ಬಾಗಲಕೋಟೆ: ಹಿಂದಿನ ವಿವಿಧ ವಸತಿ ಯೋಜನೆಗಳಲ್ಲಿ ಅವ್ಯವಹಾರ, ಗೋಲಮಾಲ್ ನಡೆದಿರುವ ಬಗ್ಗೆ ಸತ್ಯಾಸತ್ಯತೆಯನ್ನು ತಿಳಿದುಕೊಳ್ಳಲು ತನಿಖೆಗೆ ಒಳಪಡಿಸಿ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ಹಾಗೂ ಜಿ.ಪಂ ಸಿಇಓಗಳಿಗೆ ವಸತಿ, ತೋಟಗಾರಿಕೆ ಹಾಗೂ ರೇಷ್ಮೆ ಸಚಿವರಾದ ವಿ.ಸೋಮಣ್ಣ ಸೂಚಿಸಿದರು.
ಜಿಲ್ಲಾ ಪಂಚಾಯತ ಸಭಾಭವನದಲ್ಲಿಂದು ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳ ಸಂತ್ರಸ್ತರಿಗೆ ಕಲ್ಪಿಸಿದ ವಸತಿ ಸೌಲಭ್ಯ ಸೇರಿದಂತೆ ಜಿಲ್ಲೆಯಲ್ಲಿನ ವಸತಿ, ತೋಟಗಾರಿಕೆ ಹಾಗೂ ರೇಷ್ಮೆ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ವಿವಿಧ ವಸತಿ ಯೋಜನೆಗಳಲ್ಲಿ ಅಧಿಕಾರಿಗಳು ಗೋಲ್ಮಾಲ್ ಕುರಿತಂತೆ ತನಿಖೆ ನಡೆಸಲು ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಾಗಿದೆ ಎಂದು ತಿಳಿಸಿದರು.
ಪ್ರವಾಹದಿಂದ ಬೆಳಗಾವಿ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ತೀವ್ರ ಹಾನಿಯಾಗಿದ್ದು, ಶೇ.30 ಬಾಗಲಕೋಟೆಯಲ್ಲಿ ಕಂಡುಬಂದಿದೆ. ಬಡವರಿಗೆ ಮನೆ ನೀಡುವುದರಲ್ಲಿ ಹಲವಾರು ವರ್ಷಗಳಿಂದ ಕೆಲ ಲೋಪಗಳನ್ನು ಗುರುತಿಸಲಾಗಿದ್ದು, ಅಧಿಕಾರಿಗಳು ಪಾರದರ್ಶಕತೆ ಕಾಪಾಡಬೇಕು. ಒಂದೇ ಮನೆಗೆ 4-5 ಬಾರಿ ಹಣ ಪಡೆದ ಉದಾಹರಣೆಗಳು ಇದ್ದು, ತನಿಕೆ ಆರಂಭಿಸಲಾಗಿದೆ ಎಂದರು. ಕೆಳಹಂತದ ಅಧಿಕಾರಿಗಳಿಂದ ಕೂಲಂಕುಶವಾಗಿ ಪರಿಶೀಲನೆ ನಡೆಸಿ ಮಾನಸಿಕವಾಗಿ ನೊಂದವರಿಗೆ ಇನ್ನು ಸಾವಿರಾರು ಬಡವರಿಗೆ ಮನೆ ನೀಡಲು ಕ್ರಮಕೈಗೊಳ್ಳಲಾಗುವುದೆಂದು ಜಿ.ಪಂ ಸಿಇಓ ಮಾನಕರ ತಿಳಿಸಿದರು.
ಜಿಲ್ಲೆಯಲ್ಲಿ ಈಗಾಗಲೇ ನಿಮರ್ಿಸಲಾದ ಆಶ್ರಯ ಮನೆಗಳಿಗೆ ಸಂತ್ರಸ್ತ ಫಲಾನುಭವಿಗಳು ವಾಸ ಮಾಡದೇ ಹಾಳಾಗಿದ್ದು, ಜಿಲ್ಲಾಧಿಕಾರಿಗಳು ಹಾಗೂ ಜಿ.ಪಂ ಸಿಇಓಗಳು ಸ್ಥಳಕ್ಕೆ ಹೋಗಿ ಪರಿಶೀಲಿಸಿ ದುರಸ್ತಿ ಕಾರ್ಯದ ಬಗ್ಗೆ ಪ್ರಸ್ತಾವನೆ ಮಂಡಿಸಲು ತಿಳಿಸಿದರು. ಇದೇ ಸಂದರ್ಭದಲ್ಲಿ ಹುನಗುಂದ ಶಾಸಕ ದೊಡ್ಡಗೌಡ ಪಾಟೀಲ ಅವರು ಹುನಗುಂದ ಕ್ಷೇತ್ರದಲ್ಲಿ 3 ಹಳ್ಳಿಗಳು ಸಂಪೂರ್ಣ ನೀರಿನಿಂದ ಜಲಾವೃತಗೊಂಡಿದ್ದು, ಸ್ಥಳಾಂತರಕ್ಕೆ ಮನವಿ ಮಾಡಿಕೊಂಡರು. ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಯ ಪ್ರಗತಿ ಪರಿಶೀಲನೆ ಮಾಡಲಾಯಿತು.
ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಮಾತನಾಡಿ ಗ್ರಾಮೀಣ ಅಭಿವೃದ್ದಿ ಮತ್ತು ಪಂಚಾಯತ್ ರಾಜ್ ವಿಭಾಗದಿಂದ ರಸ್ತೆ ದುರಸ್ಥಿಗೆ ಪ್ರತಿ ವಿಧಾನಸಭಾ ಮತಕ್ಷೇತ್ರವಾಗು 4 ಕೋಟಿ ರೂ. ನೀಡಲಾಗಿದೆ. ಹೆಸ್ಕಾಂಗೆ ಸಂಬಂಧಿಸಿದಂತ ಶೇ.98 ವಿದ್ಯುತ್ ಕಾರ್ಯವನ್ನು ಮಾಡಲಾಗಿದೆ. 6404 ಹೊಸ ಕಂಬಗಳನ್ನು,2674 ಹೊಸ ಪರಿವರ್ತಕಗಳನ್ನು ಹಾಗೂ 280 ಕಿಮೀ ಲೈನ್ ಹಾಕಲಾಗಿದೆ. 233 ಶಾಲೆಗಳು ಸಂಪೂರ್ಣವಾಗಿ ಹಾನಿಗೊಳಗಾಗಿದ್ದು, 316 ಬಾಗಶಃ ಹಾನಿಗೊಳಗಾಗಿವೆ.2.69 ಕೋಟಿ ರೂ. ರಿಪೇರಿಗಾಗಿ ಬೇಕಾಗಿದೆ. ದಾನಿಗಳು ಸಹ ಮುಂದೆ ಬಂದಿರುವುದಾಗಿ ತಿಳಿಸಿದರು.
ಸಂತ್ರಸ್ತರನ್ನು ಬೆರೆಡೆ ಸಂಪೂರ್ಣವಾಗಿ ಸ್ಥಳಾಂತರ ಮಾಡಲು ಯಾವುದೇ ತೊಂದರೆ ಇಲ್ಲ. ಆದರೆ ಸಂತ್ರಸ್ತರು ಹೋಗಲು ರೆಡಿ ಇರಬೇಕು. ಏಕೆಂದರೆ ಕಳೆದ 2009ರಲ್ಲಿ ನಿಮರ್ಿಸಲಾದ ಮನೆಗಳು ಸಾಕಷ್ಟು ವಾಸ ಮಾಡದೇ ಇರುವದರಿಂದ ಹಾನಿಗೊಳಗಾಗಿವೆ.
ಆದ್ದರಿಂದ ಸಂತ್ರಸ್ತರು ಬೇರೆ ಜಾಗದಲ್ಲಿ ಮನೆ ನಿಮರ್ಿಸಿಕೊಂಡಲ್ಲಿ ಹಳೆಯ ಮನೆಯನ್ನು ಸಂಪೂರ್ಣ ಕೆಡವುದಾಗಿ ತಿಳಿಸಿದರು. ನೆರೆ ಹಾನಿ ಮಾದರಿಯಲ್ಲಿ 8 ಸಾವಿರ ಮನೆ ಮಂಜೂರು ಮಾಡಲು ಮನವಿ ಮಾಡಲಾಯಿತು.
ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ಅವರು ಜಿಲ್ಲೆಯ ಪ್ರವಾಹದ ಪರಿಹಾರ ಕಾರ್ಯಗಳ ಮಾಹಿತಿ ನೀಡುತ್ತಾ, ಪ್ರವಾಹ ಸಂತ್ರಸ್ಥರಿಗೆ ಮೊದಲ ಹಂತದಲ್ಲಿ 45997 ಹಾಗೂ 2ನೇ ಹಂತದಲ್ಲಿ 4355 ಸೇರಿ ಒಟ್ಟು 50352 ಸಂತ್ರಸ್ತ ಕುಟುಂಬಗಳಿಗೆ ತುತರ್ು ಪರಿಹಾರವಾಗಿ ಪ್ರತಿ ಕುಟುಂಬಕ್ಕೆ 10 ಸಾವಿರ ರೂ.ಗಳಂತೆ ಜಮಾ ಮಾಡಲಾಗಿದೆ. ಹಾಗೂ 46,389 ವಿಶೇಷ ಆಹಾರ ಪೊಟ್ಟಣಗಳನ್ನು ವಿತರಿಸಲಾಗಿದೆ. ಸಂತ್ರಸ್ತರಿಗಾಗಿ ಲೋಕೋಪಯೋಗಿ ಇಲಾಖೆಯಿಂದ 87 ಶೆಡ್, ನಿಮರ್ಿತಿ ಕೇಂದ್ರದಿಂದ 184, ಆರ್ & ಆರ್ದಿಂದ 32 ಸೇರಿ ಒಟ್ಟು 303 ತಾತ್ಕಾಲಿಕ ಶೆಡ್ಗಳನ್ನು ನಿಮರ್ಿಸಲಾಗಿದೆ ಎಂದು ತಿಳಿಸಿದರು.
ಹಾನಿಗೊಳಗಾದ ಎ ವರ್ಗದ 470, ಬಿ ವರ್ಗದ 1681 ಮತ್ತು ಸಿ ವರ್ಗದ 5048 ಸೇರಿ ಒಟ್ಟು 6488 ಮನೆಗಳಿಗೆ ಆರ್ಟಿಜಿಎಸ್ ಮೂಲಕ ಪರಿಹಾರ ವಿತರಿಸಲಾಗಿದೆ. ಸಭೆಯಲ್ಲಿ ಶಾಸಕರಾದ ವೀರಣ್ಣ ಚರಂತಿಮಠ, ಜಿ.ಪಂ ಉಪಾಧ್ಯಕ್ಷ ಮುತ್ತಪ್ಪ ಕೋಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.