ರಾಷ್ಟ್ರದ ಮೊದಲ ಮಹಿಳಾ ಶಿಕ್ಷಕಿ ಸಾವಿತ್ರಿಬಾಯಿ ಫುಲೆ: ಯೋಗಿ ರಾಜೇಂದ್ರ ಸದಾಶಿವ ಗುರೂಜಿ

Savitribai Phule, the nation's first woman teacher: Yogi Rajendra Sadashiva Guruji

ರಾಷ್ಟ್ರದ ಮೊದಲ ಮಹಿಳಾ ಶಿಕ್ಷಕಿ ಸಾವಿತ್ರಿಬಾಯಿ ಫುಲೆ: ಯೋಗಿ ರಾಜೇಂದ್ರ ಸದಾಶಿವ ಗುರೂಜಿ

ರನ್ನ ಬೆಳಗಲಿ 03 :  ಪಟ್ಟಣದ ಮುಧೋಳ ನಿಪ್ಪಾಣಿ ಹೆದ್ದಾರಿ ಮಾರ್ಗದಲ್ಲಿರುವ ಮಹಾತ್ಮ ಜ್ಯೋತಿಬಾ ಫುಲೆಯವರ ವೃತ್ತದಲ್ಲಿ ಶುಕ್ರವಾರ ದಂದು ಸ್ಥಳೀಯ ಮಾಳಿ ಸಮಾಜ ಸೇವಾ ಸಮಿತಿಯ ಆಶ್ರಯದಲ್ಲಿ "ಸಾವಿತ್ರಿಬಾಯಿ ಫುಲೆ"ಯವರ ಜಯಂತಿ ಕಾರ್ಯಕ್ರಮ ಜರಗಿತು.ಕಾರ್ಯಕ್ರಮ ಉದ್ಘಾಟಿಸಿದ ಯೋಗಿ ರಾಜೇಂದ್ರ ಸದಾಶಿವ ಗುರೂಜಿಯವರು ರಾಷ್ಟ್ರದ ಮೊದಲ ಮಹಿಳಾ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಕೇವಲ ಒಂದು ಜಾತಿಗೆ ಸೀಮಿತವಲ್ಲ ಅವರು ರಾಷ್ಟ್ರ ,ಅಂತರಾಷ್ಟ್ರ ಮಟ್ಟದ ಹೋರಾಟಗಾರರಲ್ಲಿ ಪ್ರಮುಖ ರಾಗಿದ್ದಾರೆ. ಬ್ರಿಟಿಷರ ಆಡಳಿತ ಅವಧಿಯಲ್ಲಿ, ಅನೇಕ ಕಂದಾಚಾರ,ಮೂಡನಂಬಿಕೆಗಳಲ್ಲಿ ನೆರಳುತ್ತಿದ್ದ ಕೆಳವರ್ಗದ ಸಮುದಾಯಗಳ ಉನ್ನತಿಗಾಗಿ ಶಿಕ್ಷಣವೇ ಮದ್ದು ಎಂಬುದನ್ನು ಅರಿತು. ಎಲ್ಲಾ ಶೋಷಣೆಯ ವರ್ಗಗಳ ಮಹಿಳೆಯರಿಗಾಗಿ ಮೊದಲ ಮಹಿಳಾ ಶಾಲೆ ಸ್ಥಾಪಿಸಿದ ಮಹಾಸಾಧಕಿ ಸಾವಿತ್ರಿಬಾಯಿ ಫುಲೆ ಸದಾಕಾಲವೂ ಅಮರ ಎಂದು ತಿಳಿಸಿದರು.ಸಮಾಜ ಮುಖಂಡರಾದ ಹಣಮಂತ ಇಟಾಣಿ, ಮಹಾದೇವ ಕುಲಗೋಡ, ಶ್ರೀಶೈಲ ಕುಲಗೋಡ, ಪರಮಾನಂದ ಮಾಳಿ,ನಿಂಗಪ್ಪ  ಅರೇನಾಡ, ಸಿದ್ದು ಮಾಳಿ, ರಾಮಣ್ಣ ಕುಲಗೋಡ, ಸದಾಶಿವ ಹೊಸಟ್ಟಿ, ರಾಮಲಿಂಗ ಯಾದವಾಡ, ಶ್ರೀಶೈಲ ಕಡಪಟ್ಟಿ, ಅಶೋಕ ಗರಗದ, ಹೊನ್ನಪ್ಪ ಹೊಸಟ್ಟಿ, ಕೃಷ್ಣ ಕಡಪಟ್ಟಿ, ಪ್ರಕಾಶ ಕಡಪಟ್ಟಿ, ಕಾಳಪ್ಪ ಅಮಾತಿ,  ಭೀಮಶಿ ಜಂಬಗಿ,ಮುತ್ತು ಕುಲಗೋಡ. ಸುರೇಶ  ಮಂಟೂರ ಮತ್ತು ವೆಂಕಪ್ಪ ಒಂಟಗೋಡಿ, ಪುಟ್ಟು ಕುಲಕರ್ಣಿ,ರಾಘವೇಂದ್ರ ನೀಲಣ್ಣವರ ಇನ್ನಿತರರು ಉಪಸ್ಥಿತರಿದ್ದರು.