ಸವಿತಾ ಸಮಾಜದಿಂದ ಹುಬ್ಬಳ್ಳಿ-ಧಾರವಾಡ ಪೊಲೀಸ್‌ರಿಗೆ ಸನ್ಮಾನ
Savita Samaj felicitates Hubli-Dharwad Police
ಗದಗ 01: ಜಿಲ್ಲಾದ್ಯಕ್ಷರಾದ ಕೃಷ್ಣಾ ಎಚ್ ಹಡಪದ ಅವರ ಮುಂದಾಳತ್ವದಲ್ಲಿ ಗದಗದಿಂದ ಹುಬ್ಬಳ್ಳಿಗೆ ಸವಿತಾ ಸಮಾಜದ ನಿಯೋಗವು ತೆರಳಿ ಹುಬ್ಬಳ್ಳಿಯಲ್ಲಿರುವ ಪೊಲೀಸ್ ಆಯುಕ್ತರ ಕಚೇರಿಗೆಯಲ್ಲಿ ಪೊಲೀಸ್ ಆಯುಕ್ತರಾದ ಶಶಿಕುಮಾರ್ ಸರ್ ಅವರನ್ನು ಬೇಟಿಯಾಗಿ ಅಭಿಮಾನದ ಮಾತುಗಳನ್ನಾಡಿ ಅವರಿಗೆ ಗದಗ ಜಿಲ್ಲಾ ಸವಿತಾ ಸಮಾಜದಿಂದ ಸಮಾಜದಿಂದ ಗೌರವಗಳೊಂದಿಗೆ ಸನ್ಮಾನಿಸಿ ಅಭಿನಂದಿಸಿ ಶುಭ ಕೊರಲಾಯಿತು.
ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರಾದ ಶಶಿಕುಮಾರ್ ಅವರು ಗದಗ ಜಿಲ್ಲಾ ಸವಿತಾ ಸಮಾಜದ ಸನ್ಮಾನ ಸ್ವೀಕರಿಸಿ ಮಾತನಾಡಿ, ಹುಬ್ಬಳ್ಳಿ-ಧಾರವಾಡ ನಗರದ ಮಹಾಜನತೆಯ ಹಿತಕಾಯುವಂತಹ ಸೇವೆ ನಮ್ಮ ಆದ್ಯ ಕರ್ತವ್ಯ ಮತ್ತು ಪ್ರತಿಯೊಬ್ಬರಲ್ಲೂ ಪರೋಪಕಾರ, ತ್ಯಾಗ ಮನೋಭಾವನೆ. ಸೌಹಾರ್ದತೆಯಿಂದ ಬದುಕುವ ಗುಣಗಳ ಅಗತ್ಯವಿದೆ. ಅದೇ ರೀತಿ ಸವಿತಾ ಸಮಾಜ ಆರ್ಥಿಕವಾಗಿ, ಸಾಮಾಜಿಕ, ಹಾಗೂ ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಬೇಕು. ಸಮಾಜದ ಪ್ರಗತಿಗೆ ಸದಾ ನನ್ನ ಸಹಕಾರ ಇರುತ್ತದೆ ಎಂದು ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರಾದ ಶಶಿಕುಮಾರ್ ಅವರು ಹೇಳಿದರು. ಗದಗ ಜಿಲ್ಲಾ ಸವಿತಾ ಸಮಾಜದ ಜಿಲ್ಲಾಧ್ಯಕ್ಷರಾದ ಕೃಷ್ಣಾ ಎಚ್.ಹಡಪದ ಪ್ರಸ್ತಾವಿಕವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಸವಿತಾ ಸಮಾಜದ ಹಿರಿಯ ಮುಖಂಡರಾದ ಹನಮಂತಪ್ಪ ರಾಂಪೂರ. ಪರಶುರಾಮ (ಬಜ್ಜು) ರಾಂಪೂರ. ಕೃಷ್ಣಾ ಬಾಯಲಗುಡ್ಡ. ಬಾಲರಾಜ ಕೊಟೇಕಲ್ಲ. ಪರಶುರಾಮ ಕೊಟೇಕಲ್ಲ. ಆಂಜನೈಯ್ಯ ಆದೋನಿ. ರಮೇಶ ರಾಂಪೂರ. ಸುರೇಶ ಬುದೂರ. ಹೇಮಂತ ವಡ್ಡೆಪಲ್ಲೆ. ಕೀರಣ ರಾಂಪೂರ. ಶ್ರೀನಿವಾಸ ಕೊಟೇಕಲ್ಲ. ಯುವ ಮುಖಂಡರಾದ ಅರೂಣ ರಾಂಪೂರ. ಪರಶುರಾಮ ಆದೋನಿ. ವೆಂಕಟೇಶ ಕೊಟೇಕಲ್ಲ. ಸಾಗರ ಹಡಪದ. ವಿನೋದ ಕಡಿಮೆಟ್ಲು. ವೆಂಕಟೇಶ ಆದೋನಿ. ಕಾರ್ತಿಕ ಆಗಲಾವೆ. ಸುದೀಪ ವಡ್ಡೆಪಲ್ಲೇ. ಸಂದೀಪ ಕೊಟೇಕಲ್ಲ. ಗಣೇಶ ಆಗಲಾವೆ. ಹಾಗೂ ಗದಗ ಜಿಲ್ಲಾ ಸವಿತಾ ಸಮಾಜದ ಪದಾಧಿಕಾರಿಗಳು ಗುರು-ಹಿರಿಯರು ಹಾಗೂ ಸುಮಾರು 50ಕ್ಕೂ ಹೆಚ್ಚು ಸಮಾಜ ಬಾಂದವರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 