ಸಾವಿತ್ರಿಬಾಯಿ ಪುಲೆ ಜಯಂತಿ ಜನ್ಮದಿನ ಆಚರಣೆ
Savitribai Pule Jayanti birthday celebration
ತಾಳಿಕೋಟೆ 05: ಪಟ್ಟಣದ ಘನಮಠೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ಸಾವಿತ್ರಿಬಾಯಿ ಪುಲೆ ಅವರು ಜನವರಿ 3, 1831 ರಂದು ಮಹಾರಾಷ್ಟ್ರ ರಾಜ್ಯದ ಸತಾರಾ ಜಿಲ್ಲೆಯ ನೈಗಾಂವ್ ಗ್ರಾಮದಲ್ಲಿ ಜನಿಸಿದರು. ಅವರು ಭಾರತದ ಮೊದಲ ಮಹಿಳಾ ಶಿಕ್ಷಕಿ ಹಾಗೂ ಮಹಾನ್ ಸಮಾಜ ಸುಧಾರಕಿಯಾಗಿ ಪ್ರಸಿದ್ಧರಾಗಿದ್ದಾರೆ. ಈ ಸಮಯದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಡಾ.ಎಸ್.ಎಂ.ಸಜ್ಜನ ಅವರು ಮಾತನಾಡಿ ಸಾವಿತ್ರಿಬಾಯಿ ಪುಲೆ ಅವರು ಭಾರತದ ಪ್ರಥಮ ಮಹಿಳಾ ಶಿಕ್ಷಕಿ, ಸಮಾಜ ಸುಧಾರಕಿ ಹಾಗೂ ಮಹಿಳಾ ಶಿಕ್ಷಣದ ಮುಂಚೂಣಿ ನಾಯಕಿ. ಮಹಿಳೆಯರು ಮತ್ತು ದಲಿತರ ಶಿಕ್ಷಣಕ್ಕಾಗಿ ತಮ್ಮ ಜೀವನವನ್ನೇ ಸಮರ್ಿಸಿದ ಮಹಾನ್ ವ್ಯಕ್ತಿತ್ವವೇ ಬಾಲ್ಯದಲ್ಲಿ ಶಿಕ್ಷಣದಿಂದ ವಂಚಿತರಾಗಿದ್ದ ಅವರು, ವಿವಾಹದ ನಂತರ ಶಿಕ್ಷಣ ಪಡೆಯಲು ಆರಂಭಿಸಿದರು. 1840ರಲ್ಲಿ ಮಹಾತ್ಮ ಜ್ಯೋತಿಬಾ ಪುಲೆ ಅವರೊಂದಿಗೆ ವಿವಾಹವಾಯಿತು. ಜ್ಯೋತಿಬಾ ಪುಲೆ ಅವರ ಪ್ರೇರಣೆಯಿಂದ ಸಾವಿತ್ರಿಬಾಯಿ ಓದು ಬರಹ ಕಲಿತು ಶಿಕ್ಷಕಿಯಾಗಿದರು. ನಂತರ ಪುಣೆ ನಗರದಲ್ಲಿ ಶಿಕ್ಷಕ ತರಬೇತಿಯನ್ನು ಪೂರ್ಣಗೊಳಿಸಿದರು.
ಭಾರತದ ಮೊದಲ ಮಹಿಳಾ ಶಿಕ್ಷಕಿ ಮಹಿಳೆಯರಿಗೆ ಶಿಕ್ಷಣ ನೀಡುವ ಮೂಲಕ ಸಮಾಜದಲ್ಲಿ ಹೊಸ ಬೆಳಕನ್ನು ತಂದರು. 1848 ರಲ್ಲಿ ಮಹಾತ್ಮ ಜ್ಯೋತಿಬಾ ಪುಲೆ ಅವರೊಂದಿಗೆ ಪುಣೆಯಲ್ಲಿ ಬಾಲಕಿಯರಿಗಾಗಿ ಭಾರತದ ಮೊದಲ ಶಾಲೆಯನ್ನು ಆರಂಭಿಸಿದರು.ದಲಿತ ಮತ್ತು ಹಿಂದುಳಿದ ವರ್ಗಗಳ ಶಿಕ್ಷಣ,ಶೂದ್ರರು, ಅತಿಶೂದ್ರರು ಹಾಗೂ ದಲಿತರ ಶಿಕ್ಷಣಕ್ಕಾಗಿ ಅನೇಕ ಶಾಲೆಗಳನ್ನು ಸ್ಥಾಪಿಸಿದರು. 1897 ರಲ್ಲಿ ಪುಣೆಯಲ್ಲಿ ಪ್ಲೇಗ್ ರೋಗ ಹರಡಿದ್ದಾಗ ರೋಗಿಗಳ ಸೇವೆ ಮಾಡಿ ಮಾನವೀಯತೆ ತೋರಿದರು.ಸಾಹಿತ್ಯ ಸಾಧನೆಕಾವ್ಯಫುಲೆ ಮತ್ತು ಬಾವನ್ ಕಾಶಿ ಸುಬೋಧ್ ರತ್ನಾಕರ ಎಂಬ ಕೃತಿಗಳ ಮೂಲಕ ಸಾಮಾಜಿಕ ಜಾಗೃತಿ ಮೂಡಿಸಿದರು. ಸಂಸ್ಥೆಯ ಕಾಯದರ್ಶಿ ವಿವೇಕಾನಂದ ಸಜ್ಜನ, ಮುಖ್ಯಗುರು ಬಿ.ಜಿ.ಸಜ್ಜನ, ಆರ್.ಎಸ್.ದೇಸಾಯಿ, ದೈಹಿಕ ಶಿಕ್ಷಕ ಶಿವಾನಂದ ಸುಣಧೋಳಿ, ಸಿಬಿಎಸ್‌ಇ ಪ್ರಾಚಾರ್ಯ ಜಯಚಂದ್ರ, ಬಿಎಡ್ ಕಾಲೇಜ್ ಪ್ರಾಚಾರ್ಯ ಟಿ.ವ್ಹಿ ಶೆಟ್ಟಿ, ಜಿ.ಎನ್.ಪಾಟೀಲ, ಸರ್ವ ಸಿಬ್ಬಂದಿವರ್ಗ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 