ಲೋಕದರ್ಶನ ವರದಿ
ಗದಗ 16: ದೇಶದ ಮೊದಲ ಮಹಿಳಾ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಅವರ ಬದುಕು ಆದರ್ಶಮಯ ಮತ್ತು ಸ್ಫೂರ್ತಿದಾಯಕವಾಗಿದ್ದು ಇಂದಿನ ಪೀಳಿಗೆಗೆ ಮಾದರಿಯಾಗಿದೆ ಎಂದು ದಲಿತ ಕಲಾ ಮಂಡಳಿಯ ಗದಗ ಜಿಲ್ಲಾ ಅಧ್ಯಕ್ಷರಾದ ಶರೀಫ್ ಬಿಳೆಯಲಿ ಅಭಿಪ್ರಾಯಪಟ್ಟರು.
ಅವರು ಗದುಗಿನ ಬಸವೇಶ್ವರ ನಗರದಲ್ಲಿರುವ ಕಬ್ಬಿಗರ ಕೂಟದ ಸಾಹಿತ್ಯ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಏರ್ಪಡಿಸಿದ ವಾರದ ಸಾಹಿತ್ಯ ಚಿಂತನ ಕಾರ್ಯಕ್ರಮದಲ್ಲಿ ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ಅವರ ಬದುಕು ಕುರಿತು ಉಪನ್ಯಾಸ ಮಾಡುತ್ತಾ, ಮಹಿಳೆಯರಿಗೆ ಶಿಕ್ಷಣ ಪಡೆಯಲಿಕ್ಕೆ ಸ್ವಾತಂತ್ರ್ಯವೇ ಇರದಂತ ಕಾಲಘಟ್ಟದಲ್ಲಿ ವ್ಯವಸ್ಥೆಯನ್ನು ವಿರೋಧಿಸಿ ಪತಿಯ ಸಹಾಯ, ಸಹಕಾರದಿಂದ ಅಭ್ಯಾಸ ಮಾಡಿ, ಶಿಕ್ಷಕಿಯಾಗಿ ಅಕ್ಷರ ಕಲಿಸಲು ತಯಾರಾದ ಸಾವಿತ್ರಿಬಾಯಿ ಫುಲೆಯವರಿಗೆ ಸಮಸ್ಯೆಗಳು, ಅವಮಾನಗಳು ಎದುರಾದರೂ ಕೂಡ ಅವೆಲ್ಲವುಗಳನ್ನು ಎದುರಿಸಿ ಎಲ್ಲ ವರ್ಗದ ಮಕ್ಕಳಿಗೆ ಅಕ್ಷರವನ್ನು ಹೇಳಿಕೊಡುತ್ತಾ ಗೆಲವು ಪಡೆದ ಅಕ್ಷರದವ್ವ ಸಾವಿತ್ರಿಬಾಯಿಯವರು ಇವತ್ತಿನ ಶಿಕ್ಷಕಿಯರಿಗೆ ಆದರ್ಶವಾಗಿರುತ್ತಾರೆ ಎಂದು ವಿವರಿಸಿದರು.
