ಯಮಕನಮರಡಿ 26: ಗ್ರಾಮೀಣ ಮಟ್ಟದಲ್ಲಿರುವ ಸೂಕ್ತ ಪ್ರತಿಭೆಗಳನ್ನು ಹುಡುಕಿ ಸೂಕ್ತ ವೇದಿಕೆ ಕಲ್ಪಿಸಿ ಪರಿಚಯಿಸಲಿಕ್ಕೆ ತಂದೆ ಸಚಿವರಾದ ಸತೀಶ ಜಾರಕಿಹೋಳಿ ನಾವು ಚಿಕ್ಕವರಿದ್ದಾಗ ಗೋಕಾಕದಲ್ಲಿ ಸತೀಶ ಪ್ರತಿಭಾ ಪುರಸ್ಕಾರ ಆಯೋಜಿಸಿದ್ದರು ಎಂದು ಚಿಕ್ಕೋಡಿ ಸಂಸದೆ ಪ್ರಿಯಾಂಕ ಜಾರಕಿಹೊಳಿ ಹೇಳಿದರು.
ಅವರು ಸ್ಥಳಿಯ ಎನ್ ಎಸ್ ಎಪ್ ಶಾಲಾ ಆವರಣದಲ್ಲಿ ಆಯೋಜಿಸಲಾಗಿದ್ದ 11ನೇ ಸತೀಶ ಪ್ರತಿಭಾ ಪುರಸ್ಕಾರ ಸಮಾರೋಪದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗಡಿಭಾಗದ ಪ್ರತಿಭಾವಂತರಿಗೂ ಸೂಕ್ತ ವೇದಿಕೆ ಕಲ್ಪಿಸಿಕೊಡಲು ಮುಂಬರುವ ದಿನಗಳಲ್ಲಿ ಅಲ್ಲಿಯೂ ಕೂಡ ಸತೀಶ ಪ್ರತಿಭಾ ಪುರಸ್ಕಾರ ಅವಾರ್ಡ ಆರಂಭಿಸಲು ಚಿಂತನೆ ನಡೆದಿದೆ. ವಿದ್ಯಾರ್ಥಿಗಳ ಕಲೆಗಳಿಗೆ ಪ್ರೋತ್ಸಾಹ ನೀಡಿ ಉನ್ನತ ಮಟ್ಟಕ್ಕೆ ಬೆಳೆಸುವುದೇ ನಮ್ಮ ತಂದೆಯವರ ಆಶಯವಾಗಿದೆ ಎಂದು ಹೆಳಿದರು.
ಹತ್ತರಗಿ ಹರಿಮಂದಿರದ ಪೂಜ್ಯರಾದ ಡಾ. ಆನಂದ ಮಹಾರಜ ಗೋಸಾವಿ ಇವರು ಎಸ್ ಎಸ್ ಎಲ್ ಸಿ ಪರಿಕ್ಷೇಯಲ್ಲಿ ಹೆಚ್ಚು ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ನಿಡಿ ಮಾತನಾಡುತ್ತಾ ಸತೀಶ ಜಾರಕಿಹೋಳಿ ಯವರು ಕೆವಲ ಮನರಂಜನೆಗಾಗಿ ಈ ವೇದಿಕೆಯನ್ನು ಕಲ್ಪಿಸಿಲ್ಲ ವಿದ್ಯಾರ್ಥಿಗಳಲ್ಲಿ ಹುದುಗಿರುವ ಪ್ರತಿಭೆಯನ್ನು ಗುರಿತಿಸಿ ರಾಷ್ಟ್ರ ಮಟ್ಟಕ್ಕೆ ಪರಿಚಯಿಸುವ ಕಾರ್ಯ ನಿಜಕ್ಕೂ ಶ್ಲಾಘನೀಯ ವಾದದ್ದು ಅವರಲ್ಲಿರುವ ಶೆಕ್ಷಣಿಕ ಕಾಳಜಿ ಸರ್ವರಿಗೂ ಮಾದರಿಯಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಹತ್ತರಗಿ ಕಾರಿ ಮಠದ ಪೂಜ್ಯರಾದ ಗುರುಸಿದ್ದೇಶ್ವರ ಮಹಾಸ್ವಾಮಿಗಳು ವಹಿಸಿ ಆಶೀರ್ವಚನ ನಿಡಿದರು. ಈ ಸಂದರ್ಭದಲ್ಲಿ ಯುವಧುರೀಣ ರಾಹುಲ ಜಾರಕಿಹೊಳಿ, ಬೆಳಗಾವಿ ಶಿಕ್ಷಣ ಇಲಾಖೆ ಉಪನಿರ್ದೇಶಕರು ಲೀಲಾವತಿ ಹಿರೆಮಠ, ಹುಕ್ಕೇರಿ ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಭಾವತಿ ಪಾಟೀಲ, ಕಿರಣಸಿಂಗ್ ರಜಪೂತ್,ರವಿಂದ್ರ ಜಿಂಡ್ರಾಳಿ, ರಿಯಾಜ ಚೌಗಲಾ, ಸತೀಶ ಹಟ್ಟಿಹೋಳಿ, ಸುರೇಶ ಜೋರಾಪುರ, ಈರಣ್ಣ ಬಿಸಿರೋಟ್ಟಿ, ಜಂಗ್ಲಿ ಸಾಹೇಬ ನಾಯಿಕ, ಶಶಿಕಾಂತ ಹಟ್ಟಿ ಮುಂತಾದವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಡಾ. ಅನಿಲ ನಂಜನ್ನವರ, ಶಿವಾಜಿ ಕಳವಿಕಟ್ಟಿ, ಬರಮಾ ದುಪ್ಪದಾಳಿ ಕೃಷಿ ಕ್ಷೇತ್ರ, ಶಿಕ್ಷಕ ಅಡಿವೆಪ್ಪಾ ನಾಯಿಕಸಾಮಾಜಿಕ ಕ್ಷೇತ್ರ. ಪ್ರಜ್ವಲ್ ಕುಮಾರ ತಳವಾರ ಕ್ರೀಡಾ. ರೂಪಾ ಕಡಗಾವಿ ಸಂಗೀತ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. ಎ ಜೆ ಕೋಳಿ ಕಾರ್ಯಕ್ರಮವನ್ನು ನಿರೂಪಿಸಿದರು.