ಜೈನಮಿಲನಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶಿಷ್ಯವೇತನ ವಿತರಣೆ ಕಾರ್ಯಕ್ರಮ

ಜೈನಮಿಲನಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶಿಷ್ಯವೇತನ ವಿತರಣೆ ಕಾರ್ಯಕ್ರಮ Scholarship distribution program for talented students

ಲೋಕದರ್ಶನ ವರದಿ 

ಧಾರವಾಡ 24: ಧಾರ್ಮಿಕ ಸಂಸ್ಕಾರ, ಜನಕಲ್ಯಾಣ ಮತ್ತು ಸಹಾಯ ಪ್ರವೃತ್ತಿಗಳನ್ನ ಪ್ರೇರೇಪಿಸುವ ಮೂಲಕ ಧಾರವಾಡ ಜೈನ ಮಿಲನ ಮುಂಚೂಣಿಯಲ್ಲಿದೆ ಎಂದು ಮಿಲನದ ಸಂಸ್ಥಾಪಕ ಕಾರ್ಯದರ್ಶಿಗಳಾದ ಡಾ. ಅಜಿತ ಪ್ರಸಾದರವರು ಹೇಳಿದರು, ಅವರು ರವಿವಾರ ನಡೆದ ಜೈನಮಿಲನಿನ ಮಾಸಿಕ ಸಭೆಯ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು, ಕಳೆದ 34 ವರ್ಷಗಳಿಂದ ಸದಸ್ಯರ ಮನೆ ಮನೆಗಳಲ್ಲಿ ಸಭೆಗಳನ್ನು ಆಯೋಜಿಸಿ ಕ್ರಿಯಾಶೀಲ ಚಟುವಟಿಕೆಯಲ್ಲಿ ತೊಡಗಿಸಿಕೊಂಡ ಮಿಲನಿನ ಸದಸ್ಯರನ್ನು ಅಭಿನಂದಿಸಿದರು.  

ಶಾಂತರಾಜ ಮಲ್ಲಸಮುದ್ರ ಇವರ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯ ಪ್ರಾರಂಭದಲ್ಲಿ ಮೂರು ಬಾರಿ ಣಮೋಕಾರ ಮಹಾಮಂತ್ರ ಪಠಣ ಮಾಡುವುದರೊಂದಿಗೆ ಸಭೆಗೆ ಚಾಲನೆ ನೀಡಲಾಯಿತು. ವರ್ಷಾ ಅಷ್ಟಗಿ ಮತ್ತು ಮಕ್ಕಳಿಂದ ಪ್ರಾರ್ಥನೆ ಜರುಗಿತು. ಹಾಗೂ ಧಾರ್ಮಿಕ ಪ್ರಸ್ತಾವನೆಯನ್ನು ಚೈತ್ರಾ ಮತ್ತ ಪೂಜಾ ಅಷ್ಟಗಿ ನಡೆಸಿದರು. ಪ್ರಿಯಾ ಹೋಳಗಿಯವರು ಧಾರ್ಮಿಕ ಪ್ರಶ್ನಾವಳಿಯನ್ನು ನಡೆಸಿಕೊಟ್ಟರು ಹಾಗೂ ರತ್ನಾಕರ ಹೋಳಗಿ ಅವರು ಪ್ರಸಕ್ತ ಮಾಸದಲ್ಲಿ ಬರುವ ಹುಟ್ಟುಹಬ್ಬ ಹಾಗೂ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು ಕೋರಿದರು. ಮುಖ್ಯ ಅತಿಥಿಗಳಾಗಿ ಬಾಳಣ್ಣ ಶೀಗೆಹಳ್ಳಿಯವರು ಮಾತನಾಡಿ ಕನ್ನಡದ ಮೊದಲ ಕವಿ ಪಂಪನ ಬಗ್ಗೆ ಮತ್ತು ಅವನು ಕನ್ನಡ ಸಾಹಿತ್ಯಕ್ಕೆ ನೀಡಿದ ಕೊಡುಗೆ ಕುರಿತಾಗಿ ವಿವರವಾಗಿ ತಿಳಿಸಿದರು. ಇನ್ನೊಬ್ಬ ಅತಿಥಿಯಾಗಿ ಆಗಮಿಸಿದ್ದ ನಂದಿನಿ ಬಾಗಿ ಭಾಗವಹಿಸಿದ್ದರು. ವಿಶೇಷವಾಗಿ ಆತಿಥ್ಯವನ್ನು ತವನಪ್ಪ ಅಷ್ಟಗಿ ಮತ್ತು ಕಸ್ತೂರಿ ಅಷ್ಟಗಿ ಮತ್ತು ಪರಿವಾರದವರು ವಹಿಸಿದ್ದರು. 

ಇದೇ ಸಂದರ್ಭದಲ್ಲಿ 25 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮಿಲನದ ವತಿಯಿಂದ ಶಿಷ್ಯವೇತನವನ್ನು ವಿತರಣೆ ಮಾಡಿ ಅವರಿಗೆ ಶುಭ ಕೋರಿ ಅಭಿನಂದಿಸಲಾಯಿತು. ಅಧ್ಯಕ್ಷೀಯ ನುಡಿಗಳನ್ನಾಡಿದ ಶಾಂತರಾಜ ಮಲ್ಲಸಮುದ್ರ ಮಿಲನಿನ ಚಟುವಟಿಕೆಗಳನ್ನು ಮೆಚ್ಚಿಕೊಂಡು ಮುಕ್ತ ಕಂಠದಿಂದ ಪ್ರಶಂಸಿಸಿದರು. 

ಧಾರವಾಡ ಜೈನ ಮಿಲನಕ್ಕೆ  ನೂತನವಾಗಿ ಸದಸ್ಯತ್ವ ಪಡೆದುಕೊಂಡ ಭರಮಪ್ಪ ಭಾವಿ ಮತ್ತು ಶ್ರೀಕಾಂತ ಕ್ಯಾತಪ್ಪನವರನ್ನು ಸ್ವಾಗತಿಸಿ ಪುಷ್ಪ ಕೊಟ್ಟು ಗೌರವಿಸಲಾಯಿತು. ಕಾರ್ಯಕ್ರಮದ ನಿರೂಪಣೆಯನ್ನು ಮಿಲನದ ಅಧ್ಯಕ್ಷರಾದ ಜಿನ್ನಪ್ಪ ಕುಂದಗೋಳರವರು ನಡೆಸಿಕೊಟ್ಟರು. ಹಿಂದಿನ ಮಾಸಿಕ ಸಭೆಯ ವರದಿಯನ್ನು ಮೋಹನ್ ಗೋಗಿ ಅವರು ವಾಚಿಸಿದರು ಹಾಗೂ ವಂದಣಾರೆ​‍್ಣಯನ್ನು ಮಹಾವೀರ ಉಪಾಧ್ಯೆ ನಡೆಸಿಕೊಟ್ಟರು. ಕೊನೆಯಲ್ಲಿ ಮೂರು ಬಾರಿ ಮಹಾಮಂತ್ರ ಣಮೋಕಾರ ಮಂತ್ರದೊಂದಿಗೆ ಸಭೆಯು ಸಂಪನ್ನಗೊಂಡಿತು.