ಲಕ್ಷ್ಮೇಶ್ವರ ಠಾಣೆಯಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ಕುಂದು ಕೊರತೆ ಸಭೆ
Scheduled Caste and Scheduled Tribe grievance meeting at Lakshmeshwar police station
ಲಕ್ಷ್ಮೇಶ್ವರ 12 : "ಪಟ್ಟಣದ ಪೊಲೀಸ್ ಠಾಣೆಯಲ್ಲಿ ಸಿಪಿಐ ಬಿ ವ್ಹಿ ನ್ಯಾಮಗೌಡ ಪಿಎಸ್‌ಐ ನಾಗರಾಜ್ ಗಡದ ಅವರ ನೇತೃತ್ವದಲ್ಲಿ ಶನಿವಾರ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ಕುಂದು ಕೊರತೆ ಜರುಗಿತುಸಭೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮುಖಂಡರಾದಬಸವರಾಜ ಹಿರೇಮನಿ ಅವರು ಮಾತನಾಡಿ ಯಾವುದೇ ಜನಾಂಗದ ದವರ ಸಮಸ್ಯೆ ಇರಲಿ ಅವುಗಳ ಬಗ್ಗೆ ನಿಮ್ಮ ಠಾಣೆಗೆ ದೂರು ಬಂದರೆ ಅವುಗಳನ್ನು ತಕ್ಷಣವೇ ಬಗೆಹರಿಸಿ ಇಲ್ಲದಿದ್ದರೆ ಬೇಗನೆ ಕೇಸ್ ಮಾಡಿ ಜಾತಿಯ ನೋಡಿ ಒಬ್ಬರಿಗೊಂದು ಒಬ್ಬರಿಗೊಂದು ಮಾಡಿ ಹಿಂದೇಟು ಹಾಕಬೇಡಿ ಮತ್ತು ಪಟ್ಟಣದಲ್ಲಿ ವಾಹನಗಳನ್ನು ತೊಳೆಯುವ ಸರ್ವಿಸ್ ಅಂಗಡಿಯವರು ಎಲ್ಲೆಂದರಲ್ಲಿ ನೀರು ಬಿಡುತ್ತಾರೆ ಅದನ್ನು ತಡೆಗಟ್ಟಿ ಎಂದರು ರಮೇಶ್ ಹಗನಕಟ್ಟಿ ಅವರು ಮಾತನಾಡಿ ನಾವು ನಮ್ಮ ಸಮಸ್ಯೆಗಳ ಬಗ್ಗೆ ತಾಲೂಕು ದಂಡಾಧಿಕಾರಿಗಳಿಗೆ ತಿಳಿಸಬೇಕೆಂದರೆ ಫೋನು ರೀಸೀವ್ ಮಾಡುವುದಿಲ್ಲ ನಮ್ಮ ಸಮಸ್ಯೆಯನ್ನು ಯಾರ ಬಳಿ ಹೇಳೋಣ ನಮ್ಮ ಸೂರಣಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಹೆಣ್ಣು ಮಕ್ಕಳ ಶಾಲೆಯಲ್ಲಿ ನಮ್ಮ ಅಲೆಮಾರಿ ಜನಾಂಗದ ಮಕ್ಕಳನ್ನು ಶಿಕ್ಷಕಿಯರು ತಮ್ಮ ಮನೆ ಕೆಲಸಕ್ಕೆ ಬಳಸಿಕೊಳ್ಳುತ್ತಾರೆ ಇದರಿಂದ ಅವರು ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತದೆ.
ಅದನ್ನು ತಡೆಗಟ್ಟಬೇಕು ಎಂದರು ಸಂತೋಷ್ ಹಾದಿಮನಿ ಅವರು ಮಾತನಾಡಿ ನಮ್ಮ ಅಂಬೇಡ್ಕರ್ ನಗರದಲ್ಲಿ ಸೊಳ್ಳೆಗಳ ಹಾವಳಿ ಹೆಚ್ಚಾಗಿದೆ ಇದಕ್ಕೆ ನಮ್ಮ ಅಂಬೇಡ್ಕರ್ ನಗರದ ಪಕ್ಕದಲ್ಲಿರುವ ಲಂಡಿ ಹಳ್ಳದ ಸ್ವಚ್ಛತೆಯ ಇಲ್ಲದಿರುವದೇ ಇದಕ್ಕೆ ಮೂಲ ಕಾರಣ ಲಂಡಿ ಹಳ್ಳಕ್ಕೆ ಸೇರುವ ಗಲೀಜು ನೀರು ಹರಿದು ಸರಿಯಾಗಿ ಹೋಗುವುದಿಲ್ಲ ಇದರಿಂದ ಒಳಚರಂಡಿ ಪೈಪ್ ಲೈನ್ ಮುಖಾಂತರ ಗಲೀಜು ನೀರು ನಮ್ಮ ಏರಿಯಾಕ್ಕೆ ಬರುತ್ತದೆ ಅದನ್ನು ತಡೆಗಟ್ಟಬೇಕು ಎಂದರು ಇಸ್ಮಾಯಿಲ್ ಅಡೂರು ಅವರು ಮಾತನಾಡಿ ಗಾಂಜಾ ಮಾರಾಟದ ಅವಳಿ ಹೆಚ್ಚಾಗಿದೆ ಇದರಿಂದ 14- 16- ವರ್ಷದ ಹುಡುಗರು ಗಾಂಜಾ ಚಟಕ್ಕೆ ಬಿದ್ದಿದ್ದಾರೆ ಅದಕ್ಕಾಗಿ ಗಾಂಜಾ ಮಾರಾಟ ಮಾಡುವವರನ್ನು ಬೇಗನೆ ಪತ್ತೆಹಚ್ಚಿ ಸೂಕ್ತ ಕ್ರಮ ಕೈಗೊಳ್ಳಿ ಎಂದರು ಇನ್ನು ಅನೇಕ ಮುಖಂಡರು ಸಮಸ್ಯೆಗಳನ್ನು ತಿಳಿಸಿದರು ಇದಕ್ಕೆ ಉತ್ತರಿಸಿದ ಸಿಪಿಐ ಬಿ ವ್ಹಿ ನ್ಯಾಮಗೌಡ ಪಿಎಸ್‌ಐ ನಾಗರಾಜ್ ಗಡದ ಅವರು ನಿಮ್ಮ ಸಮಸ್ಯೆಗಳಿಗೆ ಸಂಬಂಧಪಟ್ಟಂತ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು ಸಭೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮುಖಂಡರಾದ ಮಂಜುನಾಥ ಚಲವಾದಿ ಅನಿಲ ಮುಳಗುಂದ ತಾವರೆಪ್ಪ ಲಮಾಣಿ ಪುಂಡಲಿಕ ಲಮಾಣಿ ಚಂದ್ರು ಲಮಾಣಿ ಸೇರಿದಂತೆ ಇನ್ನು ಅನೇಕ ಯುವ ಮುಖಂಡರು ಪೊಲೀಸ್ ಠಾಣೆಯ ಇತರೆ ಪೊಲೀಸ್ ಸಿಬ್ಬಂದಿ ವರ್ಗದವರು ಇದ್ದರು
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 