ಸಾವಳಗಿ ಪೋಲಿಸರ ಭರ್ಜರಿ ಬೇಟೆ: 11 ಮೋಟರ್ ಬೈಕ್ ಕದ್ದ ಕಳ್ಳನ ಬಂಧನ
Savalgi police have succeeded in arresting the thief who had stolen 11 two-wheelers
ಜಮಖಂಡಿ 11: ತಾಲ್ಲೂಕಿನ ಸಾವಳಗಿ ಪೋಲಿಸರು ಭರ್ಜರಿ ಬೇಟೆಯಾಡಿ 11 ಮೋಟರ್ ಬೈಕ್ ಕಳ್ಳತನ ಮಾಡಿದ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸಾವಳಗಿ ವ್ಯಾಪ್ತಿಯ ಹಿರೇಪಡಸಲಗಿ ಗ್ರಾಮದ ಪರಸಪ್ಪ ನಾಗಪ್ಪ ಮೋರೆ ಸುಮಾರು 5 ಲಕ್ಷ 50 ಸಾವಿರ ರೂ,ಗಳ ಬೆಲೆ ಬಾಳುವ 11 ಮೋಟರ್ ಬೈಕ್‌ಗಳನ್ನು ಕಳ್ಳತನ ಮಾಡಿದ ಆರೋಪಿಯನ್ನು ಭರ್ಜರಿ ಭೇಟಿಯಾಡಿ ಬಂಧಿಸಿದ್ದಾರೆ.
ಅಥಣಿ ತಾಲೂಕಿನ ಸುಟ್ಟಟ್ಟಿ ಗ್ರಾಮದ ಹನಮಂತ ಸಿದ್ದಪ್ಪ ಕೊಳಂಬೆ, ಸುನೀಲ ಗಾಡಿವಡ್ಡರ, ಪರಶುರಾಮ ಸನದಿ ಮೂರು ಆರೋಪಿಗಳು ಸೇರಿಕೊಂಡು ಎರಡು ಮೋಟರ್ ಪಂಪಸೆಟ್‌ಗಳು ಹಾಗೂ ಮೂರು ಹೋತಗಳನ್ನು ಕಳ್ಳತನ ಮಾಡಿದ್ದು. ಎರಡು ಮೋಟರ್ ಪಂಪಸೆಟ್‌ಗಳ ಅಂದಾಜು ಬೆಲೆ 35 ಸಾವಿರ, ಹಾಗೂ ಮೂರು ಹೋತಗಳನ್ನು ಮಾರಾಟ ಮಾಡಿದ ನಗದು ಹಣ 25 ಸಾವಿರ ರೂ.ಗಳನ್ನು ವಶಪಡಿಸಿಕೊಂಡಿದ್ದಾರೆ.
11 ಮೋಟರ್ ಬೈಕ್‌ಗಳು ಹಾಗೂ ಎರಡು ಮೋಟರ್ ಪಂಪಸೆಟ್‌ಗಳು. ಮೂರು ಹೋತಗಳ ಒಟ್ಟು ಬೆಲೆ 6 ಲಕ್ಷ ಮೌಲ್ಯದ ವಸ್ತುಗಳನ್ನು ಹಾಗೂ ನಗದು ಹಣವನ್ನು ವಶಕ್ಕೆ ಪಡೆದುಕೊಂಡು ತನಿಖೆಯನ್ನು ಮುಂದುವರಿಸಿದ್ದಾರೆ.
ಜಿಲ್ಲಾ ಎಸ್‌ಪಿ, ಅಮರನಾಥ ರೆಡ್ಡಿ, ಹೆಚ್ಚುವರಿ ಎಸ್‌ಪಿಗಳಾದ ಪ್ರಸನ್‌ಕುಮಾರ ದೇಸಾಯಿ, ಮಹಾಂತೇಶ್ವರ ಜಿದ್ದಿ, ಜಮಖಂಡಿ ಡಿಎಸ್‌ಪಿ ಎಸ್,ರೋಷನ್ ಜಮೀರ, ಸಿಪಿಐ ಮಲ್ಲಪ್ಪ ಮಡ್ಡಿ ಅವರ ಮಾರ್ಗದರ್ಶನದಲ್ಲಿ ಸಾವಳಗಿ ಪೋಲಿಸ್ ಠಾಣೆಯ ಪಿಎಸ್‌ಐ, ಅಣ್ಣಪ್ಪ ಐಗಳಿ, ಕ್ರೈಂ ಪಿಎಸ್‌ಐ ನಾಗೇಶ ವಾಲಿಕಾರ, ಎಎಸ್‌ಐಗಳಾದ ಎಸ್.ಬಿ. ಕೆಂಗಲಗುತ್ತಿ, ಬಿ.ಬಿ. ಯಡವೆ ರಾಮಚಂದ್ರ ಕೋಳಿ, ಸಿಬ್ಬಂದಿಗಳಾದ ಎಸ್.ಎಸ್. ಉತ್ತನಾಳ, ಐ,ಎ, ನಧಾಪ, ಶಿವಾನಂದ ಬಜಂತ್ರಿ, ಭೀಮಪ್ಪ ಹೊಸಮನಿ, ಸುರೇಶ ಹುಚ್ಚಗೌಡರ, ಶ್ರೀಶೈಲ ಜಂಬಗಿ, ಸ್ವಪನೀಲ ಮಚಗಾರ, ಮೈಬೂಬ ಮುಲ್ಲಾ ಎಲ್ಲರೂ ಕಾರ್ಯಾಚರಣೆಯಲ್ಲಿ ಪಾಲ್ಗೊಂಡು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 