'ಮಕ್ಕಳ ಮನಸ್ಸಿನಲ್ಲಿ ನಾಯಕನಾಗಿ ಬೆಳೆಯುವ ಶಕ್ತಿ ಸತೀಶರಲ್ಲಿದೆ'

ಲೋಕದರ್ಶನ ವರದಿ

ಯಮಕನಮರಡಿ 15: ಸಾಂಸ್ಕೃತಿಕ ರಾಯಭಾರಿಯಾದ ಸತೀಶ ಜಾರಕಿಹೊಳಿ ಯವರಲ್ಲಿದೆ ಅವರ ನೇರನುಡಿ ದೂರ ದೃಷ್ಟಿಯಿಂದ ಎಲ್ಲವನ್ನು ಸಾಕಾರಗೊಳಿಸುವ ಶಕ್ತಿ ಅವರಿಗೆ ಆಜ್ಞೆಗೂ-ಪ್ರೊತ್ಸಾಹಕ್ಕೂ ವ್ಯತ್ಯಾಸವನ್ನು ತಿಳಿಸಿ ಏಕಾಗ್ರತೆಯಿಂದ ಹಲವಾರು ಕಾರ್ಯಗಳನ್ನು ಯಶಸ್ವಿಯಾಗಿಸುವುದರೊಂದಿಗೆ ಜನಪದ, ಗಾಯನ ನೃತ್ಯ ಭಾಷಣ, ಕ್ರೀಡೆ, ಗಳನ್ನು ಉಳಿಸಿ ಬೆಳೆಸುವ ದಿಸೆಯಲ್ಲಿ ಸತೀಶ ಪ್ರತಿಭಾ ಪುರಸ್ಕಾರದಂತಹ ವೇದಿಕೆಯನ್ನು ಗ್ರಾಮೀಣ ಮಕ್ಕಳಿಗೆ ಕಲ್ಪಿಸಿರುವ ಕಾರ್ಯ ಸ್ತುತ್ಯಾರ್ಹ ಎಂದು ಹುಕ್ಕೇರಿಯ ಹೀರೆಮಠದ ಶ್ರೀಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು,

ಅವರು ಶನಿವಾರ ದಿ, 14 ರಂದು ಎನ್, ಎಸ್,ಎಫ್, ಫ್ರೌಢಶಾಲೆ [ಹತ್ತರಗಿ] ಯಮಕನಮರಡಿಯಲ್ಲಿ  ನಡೆದ 9 ನೇಯ ಸತೀಶ ಪ್ರತಿಭಾ ಪುರಸ್ಕಾರ ಉದ್ಘಾಟನಾ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಮಾತನಾಡುತ್ತ ಶಿಸ್ತಿನಿಂದ ಕೂಡಿದ ಈ ವೇದಿಕೆ ಮಸ್ತಾಗಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು. 

        ಸುಕ್ಷೇತ್ರ ಹತ್ತರಗಿಯ ಕಾರಿಮಠದ ಶ್ರೀ ಗುರುಸಿದ್ದೇಶ್ವರ ಮಹಾಸ್ವಾಮಿಗಳು ಆಶಿರ್ವಚನ ನೀಡಿದರು ಕು. ಶ್ವೇತಾ ಇನಾಮದಾರ ಹಾಗೂ ಕು. ಶ್ರೇಯಾ ಜನಾಜ, ಕಾರ್ಯಕ್ರಮವನ್ನು ದೀಪ ಬೆಳಗಿಸುವುದರೊಂದಿಗೆ ಉದ್ಘಾಟಿಸಿದರು.

ವೇದಿಕೆಯಲ್ಲಿ ಸಂಘಟಕರಾದ ಎಸ್,ಎ, ರಾಮಗಾನಟ್ಟಿ, ಚಿಕ್ಕೋಡಿಯ ಉಪನಿದರ್ೇಶಕರಾದ ಮೊಹನ ಹಂಚ್ಯಾಟೆ, ಕ್ಷೇತ್ರ ಶಿಕ್ಷಣಾಧೀಕಾರಿಗಳಾದ ಮೋಹನ ದಂಡಿನ,  ತಾ,ಪಂ, ಅಧ್ಯಕ್ಷ  ದಸ್ತಗೀರ ಬಸ್ಸಾಪೂರೆ, ಯಮಕನಮರಡಿ ಗ್ರಾ,ಪಂ, ಅಧ್ಯಕ್ಷೆ ಅವ್ವಕ್ಕಾ ಮಾದರ, ಹತ್ತರಗಿಯ ಗ್ರಾ,ಪಂ,ಅಧ್ಯಕ್ಷ ಮಹಾದೇವ ಪಟೋಳಿ, ತಾಪಂ,ಸದಸ್ಯೆ ಶ್ರೀಮತಿ ಸುನಿತಾ ಬಿಸಿರೊಟ್ಟಿ, ಎಸ್,ಎಸ್,ಅತ್ಯಾಳಿ, ಆರ್,ಬಿ,ರಣಮಲ್ಲೆ, ವೇದಿಕೆಯಲ್ಲಿದ್ದರು, ಸಮಾರಂಭಕ್ಕೆ ಎ,ಜಿ ಕೋಳಿ, ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು .