ಸವಿತಾ ಮಹರ್ಷಿಗಳ ಕೊಡುಗೆ ಸಮಾಜಕ್ಕೆ ಅಪಾರ

ಗದಗ 01:  ಸಾಮವೇದದ ಬರಹಗಾರರಾದ ಶ್ರೀ  ಸವಿತಾ ಮಹರ್ಷಿಗಳ  ಕೊಡುಗೆ  ಸಮಾಜಕ್ಕೆ ಅಪಾರವಾಗಿದೆ ಎಂದು ಗದಗ  ಜಿಲ್ಲಾ ಪಂಚಾಯತ್ ಅಧ್ಯಕ್ಷ   ಸಿದ್ಧಲಿಂಗೇಶ್ವರ ಪಾಟೀಲ ತಿಳಿಸಿದರು.  

ಗದಗ ಜಿಲ್ಲಾಡಳಿತ ಭವನದ ಮುಖ್ಯ ಸಭಾಂಗಣದಲ್ಲಿಂದು  ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯುತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ    ಏರ್ಪಡಿಸಲಾಗಿದ್ದ  ಶ್ರೀ ಸವಿತಾ ಮಹರ್ಷಿ  ಜಯಂತಿ ಕಾರ್ಯಕ್ರಮದಲ್ಲಿ  ಶ್ರೀ  ಸವಿತಾ ಮಹಷರ್ಿ  ಭಾವಚಿತ್ರಕ್ಕೆ ಪುಷ್ಪನಮನ   ಸಲ್ಲಿಸಿ ಅವರು   ಮಾತನಾಡಿದರು.   

ಜಗತ್ತಿನಲ್ಲಿರುವ ಜನರನ್ನು ಸುಂದರರನ್ನಾಗಿ ಮಾಡುವುದು ಸವಿತಾ ಸಮಾಜದ ಕೆಲಸವಾಗಿದ್ದು,   ಸಮಾಜದವರು ಶಿಕ್ಷಣದಿಂದ ವಂಚಿತರಾಗದೇ ಆರ್ಥಿಕ ಅಭಿವೃದ್ಧಿಯತ್ತ ಗಮನಹರಿಸಬೇಕೆಂದು  ಸಿದ್ಧಲಿಂಗೇಶ್ವರ ಪಾಟೀಲ    ತಿಳಿಸಿದರು.

ಉಪನ್ಯಾಸಕರಾದ ಆನಂದ ಹಡಪದ  ಅವರು  ಮಾತನಾಡಿ ಸಾಮವೇದದ  ಬರಹಗಾರರೇ ಶ್ರೀ ಸವಿತಾ ಮಹಷರ್ಿಗಳು.  ಯಜ್ಞದ ಸಂದರ್ಭದಲ್ಲಿ  ಶಿವನನ್ನು  ಸುಂದರನನ್ನಾಗಿ ಮಾಡಿದ ಕೀರ್ತಿ  ಸವಿತಾ ಮಹರ್ಷಿಗೆ  ಸಲ್ಲುತ್ತದೆ.  ಜನರ ರೋಗ ರುಜಿನಗಳನ್ನು ಪರಿಹರಿಸಿ  ಜಗತ್ತಿನಲ್ಲಿರುವ ಜನರನ್ನು  ಸುಂದರರನ್ನಾಗಿ ಮಾಡುವುದು ಸವಿತಾ ಸಮಾಜದ ಕೆಲಸವಾಗಿದೆ.  ತಮ್ಮ ಕಾಯಕವನ್ನು ಪ್ರೀತಿಸಿ ಉತ್ತಮ ಸಮಾಜ ನಿಮರ್ಾಣ ಮಾಡುವಲ್ಲಿ ಮುಂದಾಗಬೇಕು  ಎಂದು  ಆನಂದ ಹಡಪದ ತಿಳಿಸಿದರು.  

ಸವಿತಾ ಸಮಾಜ ಹೊರ ತಂದ ಕ್ಯಾಲೆಂಡರನ್ನು ಈ ಸಂದರ್ಭದಲ್ಲಿ  ಬಿಡುಗಡೆ ಮಾಡಲಾಯಿತು. ಸಮಾರಂಭದಲ್ಲಿ  ಗದಗ ಜಿ.ಪಂ. ಉಪಾಧ್ಯಕ್ಷೆ  ಮಲ್ಲವ್ವ ಬಿಚ್ಚೂರ, ಗದಗ  ತಹಶೀಲ್ದಾರ  ಶ್ರೀನಿವಾಸ ಮೂತರ್ಿ ಕುಲಕರ್ಣಿ,  ಜ್ಯೋತಿಕುಮಾರ ರಾಯಚೂರ,   ದೀಪಕ ರಾಯಚೂರ, ಕೃಷ್ಣಾ ಹಡಪದ, ವಿಕಾಸ್ ಕ್ಷೀರಸಾಗರ, ಮಂಜು ಶಿರಹಟ್ಟಿ  ಸೇರಿದಂತೆ   ಸವಿತಾ ಸಮಾಜದ ಜಿಲ್ಲಾ , ತಾಲೂಕು, ಶಹರ ಘಟಕಗಳ ಅದ್ಯಕ್ಷರುಗಳು, ಉಪಾಧ್ಯಕ್ಷರು, ಕಾರ್ಯದರ್ಶಿಗಳು, ಪದಾಧಿಕಾರಿಗಳು, ಗುರು ಹಿರಿಯರು, ವಿವಿಧ ಇಲಾಖೆಯ ಅಧಿಕಾರಿಗಳು   ಉಪಸ್ಥಿತರಿದ್ದರು.  

ವೆಂಕಟೇಶ ಆಲ್ಕೋಡ ನಾಡಗೀತೆ ಪ್ರಸ್ತುತಪಡಿಸಿದರು.  ಕನ್ನಡ  ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ವೀರಯ್ಯಸ್ವಾಮಿ ಬಿ ಸರ್ವರನ್ನು ಸ್ವಾಗತಿಸಿ ವಂದಿಸಿದರು. ರಾಮಣ್ಣ ರಾಮಪೂರ್ ಪ್ರಾಸ್ತಾವಿಕವಾಗಿ ಮಾತನಾಡಿದರು.   ಜ್ಯೋತಿ ಹೇರಲಗಿ    ಕಾರ್ಯಕ್ರಮ ನಿರೂಪಿಸಿದರು.