ಸರಕಾರಿ ಶಾಲೆ ಉಳಿಸಿ ಬೆಳೆಸಿ: ಬಾಲಚಂದ್ರ ಜಾರಕಿಹೋಳಿ
Save and develop government schools: Balachandra Jarkiholi
ಲೋಕದರ್ಶನ ವರದಿ
ಗುರ್ಲಾಪೂರ 09: ಸ್ಥಳೀಯ ಪಿಎಮ್ ಶಾಸಕರ ಶಾಲೆಗೆ ಬಾಲಚಂದ್ರ ಜಾರಕಿಹೊಳಿಯವರು ಸನ್ 2026-27 ನೇಯ ಸಾಲಿನ ದಾಖಲಾತಿ ಅಂದೋಲನಕ್ಕೆ ಚಾಲನೆ ನೀಡಿ, ಸರಕಾರಿ ಶಾಲೆ ಉಳಿಸಿ ಬೆಳೆಸಿ ಎಂದು ಕರೆ ನೀಡಿದರು.
ಬುಧವಾರ ದಿ. 8 ಎಪ್ರೀಲ್ 2026 ರಂದು ಗುರ್ಲಾಪೂರ ಪಿಎಮ್ ಶಾಸಕರ ಶಾಲೆಗೆ ಭೇಟಿ ನೀಡಿದರು. ನಂತರ ಪದವಿದರ ಮುಖ್ಯೋಪಾಧ್ಯಾಯರಾದ, ಗೋಪಾಲ ಪತ್ತಾರ, ಶಾಲಾ ಮುಖ್ಯೋಪಾಧ್ಯಾಯರಾದ ಬಸವರಾಜ ಸಸಾಲಟ್ಟಿಯವರೊಂದಿಗೆ ಮಾತನಾಡುತ್ತಾ. ಶಾಲೆಯ ಮಕ್ಕಳಿಗೆ ಯಾವುದೇ ತರಹನಾದ ಅನಾನುಕೂಲತೆ ಆಗಬಾರದು, ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡಿ ಮಾದರಿ ಶಾಲೆಯನ್ನಾಗಿ ಮಾಡಿರಿ ಎಂದರು.
ಶಾಲೆಯ ಕಾರ್ಯಕ್ರಮದಲ್ಲಿ ಎಸ್‌ಡಿಎಮ್‌ಸಿ ಅಧ್ಯಕ್ಷರಾದ ಎಲ್ ಪಿ ನೇಮಗೌಡರ, ಸಿದ್ದು ಗಡ್ಡೇಕಾರ, ಪ್ರಕಾಶ ಮುಗಳಖೋಡ, ಮರೆಪ್ಪಗೋಳ ಲಕ್ಷ್ಮಣಗೌರಾಣಿ , ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಎಡ್ವಿ ನರಸನ್ನವರ, ಎಲ್ ಆರ್ಸಾಲಿಮಠ, ಸುನೀಲ ತುಪ್ಪದ, ಶಿವಾನಂದ ಹಳ್ಳೂರ, ಮಹಾದೆವ ಮರಾಠೆ, ಪಿ,ಕೆ,ಪಿ,ಎಸ್ ಸೋಸಾಯಿಟಿಯ ಅಧ್ಯಕ್ಷರಾದ ಎಸ್.ಜಿ.ಹಂಚಿನಾಳ ಹಾಜರಿದ್ದರು.
ಶಾಲಾ ಮುಖ್ಯೋಪಾಧ್ಯಾಯರಾದ ಬಸವರಾಜ ಸಸಾಲಟ್ಟಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 