ಮುಖ್ಯ ಅತಿಥಿಗಳಾಗಿ ಗಜೇಂದ್ರಗಡದ ಇನ್ನರ್ವ್ಹಿಲ್ ಕ್ಲಬ್ನ ಅಧ್ಯಕ್ಷರು ಹಾಗೂ ಸಾವಿತ್ರಿಬಾಯಿ ಫುಲೆ ಪ್ರಶಸ್ತಿ ಪುರಸ್ಕೃತರಾದ ಮಂಜುಳಾ ರೇವಡಿಯವರು ಮಾತನಾಡಿ, ನಾನು ಸಾವಿತ್ರಿಬಾಯಿ ಫುಲೆಯವರ ಜೀವನ ವಿಧಾನದಿಂದ ಬಹಳಷ್ಟು ಕಲಿತಿದ್ದೇನೆ ಹಾಗೂ ಅವರಿಂದ ಪ್ರಭಾವಿತಳಾಗಿದ್ದೇನೆ. ಇವತ್ತಿನ ಮಹಿಳೆಯರು ಅವರ ಆದರ್ಶಗಳನ್ನು ಅನುಸರಿಸಿಕೊಂಡು ಜೀವನವನ್ನು ಸಾಗಿಸಬೇಕು. ಅವುಗಳನ್ನು ಸದುಪಯೋಗ ಪಡಿಸಿಕೊಂಡು ಮುಖ್ಯವಾಹಿನಿಗೆ ಬರುವಂತೆ ಮಹಿಳೆಯರಿಗೆ ಕರೆ ನೀಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದಶರ್ಿಗಳಾದ ಪ್ರಕಾಶ ಮಂಗಳೂರ ಮಾತನಾಡಿ, ಸಾವಿತ್ರಿಬಾಯಿ ಫುಲೆಯವರ ಶಿಕ್ಷಣದ ಮೇಲಿನ ಪ್ರೀತಿ, ಕಲಿಸುವ ಹಂಬಲ, ಅವರ ಜೀವನ ವಿಧಾನ, ದೀನ ದಲಿತರ ಸೇವೆ ನಮಗೆಲ್ಲರಿಗೂ ಆದರ್ಶಮಯ. ಈ ಸಂದರ್ಭದಲ್ಲಿ ಹಲವು ಘಟನೆಗಳನ್ನು ಸ್ಮರಿಸಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಇತ್ತೀಚೆಗೆ ಆದರ್ಶ ವ್ಯಕ್ತಿಗಳ, ದಾರ್ಶನಿಕರ, ನಾಡು-ನುಡಿಗಾಗಿ ಹೋರಾಡಿದ ವ್ಯಕ್ತಿಗಳ ಜೀವನ ಹಾಗೂ ಸಂದೇಶಗಳ ಬಗ್ಗೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಸಾಹಿತ್ಯಾಸಕ್ತರು ಕಾರ್ಯಕ್ರಮದಲ್ಲಿ ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ಪಾಲ್ಗೊಳ್ಳಲು ತಿಳಿಸಿದರು.
ಕಾರ್ಯಕ್ರಮದಲ್ಲಿ ಅ.ಓಂ. ಪಾಟೀಲ, ರತ್ನಕ್ಕ ಪಾಟೀಲ, ಬಸವರಾಜ ಈರಣ್ಣವರ, ಸಿ.ಕೆ. ಕೇಸರಿ, ಜೆ.ಎ. ಪಾಟೀಲ, ವಿ.ಪಿ. ಅರಳಿ, ಬಸವರಾಜ ವಾರಿ, ಕೆ.ವಿ. ಕುಂದಗೋಳ, ರಾಜಶೇಖರ ಕರಡಿ, ಡಾ. ರಾಮಚಂದ್ರ ಹಂಸನೂರ, ಮನೋಹರ ಮೇರವಾಡೆ, ಡಿ.ವಿ. ಬಡಿಗೇರ, ವಿ.ಎ. ಪವಾಡಿಗೌಡ್ರ, ಅಂದಾನಪ್ಪ ವಿಭೂತಿ, ಬಿ.ಎಫ್. ಪೂಜಾರ, ವಿ.ಆರ್. ಕುಲಕಣರ್ಿ, ರವಿರಾಜ ಪವಾರ, ವಾಯ್.ಎಚ್. ಹಡಪದ, ಪ್ರ.ತೋ. ನಾರಾಯಣಪೂರ, ಸಿ.ಎಂ. ಮಾರನಬಸರಿ, ಆಯ್.ಕೆ. ಕಮ್ಮಾರ, ಎಸ್.ಜಿ. ಚವಡಿ, ಎ.ಎಸ್. ಮಕಾನದಾರ, ಆನಂದ ಕಲ್ಮಠ, ರಮೇಶ ಕರಿಯಣ್ಣವರ ಮುಂತಾದವರು ಉಪಸ್ಥಿತರಿದ್ದರು.