಕಾರಿಗಳ ಕಾಯರ್ಾಲಯ ರಸ್ತೆ ಮೂಲಕ ಸಾಗಿ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಜಿಲ್ಲಾ ಆಯುಷ್ ಆಸ್ಪತ್ರೆ ಆವರಣದಲ್ಲಿ ಮುಕ್ತಾಯಗೊಂಡಿತು. 

  ವಿವಿಧ ಶಾಲಾ ಹಾಗೂ ನಸರ್ಿಂಗ್ ಕಾಲೇಜುಗಳ ವಿದ್ಯಾಥರ್ಿಗಳು, ಸ್ಕೌಟ್ಸ್ ಮತ್ತು ಗೈಡ್ಸ್ ಕೆಡೆಟ್ಗಳು, ಸೇವಾದಳದ ಕಾರ್ಯಕರ್ತರು, ಯೋಗ ತರಬೇತಿ ನೀಡುವ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಸದಸ್ಯರು ಸೇರಿದಂತೆ ಸಾವಿರಾರು ಜನರು ಜಾಥಾದಲ್ಲಿ ಪಾಲ್ಗೊಂಡಿದ್ದರು.

 ಜಿಲ್ಲಾ ಆಯುಷ್ ಅಧಿಕಾರಿ ಲಲಿತಾ ಯು.ಎಚ್. ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಕೆಲ  ಶಾಲಾ ಕಾಲೇಜು ಶಿಕ್ಷಕರು ಉಪಸ್ಥಿತರಿದ್ದರು. 

ವಿಶೇಷ ಉಪನ್ಯಾಸ :

 5ನೇ ಅಂತರಾಷ್ಟ್ರೀಯ ಯೋಗ ದಿನಾಚಾರಣೆ ಅಂಗವಾಗಿ ಜಿಲ್ಲಾ ಆಯುಷ ಇಲಾಖೆ ಯೋಗಾ ಹಾಲ್ ನಲ್ಲಿ ವಿಶೇಷ ಉಪನ್ಯಾಸ ನೀಡಲಾಯಿತು. ಜಿಲ್ಲಾಸ್ಪತ್ರೆ ಆಯುಷ್ ವಿಭಾಗದ ಯೋಗ ಮತ್ತು ಪ್ರಕೃತಿ ಚಿಕಿತ್ಸೆ ವೈದ್ಯ  ಎ.ಜೆ. ಪ್ರಕಾಶ  ಉಪನ್ಯಾ ನೀಡಿ ಭಾರತೀಯ ವೈವಿಧ್ಯಮಯ ಬಹುಮುಖಿ  ಸಂಸ್ಕೃತಿ, ಆರೋಗ್ಯದ  ಸಂಕೇತವೊ ಎಂಬಂತೆ ಯೋಗ ಇಂದು ಎಲ್ಲಾ ಕಡೆ  ಮಾನ್ಯತೆ ಪಡೆಯುತ್ತಿರುವುದು ಅತ್ಯಂತ ಮಹತ್ವದ ವಿಷಯ. ಸಧೃಡ ಶರೀರ ಹಾಗೂ ಸ್ವಸ್ಥ ಮನಸ್ಸುನ್ನು ರೂಪಿಸಲು ಜೀವನ ಕ್ರಮದಲ್ಲಿಯೇ ಮಹತ್ವದ ಪರಿವರ್ತನೆ ತರಲು ಯೋಗ, ಎಲ್ಲಾ ತರಹದ ಆಹಾರ ಪದ್ಧತಿ ಹಾಗೂ ಬೆವರು ಸುರಿಸಿ ದುಡಿದಾಗ  ಮಾತ್ರ ಸಹಾಯಕವಾಗುತ್ತದೆ. 

ದುಡಿಮೆ ಹಾಗೂ ಯೋಗವನ್ನು  ಜೀವನದಲ್ಲಿ ಅನುಷ್ಠಾನಗೊಳಿಸುವುದರ ಮೂಲಕ ಮುಪ್ಪನ್ನು ಮುಂದೂಡುವುದು  ಸೇರಿದಂತೆ ಜೀವನ ಪರ್ಯಂತ ಆರೋಗ್ಯ ದಿಂದ ಇರಬಹುದು ಆಗಿದೆ ಎಂದರು.