ಪ್ಯಾಲೆಸ್ತೀನ್ ನಾಯಕರೊಂದಿಗೆ ಸೌದಿ ದೊರೆ ಸಲ್ಮಾನ್ ಮಾತುಕತೆ

ದೋಹ, ಅ.17:     ಪ್ಯಾಲೆಸ್ತೀನ್ ಅಧ್ಯಕ್ಷ ಮಹ್ಮೂದ್ ಅಬ್ಬಾಸ್ ಅವರನ್ನು ಸೌದಿ ದೊರೆ ಸಲ್ಮಾನ್ ಬಿನ್ ಅಬ್ದುಲ್ ಅಜೀಜ್ ಬರಮಾಡಿಕೊಂಡರು. ಬಳಿಕ ನಡೆದ ಸಭೆಯಲ್ಲಿ ಪ್ಯಾಲೆಸ್ತೀನ್ಗೆ ಎಲ್ಲಾ ರೀತಿಯ ಬೆಂಬಲವನ್ನು ಸೌದಿ ದೊರೆ ಪುನರುಚ್ಚರಿಸಿದರು ಎಂದು ಸೌದಿ ವಿದೇಶಾಂಗ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. ರಾಜ ಸಲ್ಮಾನ್ ಬಿನ್ ಅಬ್ದುಲ್ ಅಜೀಜ್ ಅವರು ಪ್ಯಾಲೆಸ್ತೀನ್ ಜೊತೆಗೆ ತಮ್ಮ ದೇಶದ ನಿಲುವು ಮತ್ತು ಪೂರ್ವ ಜೆರುಸಲೆಮ್ ಅನ್ನು ತನ್ನ ರಾಜಧಾನಿಯಾಗಿ ಸ್ವತಂತ್ರ ರಾಜ್ಯವನ್ನು ಸ್ಥಾಪಿಸುವ ತನ್ನ ಸಹೋದರ ಜನರ ಹಕ್ಕುಗಳನ್ನು ಪುನರುಚ್ಚರಿಸಿದ್ದಾರೆ ಎಂದು ಸಚಿವಾಲಯ ಬುಧವಾರ ಟ್ವೀಟ್ ಮಾಡಿದ್ದಾರೆ. ಬೆಂಬಲಕ್ಕಾಗಿ ಅಬ್ಬಾಸ್ ಅವರು ಸೌದಿ ರಾಜನಿಗೆ ಧನ್ಯವಾದ ಅರ್ಪಿಸಿದ್ದಾರೆ. ಮಾತ್ರವಲ್ಲ ಸೌದಿ ತೈಲ ಸೌಲಭ್ಯಗಳ ಮೇಲೆ ಇತ್ತೀಚೆಗೆ ನಡೆದ ದಾಳಿಯನ್ನು ಖಂಡಿಸಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಸರ್ಕಾರಿ ಸ್ವಾಮ್ಯದ ಇಂಧನ ಕಂಪನಿ ಸೌದಿ ಅರಾಮ್ಕೊಗೆ ಸೇರಿದ ತೈಲ ಸೌಲಭ್ಯಗಳ ಮೇಲೆ ಸೆಪ್ಟೆಂಬರ್ ಮಧ್ಯಭಾಗದಲ್ಲಿ ದಾಳಿ ನಡೆಸಲಾಗಿದೆ. ಇದರ ಪರಿಣಾಮವಾಗಿ ದೇಶದ ತೈಲ ಉತ್ಪಾದನೆಯಲ್ಲಿ ತಾತ್ಕಾಲಿಕ ತೀವ್ರ ಇಳಿಕೆ ಕಂಡುಬಂದಿದೆ. ಯೆಮನ್ ಬಂಡಾಯಗಾರರಾದ ಹೌತಿ ಉಗ್ರರು ಈ ದಾಳಿಯ ಹೊಣೆಯನ್ನು ಹೊತ್ತುಕೊಂಡಿದ್ದಾರೆ. ಟೆಹ್ರಾನ್ ಆರೋಪಗಳನ್ನು ನಿರಾಕರಿಸಿರೂ ಸೌದಿ ಅರೇಬಿಯಾ ಅದನ್ನು ಇರಾನ್ ಮೇಲೆ ಹೊರಿಸಿದೆ.