ಸತ್ಸಂಗ ಮಾನಸಿಕ ವಿಟಮಿನ ಇದ್ದಂತೆ: ಶ್ರೀಗಳು
Satsang is like mental vitamins: Sri
ಜಮಖಂಡಿ 25: ನಾನು, ನನ್ನದು ಎಂಬ ವ್ಯಾಮೋಹ ಯಾರನ್ನೂ ಬಿಟ್ಟಿಲ್ಲ. ಆದರೆ, ಶರೀರ, ಇಂದ್ರಿಯಗಳು, ಮನಸಾದಿಗಳು ನಾನಲ್ಲ ಎಂಬ ಭಾವ ಮೂಡಿದರೆ ವ್ಯಾಮೋಹ ನಿವಾರಣೆಯಾಗುತ್ತದೆ. ಸತ್ಸಂಗ ನಿರ್ಮೋಹಿಗಳಾಗಲು ಸಾಧ್ಯ. ಸತ್ಸಂಗ ಮಾನಸಿಕ ವಿಟಮಿನವಿದ್ದಂತೆ. ಸತ್ಸಂಗದಿಂದ ಜೀವನದ ಬಂಧನಗಳಿಂದ ಮುಕ್ತರಾಗಬಹುದು ಎಂದು ಶಿರೋಳ ರಾಮಾರೂಢ ಮಠದ ಶಂಕರಾರೂಢ ಮಹಾಸ್ವಾಮಿಗಳು ಹೇಳಿದರು.
ತಾಲ್ಲೂಕಿನ ಹುಲ್ಯಾಳ ಗ್ರಾಮದ ಶ್ರೀಗುರುದೇವಾಶ್ರಮದ ಶ್ರೀಗುರುದೇವ ಸತ್ಸಂಗ ಬಳಗದ ಆಶ್ರಯದಲ್ಲಿ ನಡೆದ ಶ್ರೀಗುರುದೇವ ಸತ್ಸಂಗ ಕಾರ್ಯಕ್ರಮದ ಪಾವನ ಸಾನ್ನಿಧ್ಯ ವಹಿಸಿ ಮೋಹಿತನಾದ ಜೀವನದ ಬಿಡುಗಡೆ ಹೇಗೆ?’ ಎಂಬ ವಿಷಯ ಕುರಿತು ಅವರು ಅನುಭಾವ ನೀಡಿದರು.
ಬರುವಾಗ ಏನೂ ತಂದಿಲ್ಲ, ಹೋಗುವಾಗ ಏನೂ ಒಯ್ಯುವುದಿಲ್ಲ ಎಂಬ ಭಾವ ಮೂಡಿದರೆ ನಿರ್ಮೋಹಿಗಳಾಗಬಹುದು. ಅದಕ್ಕೆ ಜಪ-ತಪ, ಪೂಜೆ-ಪುನಸ್ಕಾರ ಮಾಡಿ ಅಂತಃಕರಣ ಸ್ವಚ್ಛ ಮಾಡಿಕೊಳ್ಳಬೇಕು. ಗುರುಗಳ ಹತ್ತಿರ ಹೋಗಿ ಬಂಧನದಿಂದ ಹೇಗೆ ಮುಕ್ತರಾಗುವುದು ಎಂದು ಕೇಳಿದರೆ ಉಪದೇಶಾಮೃತ ಕರುಣಿಸುತ್ತಾರೆ ಎಂದರು.
ಶ್ರೀಗುರುದೇವಾಶ್ರಮದ ಹರ್ಷಾನಂದ ಮಹಾಸ್ವಾಮಿಗಳು ನೇತೃತ್ವ ವಹಿಸಿ ಮಾತನಾಡಿ, ಜೀವನದಲ್ಲಿ ಅತ್ತೆ, ಸೊಸೆ, ಗಂಡ, ಹೆಂಡತಿ ಇತ್ಯಾದಿ ಮೋಹದ ಮುಖವಾಡ ಧರಿಸಿ ಪಾತ್ರ ಮಾಡಿದ್ದರೂ, ಪಾತ್ರ ನನ್ನದಲ್ಲ ಎನ್ನುವ ಭಾವ ಇರಬೇಕು. ನಾನು ಆತ್ಮಸ್ವರೂಪಿ, ಬ್ರಹ್ಮಸ್ವರೂಪಿ, ಶಿವಸ್ವರೂಪಿ ಇದ್ದೇನೆ. ಯಾವುದಕ್ಕೂ ಅಂಟಿಕೊಂಡಿಲ್ಲ ಎಂಬ ಭಾವನೆಯಿಂದ ಮೋಹ ತನ್ನಿಂದ ತಾನೆ ಕಳಚುತ್ತದೆ ಎಂದು ಆಶೀರ್ವಚನ ನೀಡಿದರು.
ಶ್ರೀಗುರುದೇವ ಸತ್ಸಂಗ ಮಾಸಿಕ ಕಾರ್ಯಕ್ರಮದ ಮಹಾಪ್ರಸಾದದ ವ್ಯವಸ್ಥೆ ಮಾಡಿದ್ದ ಡಾ.ಟಿ.ಪಿ. ಗಿರಡ್ಡಿ- ಗಿರಡ್ಡಿ ದಂಪತಿಯನ್ನು ಶ್ರೀಮಠದ ಪರವಾಗಿ ಸನ್ಮಾನಿಸಲಾಯಿತು. ಶ್ರೀಗುರುದೇವ ಸಂಗೀತ ಬಳಗದ ಕಲಾವಿದರಾದ ಗುರುಬಸುಗೌಡ ಪಾಟೀಲ, ರಾಮಚಂದ್ರ ಹೂಗಾರ, ಶಿವಾನಂದ ಬಾಡನವರ, ಪರಮೇಶ್ವರ ತೇಲಿ, ಸಿದ್ದು ಉಪ್ಪಲದಿನ್ನಿ ಸಂಗೀತ ಸೇವೆ ಸಲ್ಲಿಸಿದರು. ಪುಂಡಲೀಕ ಭಜಂತ್ರಿ ಕ್ಲ್ಯಾರಿನೇಟ್ ನುಡಿಸಿದರು. ಬಿ.ಬಿ. ಮೆಳ್ಳಿಗೇರಿ ಅನುಭಾವ ಗೀತೆ ಹಾಡಿದರು. ಪ್ರತೀಕ್ಷಾ, ಆರಾದ್ಯ ವಚನ ಪ್ರಾರ್ಥನೆ ಗೀತೆ ಹೇಳಿದರು. ಪ್ರಾಚಾರ್ಯ ಡಾ.ಟಿ.ಪಿ. ಗಿರಡ್ಡಿ ಸ್ವಾಗತಿಸಿ, ಅತಿಥಿಗನ್ನು ಪರಿಚಯಿಸಿದರು. ಸಂಗಮೇಶ ತೆಲಸಂಗ ನಿರೂಪಿಸಿದರು.
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು 